

ಉಳ್ಳಾಲ: ದೇವಕಿ ಅವರಿಗೆ ಮನೆ ನಿರ್ಮಿಸಿ ಕೊಡುವುದು ಅತ್ಯಂತ ಸಂತಸದ ವಿಚಾರ. ತನ್ನ ಮನೆಯ ಮಾದರಿಯಲ್ಲೇ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಸೇವಾ ಬಸ್ತಿ ಪ್ರಯುಕ್ತ ಮನೆ ಯೋಜನೆ ಕಾರ್ಯಗತಗೊಳಿಸಲು ಯೋಚಿಸಲಾಗಿದೆ ಎಂದು ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಹೇಳಿದರು.
ಪಜೀರ್ ಗ್ರಾಮದ ಪಾನೇಲ ತದ್ಮದಲ್ಲಿ ಆರ್ಥಿಕವಾಗಿ ಹಿಂದುಳಿದ ದೇವಕಿ ಎಂಬುವರಿಗೆ ಮನೆ ನಿರ್ಮಾಣ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಅಸೈಗೋಳಿ ಶ್ರೀ ಗುಳಿಗ ಕೊರಗಜ್ಜ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿ ರೈ ಪಜೀರ್ ಮಾತನಾಡಿದರು. ಸೂರ್ಯನಾರಾಯಣ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಇನೋಳಿ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ತಾಪಂ ಮಾಜಿ ಸದಸ್ಯರಾದ ಸೇಸಪ್ಪ ಟೈಲರ್, ನವೀನ್ ಪಾದಲ್ಪಾಡಿ, ನಿವೃತ್ತ ಪ್ರಾಂಶುಪಾಲ ಜಯರಾಮ ಪೂಂಜ ತದ್ಮ ಬಾಳಿಕೆ, ಜಯರಾಮ್ ಶೆಟ್ಟಿ ಕಂಬಳಪದವು, ಅಶೋಕ್ ಕೊಣಾಜೆ ಉಪಸ್ಥಿತರಿದ್ದರು.
ಸಂತೋಷ್ ಕುಮಾರ್ ರೈ ಈಗಾಗಲೇ ಎರಡು ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದಿದ್ದ ದೇವಕಿ ಮನವಿ ಮಾಡಿದ್ದರು. ದೇವಕಿಯ ಮಗಳಿಗೆ ವರ ನಿಶ್ಚಯವಾದರೂ ಮನೆ ದುಸ್ಥಿತಿಯಿಂದಾಗಿ ತಪ್ಪಿ ಹೋಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಸಂತೋಷ್ ರೈ, ತಮ್ಮ ಹುಟ್ಟುಹಬ್ಬದಂದು ನೀಡಿದ ಭರವಸೆಯಂತೆ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮನೆ ಮಾತ್ರವಲ್ಲದೆ ಗೃಹ ಪ್ರವೇಶ, ಮನೆಯವರ ವಸ್ತ್ರದ ವ್ಯವಸ್ಥೆ ಸಂಪೂರ್ಣ ಖರ್ಚು ವೆಚ್ಚ ಸ್ವತಃ ಭರಿಸಲಿದ್ದಾರೆ.
ತಿಂಗಳ ಹಿಂದೆಯೇ ಮನೆ ನಿರ್ಮಾಣ ಆರಂಭಿಸಬೇಕಿತ್ತಾದರೂ ಭಾರಿ ಮಳೆಯಿಂದಾಗಿ ವಾಹನ ಬರುವ ವ್ಯವಸ್ಥೆಗೆ ತೊಂದರೆ ಇದ್ದ ಕಾರಣ ಈಗ ಆರಂಭಿಸಲಾಗಿದೆ. ನವೆಂಬರ್ 15ರೊಳಗೆ ಇಲ್ಲವೇ ಜನವರಿ 3ಕ್ಕೆ ಮೊದಲು ಪ್ರಮುಖರ ಉಪಸ್ಥಿತಿಯಲ್ಲಿ ಮನೆ ಹಸ್ತಾಂತರ ಕಾರ್ಯ ನಡೆಸಲಾಗುವುದು. ಸಂತೋಷ್ ಕುಮಾರ್ ರೈ, ಮಾಜಿ ಅಧ್ಯಕ್ಷರು, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್
ಸಂತೋಷ್ ಕುಮಾರ್ ರೈ, ಮಾಜಿ ಅಧ್ಯಕ್ಷರು, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್