'ಪಿಕ್ಚರ್​​ ಅಭಿ ಬಾಕಿ ಹೈ' ಎಂಬ ಜಾರಕಿಹೊಳಿ ಹೇಳಿಕೆಗೆ ಅದೇ ಭಾಷೆಯಲ್ಲಿ ಕೌಂಟರ್​​ ಕೊಟ್ಟ ಸಚಿವೆ!

09082022 harapanahhali Shashikala jolle
Published on

ಚಿಕ್ಕೋಡಿ: ತಮ್ಮ ಹಿಂದು ವಿರೋಧಿ ಹೇಳಿಕೆ ಕುರಿತಂತೆ ನಿನ್ನೆ ರಾತ್ರಿ ಸ್ಪಷ್ಟೀಕರಣ ನೀಡಿದ್ದ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ, 'ಪಿಕ್ಚರ್ ಅಬಿ ಬಾಕಿ ಹೈ...' ಎಂದು ಹೇಳಿದ್ದಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಅದೇ ಭಾಷೆಯಲ್ಲಿ ತಿರುಗೇಟು ನೀಡಿದ್ದಾರೆ. 'ಟ್ರೇಲರ್​​​ ಆಪ್​​ನೆ ದಿಖಾಯಾ, ಪಿಕ್ಚರ್ ಹಮ್​​ ದೇಖ್​​​​ನಾ ಬಾಕಿ ಹೈ..' ಎಂದು ಸಚಿವೆ ಕೌಂಟರ್​​ ಕೊಟ್ಟಿದ್ದಾರೆ.

ಬೆಳಗಾವಿಯ ನಿಪ್ಪಾಣಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಸಚಿವೆ, 'ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವ ಅವಶ್ಯಕತೆ ಇಲ್ಲ, ಟ್ರೇಲರ್ ಅವರು ತೋರಿಸಿರಬಹುದು, ಆದ್ರೆ ನಮ್ಮ ಕಾರ್ಯಕರ್ತರು ಅವರಿಗೆ ಪಿಕ್ಚರ್ ತೋರಿಸ್ತಾರೆ..' ಎಂದು ಎದುರೇಟು ಕೊಟ್ಟಿದ್ದಾರೆ.

ಮೊನ್ನೆ ಒಂದು ಸಮಾರಂಭದಲ್ಲಿ ಜಾರಕಿಹೊಳಿ ಮಾತನಾಡುತ್ತ ಹಿಂದೂ ಎಂಬುದು ಒಂದು ವಿದೇಶಿ ಪದ. ಅದಕ್ಕೆ ಪರ್ಷಿಯನ್ ಭಾಷೆಯಲ್ಲಿ ಕೆಟ್ಟ ಅಶ್ಲೀಲ ಅರ್ಥ ಇದೆ ಎಂದು ಹೇಳಿಕೆ ನೀಡಿದ್ದರು. ಅದು ತೀವ್ರ ವಿವಾದಕ್ಕೆ ತುತ್ತಾಗಿದೆ.

ಆ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಪ್ರತಿಕ್ರಿಯೆ ನೀಡಿರುವ ಸಚಿವೆ ಜೊಲ್ಲೆ, 'ಹಿಂದುತ್ವಕ್ಕೆ ಅದರದ್ದೇ ಆದ ಬೆಲೆ ಇದೆ, ಹಿಂದು ಕುರಿತಂತೆ ಗೂಗಲ್‌ನಲ್ಲಿ ನೋಡುವುದಲ್ಲ, ಅದನ್ನು ನಾವು ಆಚರಣೆ ಮಾಡ್ತೇವೆ..' ಎಂದು ಖಾರವಾಗಿ ಹೇಳಿದ್ದಾರೆ. 'ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು, ಹಿಂದು ಪದದ ಬಗ್ಗೆ ಅವರು ಇನ್ನಷ್ಟು ತಿಳಿದುಕೊಳ್ಳಬೇಕು, ತಿಳಿದುಕೊಂಡ ನಂತರ ಮಾತನಾಡುವುದು ಒಳಿತು..' ಎಂದು ಸಚಿವೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net