ಹಬ್ಬದ ಆಚರಣೆ ಧರ್ಮದ ಮಹತ್ವದ ಲಕ್ಷಣ : ಚಂದ್ರಶೇಖರ ಶೇಟ್ ವಿಶ್ಲೇಷಣೆ

astami
Published on

ನೆಲ್ಯಾಡಿ: ಹಬ್ಬಗಳ ಆಚರಣೆ ಎನ್ನುವುದು ಹಿಂದು ಧರ್ಮದ ಮಹತ್ವದ ಲಕ್ಷಣ. ಹಿಂದೆ ಕಷ್ಟದ ಹಾಗೂ ಬಡತನದ ದಿನಗಳಲ್ಲಿ ಹಬ್ಬಗಳ ಆಚರಣೆಗಳನ್ನು ಪದ್ಧತಿಯಂತೆ ಮನೆಗಳಲ್ಲಿ ಆಚರಿಸುತ್ತಿದ್ದರು ಎಂದು ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಚಂದ್ರಶೇಖರ ಶೇಟ್ ಹೇಳಿದರು.

ಭಾನುವಾರ ಶ್ರೀವಿನಾಯಕ ಭಜನಾ ಮಂಡಳಿ ರಾಮನಗರ ಬಲ್ಯ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ರಾಮನಗರ ಆಶ್ರಯದಲ್ಲಿ ನಡೆದ 19ನೇ ವರ್ಷದ ಜನ್ಮಾಷ್ಟಮಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಮಿತಿ ಅಧ್ಯಕ್ಷ ಸುಶಾಂತ್ ಶೆಟ್ಟಿ ರಾಮನಗರ ಅಧ್ಯಕ್ಷತೆ ವಹಿಸಿದ್ದರು. ಗೆಳೆಯರ ಬಳಗದ ಅಧ್ಯಕ್ಷ ರಿಷಬ್ ಶೆಟ್ಟಿ ರಾಮನಗರ, ಶ್ರೀವಿನಾಯಕ ಭಜನಾ ಮಂಡಳಿ ಅಧ್ಯಕ್ಷ ಚಂದ್ರಶೇಖರ ರೈ ರಾಮನಗರ, ನೆಲ್ಯಾಡಿ ಗ್ರಾಪಂ ಸದಸ್ಯ ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.

ಅಶೋಕ್ ಆಚಾರ್ಯ ಜಾಲ್ಮನೆ ಪ್ರಾರ್ಥಿಸಿದರು. ಕಿರಣ್ ಪುತ್ತಿಲ ಸ್ವಾಗತಿಸಿದರು. ಶೀನಪ್ಪ ಗೌಡ ಬರೆಮೇಲು ವಂದಿಸಿದರು. ಅಮ್ಮಿ ಗೌಡ ನಾಲ್ಗುತ್ತು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net