'ಲಿಯೋ' 1,000 ಕೋಟಿ ರೂ. ಮೈಲಿಗಲ್ಲು ತಲುಪಲ್ಲ; ಶಾಕಿಂಗ್​ ಹೇಳಿಕೆ ಕೊಟ್ಟ ನಿರ್ಮಾಪಕ!

Untitled design - 2023-10-21T170631.935
Published on

ತಮಿಳುನಾಡು: ತಮಿಳು ನಟ ದಳಪತಿ ವಿಜಯ್​ ಮತ್ತು ನಟಿ ತ್ರಿಶಾ ಕೃಷ್ಣನ್ ಅಭಿನಯದ ಬಹುನಿರೀಕ್ಷಿತ 'ಲಿಯೋ' ಅಕ್ಟೋಬರ್​ 19 ರಂದು ಬಹುತೇಕ ಚಿತ್ರಮಂದಿಗಳಲ್ಲಿ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆ ಗಳಿಸುವುದರ ಜತೆಗೆ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಸದ್ಯ ಬಾಕ್ಸ್​ ಆಫೀಸ್​ ಲೂಟಿ ಮಾಡಲಿದೆ ಎಂದು ಹೇಳಲಾದ ಚಿತ್ರದ ಕುರಿತು ನಿರ್ಮಾಪಕರು ಕೊಟ್ಟ ಹೇಳಿಕೆ ಇದೀಗ ಅಭಿಮಾನಿಗಳನ್ನು ಕೊಂಚ ನಿರಾಸೆಗೆ ದೂಡಿದೆ.

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ 'ಜವಾನ್' ಮತ್ತು 'ಪಠಾಣ್'​ ಚಿತ್ರಗಳು ಒಂದೇ ವರ್ಷದಲ್ಲಿ 1,000 ಕೋಟಿ ರೂ. ಮೈಲಿಗಲ್ಲು ದಾಟುವ ಮೂಲಕ ಹೊಸ ದಾಖಲೆಗಳನ್ನು ನಿರ್ಮಿಸಿತು.

ಈ ಸಾಲಿಗೆ ವಿಜಯ್ ನಟನೆಯ ಪ್ಯಾನ್ ಇಂಡಿಯಾ ಗ್ಯಾಂಗ್‌ಸ್ಟರ್ ಚಿತ್ರ 'ಲಿಯೋ' ಪಡೆದ ಓಪನಿಂಗ್​ ನೋಡಿದರೆ ಶೀಘ್ರವೇ 1,000 ಕೋಟಿ ಗ್ರಾಸ್ ಕ್ಲಬ್‌ಗೆ ಪ್ರವೇಶಿಸುವ ಮುಂಚೂಣಿಯಲಿದೆ ಎಂದು ಹಲವರು ಭಾವಿಸಿದ್ದರು. ಆದ್ರೆ, ಈ ನಿರೀಕ್ಷೆ ನಿರ್ಮಾಪಕರಿಗೆ ಇಲ್ಲದೇ ಹೋಯಿತಾ ಎಂಬ ಪ್ರಶ್ನೆ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹಿಂದಿ ಆವೃತ್ತಿಯ ಬಾಕ್ಸ್ ಆಫೀಸ್ ಕಲೆಕ್ಷನ್‌ನಿಂದ ಹೆಚ್ಚು ನಿರೀಕ್ಷಿಸದ ಕಾರಣ, 'ಲಿಯೋ' 1,000 ಕೋಟಿ ರೂ. ಮೈಲಿಗಲ್ಲನ್ನು ಮುಟ್ಟುವುದಿಲ್ಲ ಎಂದು ನಿರ್ಮಾಪಕ ಎಸ್‌.ಎಸ್. ಲಲಿತ್ ಕುಮಾರ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ತ್ರಿಶಾ, ಸಂಜಯ್ ದತ್, ಸೂರ್ಯ, ಅರ್ಜುನ್​ ಸರ್ಜಾ, ಅರ್ಜುನ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net