

ಹುಬ್ಬಳ್ಳಿ: ಹಿಂದು ಎಂದರೆ ಅಶ್ಲೀಲ ಎಂಬ ಅರ್ಥ ಇದೆ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಕಾಂಗ್ರೆಸ್ ತಳ್ಳಿ ಹಾಕುತ್ತದೆ. ಈ ಕುರಿತು ಅವರಿಂದ ಸ್ಪಷ್ಟನೆ ಕೇಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಾರ್ವಜನಿಕವಾಗಿ ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ. ನಾನು ಸಹ ಹಿಂದು ಧರ್ಮದವನು. ನಾನು ಮತ್ತು ಕಾಂಗ್ರೆಸ್ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ. ಅವರ ಹೇಳಿಕೆಯಿಂದ ಕಾಂಗ್ರೆಸ್ಗೆ ಡ್ಯಾಮೇಜ್ ಆಗುವುದಿಲ್ಲ ಎಂದರು.
ಹಿಂದು ಎಂದರೆ ಅಶ್ಲೀಲ ಎಂಬ ಅರ್ಥ ಬರುತ್ತೆ ಎಂದ ಸತೀಶ್ ಜಾರಕಿಹೊಳಿ ವಿರುದ್ಧ ಕೇಸರಿ ಪಡೆ ಆಕ್ರೋಶ ಹೊರಹಾಕಿದೆ. 'ನಾನು ಸ್ವಾಭಿಮಾನಿ ಹಿಂದು' ಎಂಬ ಅಭಿಯಾನ ಶುರು ಮಾಡಿದೆ.