

ತುಮಕೂರು: ಸಹಕಾರಿ ಕ್ಷೇತ್ರದಲ್ಲಿ ಜಾತಿ, ಧರ್ಮ, ಮೇಲು ಕೀಳು ಎಂಬುದಿಲ್ಲ. ಇಡೀ ಪ್ರಪಂಚದಲ್ಲಿ ಸಹಕಾರಿ ಆಂದೋಲನವನ್ನು ಭಾರತ ಬಿಟ್ಟು ಇನ್ನೆಲ್ಲು ಕಾಣಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಗಾಜಿನಮನೆಯಲ್ಲಿ ಭಾನುವಾರ ಜಿಲ್ಲಾ ಸಹಕಾರಿ ಸಂಘಗಳ ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಿದ್ದ ನೂತನ ಸಚಿವರು ಹಾಗೂ ಶಾಸಕರುಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರ ಕಾಲಿಡದ ವರ್ಗವೇ ಇಲ್ಲವೆನ್ನಬಹುದು.ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರಿಗೆ ಸಾಲ ಸೌಲಭ್ಯ ದೊರೆಯುವುದು ಕಷ್ಟವಾದಾಗ, ಸಹಕಾರಿ ಕ್ಷೇತ್ರಗಳು ರೈತರಿಗೆ ಯಥೇಚ್ಚ ಸಾಲ ಸೌಲಭ್ಯ ನೀಡಿ ಜನಸಾಮಾನ್ಯರ ಅಭಿವೃದ್ದಿಗೆ ಶ್ರಮಿಸಿದೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ಕೆ.ಎನ್.ರಾಜಣ್ಣ ಕೊಡುಗೆ ಆಪಾರ. ಟೀಕೆ ಮಾಡುವ ಸಂದರ್ಭದಲ್ಲು ರಾಜಣ್ಣ ಸಹಕಾರಿ ಕ್ಷೇತ್ರಕ್ಕೆ ಎನೆಲ್ಲಾ ಮಾಡಿದರೆ ಅಂತ ಹೇಳಿದ್ದೇನೆ. ಇದೆಲ್ಲವನ್ನು ಅವರನ್ನು ಹೊಗಳಲಿಕ್ಕೆ ಹೇಳುತ್ತಿಲ್ಲ. ಕಡುಬಡವರಿಗೆ ಸಹಾಯ ಮಾಡಿದವರು ಕರ್ನಾಟಕದಲ್ಲಿ ಯಾರಾದರೂ ಇದ್ದರೆ ಎಂದರೆ ಅದು ರಾಜಣ್ಣ. ಈ ಕ್ಷೇತ್ರದಲ್ಲಿದ್ದುಕೊಂಡು ಬಡವರಿಗೆ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಹಕಾರ ಸಚಿವರಾಗಿ ತಮ್ಮ ಅಧಿಕಾರವಧಿಯಲ್ಲಿ ಇದನ್ನೊಂದು ಮಾದರಿ ಕ್ಷೇತ್ರವಾಗಿಸಲಿದ್ದಾರೆ ಎಂಬ ನಂಬಿಕೆ ನಮಗಿದೆ ಎಂದು ಮೆಚ್ಚುಗೆ ಮಾತುಗಳನ್ನಾಡಿದರು.
ರಾಜ್ಯ ಅಭಿವೃದ್ಧಿ ಹಳಿಗೆ ಮರಳಲಿದೆ: ಎಸ್.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ರಾಜ್ಯವು ದೇಶದಲ್ಲಿಯೇ ನಂ.1 ಸ್ಥಾನದಲ್ಲಿತ್ತು. ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಹಿನ್ನಡೆಯಾಗಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕವು ಅಭಿವೃದ್ಧಿ ಹಳಿಗೆ ಮರಳಲಿದೆ ಎಂದು ಸಚಿವ ಜಿ. ತಪ್ಪಿದೆ. ಈಗ ಪುನಃ ನಂ.1 ಆಗುವ ದಾರಿಗೆ ಮರಳಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಗ್ರಾಮೀಣ ಜನರ ಬದುಕು ಹಸನು ಮಾಡುವುದು ಸಹಕಾರ ಚಳವಳಿಯ ಮೂಲ ಉದ್ದೇಶವಾಗಿದೆ. ಶೋಷಣೆ ಮುಕ್ತ ವಾತಾವರಣ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಡುವುದು ಸಹಕಾರ ಕ್ಷೇತ್ರದ ಧ್ಯೇಯವಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಮೂಲಕ ಪಕ್ಷ, ಜಾತಿ, ಧರ್ಮ ಯಾವುದನ್ನು ನೋಡದೆ ಸುಮಾರು 800 ಕೋಟಿಗೂ ಹೆಚ್ಚು ವ್ಯವಸಾಯ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗಿದೆ.1904ರ ಸಹಕಾರಿ ಆಂದೋಲನ ಹಾಗೂ 1970ರ ಹೈನುಗಾರಿಕಾ ಸಹಕಾರಿ ಸಂಘಗಳ ಸಹಕಾರಿ ಕ್ಷೇತ್ರದಲ್ಲಿಯೇ ಬಹಳ ಮಹತ್ವದ ಮೈಲಿಗಲ್ಲು. ಜಿಲ್ಲೆಯ ಪ್ರತಿಯೊಂದು 330 ಗ್ರಾಪಂ ಹಂತದಲ್ಲಿಯೂ ಸೊಸೈಟಿಗಳನ್ನು ಸ್ಥಾಪಿಸಬೇಕೆಂಬ ಚಿಂತನೆ ಇದೆ. ಮುಂದಿನ ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಸ್ಥಾಪಿಸಲಾಗುವುದು ಎಂದರು.
ಸಂಸದ ಜಿ.ಎಸ್.ಬಸವರಾಜು, ತಿಪಟೂರು ಶಾಸಕ ಕೆ.ಷಡಕ್ಷರಿ ಮಾತನಾಡಿದರು. ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಅಧ್ಯಕ್ಷತೆವಹಿಸಿದ್ದರು. ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಎಚ್.ವಿ. ವೆಂಕಟೇಶ್, ಬಿ.ಸುರೇಶಗೌಡ, ಮೇಯರ್ ಎಂ.ಪ್ರಭಾವತಿ, ಜಿಪಂ ಮಾಜಿ ಅಧ್ಯಕ್ಷೆ ಶಾಂತಲ ರಾಜಣ್ಣ, ತುಮಲ್ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಉಪಸ್ಥಿತರಿದ್ದರು.