ಸುಳ್ಯದಲ್ಲಿ ಚದುರಂಗ ಸ್ಪರ್ಧೆ

chess
Published on

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಜೇಸಿಐ ಸಪ್ತಾಹದ ಅಂಗವಾಗಿ ಭಾನುವಾರ ಚದುರಂಗ ಸ್ಪರ್ಧೆ ನಡೆಯಿತು. ಹಿರಿಯ ಆಟಗಾರ ಶಾಂತಾರಾಮ್ ಭಟ್ ಶುಭಹಾರೈಸಿದರು. ಸ್ಪರ್ಧೆಯ ತೀರ್ಪುಗಾರ ಹರಿಪ್ರಸಾದ್ ಕೊಯಿಂಗಾಜೆ, ಜೇಸಿಐ ವಲಯ ಸಂಯೋಜಕ ಲೋಕೇಶ್ ಅಕ್ರಿಕಟ್ಟೆ, ಪೂರ್ವವಲಯಾಧ್ಯಕ್ಷ ಗುರುರಾಜ್ ಅಜ್ಜಾವರ, ನಿಕಟಪೂರ್ವ ಅಧ್ಯಕ್ಷ ನವೀನ್ ಕುಮಾರ್, ಯೋಜನಾ ನಿರ್ದೇಶಕಿ ಗೀತಾಂಜಲಿ ಗುರುರಾಜ್ ಉಪಸ್ಥಿತರಿದ್ದರು.

ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಗುರುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಶ್ಮಿ ಭಟ್ ಅಜ್ಜಾವರ ನಿರೂಪಿಸಿದರು. ಜೆಸಿಐ ಸಪ್ತಾಹ ನಿರ್ದೇಶಕ ಸುರೇಶ್ ಕಾಮತ್ ವಂದಿಸಿದರು. ವಿದ್ಯಾರ್ಥಿಗಳ ಹಾಗೂ ಮುಕ್ತ ವಿಭಾಗದಲ್ಲಿ ಚದುರಂಗ ಸ್ಪರ್ಧೆ ಆಯೋಜಿಸಲಾಗಿದ್ದು, ನೂರಕ್ಕೂ ಹೆಚ್ಚಿನ ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net