More

    ‘ಸಿದ್ದರಾಮಯ್ಯಗೆ ಸಂಕಷ್ಟದ ದಿನಗಳು ಶುರುವಾಗಿದೆ.. ಪಾಠ ಕಲಿಸಲು ಖರ್ಗೆ ಸಜ್ಜಾಗಿದ್ದಾರೆ…’

    ಶಿವಮೊಗ್ಗ: ಕಾಲಚಕ್ರ ಬದಲಾಗಿದೆ… ಸಿದ್ದರಾಮಯ್ಯಗೆ ಸಂಕಷ್ಟದ ದಿನಗಳು ಶುರುವಾಗಿದೆ, ಸಿದ್ದರಾಮಯ್ಯಗೆ ಪಾಠ ಕಲಿಸಲು ಮಲ್ಲಿಕಾರ್ಜುನ ಖರ್ಗೆ ಸಜ್ಜಾಗಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಲೇವಡಿ ಮಾಡಿದರು.

    ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಹಿಂದೆ ಸಿದ್ದರಾಮಯ್ಯ ಸಿಎಂ ಸ್ಥಾನ ತಪ್ಪಿಸಿದ್ದರು. ಕಾಲಚಕ್ರ ಬದಲಾಗಿದೆ. ಈಗ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಸರದಿ. ಅಂದು ತನಗೆ ಅವಕಾಶ ತಪ್ಪಿಸಿದ ಸಿದ್ದರಾಮಯ್ಯಗೆ ಪಾಠ ಕಲಿಸಲು ಖರ್ಗೆ ಸಜ್ಜಾಗಿದ್ದಾರೆ ಎಂದರು.

    'ಸಿದ್ದರಾಮಯ್ಯಗೆ ಸಂಕಷ್ಟದ ದಿನಗಳು ಶುರುವಾಗಿದೆ.. ಪಾಠ ಕಲಿಸಲು ಖರ್ಗೆ ಸಜ್ಜಾಗಿದ್ದಾರೆ...'

    ಸಿಎಂ ಸ್ಥಾನಕ್ಕೆ ತಮಗೆ ಪ್ರತಿಸ್ಪರ್ಧಿಯಾಗುತ್ತಾರೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ 2013ರಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್​ ಅವರನ್ನು ಸೋಲಿಸಿದರು. ಇದೀಗ ಡಿ.ಕೆ.ಶಿವಕುಮಾರ್​ ಅವರಿಗೂ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಸಿದ್ದು ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.

    ಯಾವ ಕ್ಷೇತ್ರದಿಂದ ಚುನಾವಣೆಗ ಸ್ಪರ್ಧಿಸುವುದು ಎಂಬುದೇ ಸಿದ್ದರಾಮಯ್ಯಗೆ ತಿಳಿಯದಂತಾಗಿದೆ. ಅಲೆಮಾರಿಯಂತಾಗಿದ್ದು ಎಲ್ಲಿ ಸ್ಪರ್ಧಿಸಿದರೂ ಸೋಲು ನಿಶ್ಚಿತ ಎಂದು ಈಶ್ವರಪ್ಪ ಲೇವಡಿ ಮಾಡಿದರು. ಕೋಲಾರದ ಕಾರ್ಯಕರ್ತರು ಆಹ್ವಾನಿಸಿದ್ದಾರೆ, ಚಾಮರಾಜಪೇಟೆಯಲ್ಲಿ ಜಮೀರ್​ ಕರೆಯುತ್ತಿದ್ದಾರೆಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಲು ಯಾರೂ ಸಿದ್ಧರಿಲ್ಲ. ಸಿದ್ದರಾಮಯ್ಯ ಎರಡು ಕ್ಷೇತ್ರವಲ್ಲ, ಎಲ್ಲ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಸೋಲು ನಿಶ್ಚಿತ ಎಂದು ಟೀಕಿಸಿದರು.

    ಚಂದ್ರು ಸಾವಿನ ಪ್ರಕರಣ: ಗೌರಿಗದ್ದೆ ಆಶ್ರಮಕ್ಕೆ ತನಿಖಾ ತಂಡ ಭೇಟಿ, ವಿನಯ್​ ಗುರೂಜಿಯನ್ನೂ ವಿಚಾರಣೆ ನಡೆಸಿದ ಪೊಲೀಸರು

    ಶಿವಮೊಗ್ಗದಲ್ಲಿ ಭೀಕರ ಅಪಘಾತ: ಅತ್ತೆ-ಸೊಸೆ-ಮೊಮ್ಮಗಳು ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts