ಮನುಷ್ಯನಿಗೆ ಪರಿಸರದ ಅರಿವು ಅಗತ್ಯ: ಮಂಕುಡೆ ವೆಂಕಟ್ರಮಣ ರಾವ್​ ಹೇಳಿಕೆ

Kdb_Environment
Published on

ಕಡಬ: ಪರಿಸರ ಮತ್ತು ಮನುಷ್ಯನ ಜೀವನಕ್ಕೆ ಅವಿನಾಭಾವ ಸಂಬಂಧವಿದೆ. ಪರಿಸರ ಹೊರತುಪಡಿಸಿ ಮನುಷ್ಯನ ಬದುಕನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದುದರಿಂದ ಪರಿಸರದ ಕುರಿತು ಮಾಹಿತಿ ಪಡೆದುಕೊಳ್ಳುವುದು ಅಗತ್ಯ ಎಂದು ಕಡಬದ ಸರಸ್ವತಿ ಸಮೂಹ ಸಂಸ್ಥೆಗಳ ಸಂಚಾಲಕ ಮಂಕುಡೆ ವೆಂಕಟ್ರಮಣ ರಾವ್​ ಹೇಳಿದರು.

ಜೇಸಿಐ ಕಡಬ ಕದಂಬ ಮತ್ತು ಜೇಸಿಐ ಕಡಬ ಕದಂಬ ಚಾರಿಟೆಬಲ್​ ಟ್ರಸ್ಟ್​ನ ಸಹಯೋಗದಲ್ಲಿ ಜೇಸಿ ಸಪ್ತಾಹ&2024 ಕಾರ್ಯಕ್ರಮದಡಿ ಕಡಬದ ಸರಸ್ವತಿ ವಿದ್ಯಾಲಯ ಪ್ರೌಢಶಾಲೆ ಪರಿಸರ ಸಂದ ಸಹಕಾರದೊಂದಿಗೆ ಕಡಬದ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸದಾಶಿವ ಭಟ್​ ಅವರ ವೃಕ್ಷ ವೈವಿಧ್ಯ ವನದಲ್ಲಿ ಆಯೋಜಿಸಲಾಗಿದ್ದ ಪರಿಸರ ಅಧ್ಯಯನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸದಾಶಿವ ಭಟ್​, ಪಂಜ ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ್​ ರೈ ಹಾಗೂ ಯಶೋಧರ ಕೆ. ಸಂಪನ್ಮೂಲ ವ್ಯಕ್ತಿಗಳಾಗಿ ಔಷಧೀಯ ಗಿಡಗಳು ಹಾಗೂ ವೃಕ್ಷಗಳ ಕುರಿತು ಮಾಹಿತಿ ನೀಡಿದರು. ಜೇಸಿಐ ರಾಷ್ಟ್ರೀಯ ಅಧಿಕಾರಿ ಕಾಶೀನಾಥ್​ ಗೋಗಟೆ, ಸಪ್ತಾಹ ನಿರ್ದೇಶಕ ರಾಜೇಶ್​ ಎ.ಕೆ., ಸರಸ್ವತಿ ವಿದ್ಯಾಲಯ ಪ್ರೌಢಶಾಲೆ ಪರಿಸರ ಸಂ ಮೇಲ್ವಿಚಾರಕಿ ಸೌಮ್ಯಾ ಕೆ.ಎ. ಉಪಸ್ಥಿತರಿದ್ದರು.

ಜೇಸಿಐ ಕಡಬ ಕದಂಬದ ಅಧ್ಯಕ್ಷ ಜಾಫಿರ್​ ಮಹಮ್ಮದ್​ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಜೇಮ್ಸ್​ ಕ್ರಿಶಾಲ್​ ಡಿ' ಸೋಜ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net