

ಗಂಗೊಳ್ಳಿ: ಸ್ವಾತಂತ್ರೃ ದಿನಾಚರಣೆ ಪ್ರಯುಕ್ತ ಬಸ್ರೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬಸ್ರೂರಿನಲ್ಲಿ ನಡೆದ ಮ್ಯಾರಥಾನ್ ಓಟ ಸ್ಪರ್ಧೆಯಲ್ಲಿ ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದರು.
21 ವರ್ಷದ ಒಳಗಿನವರ ಓಟ ಸ್ಪರ್ಧೆಯಲ್ಲಿ ಪ್ರೀತಂ ಡಿ.ಎಂ. ದ್ವಿತೀಯ ಸ್ಥಾನ, ಸಿದ್ಧಲಿಂಗ ಪಿ.ಒ. ತೃತೀಯ ಸ್ಥಾನ, ಸುಕೀರ್ತ್ ಶೆಟ್ಟಿ ಚತುರ್ಥ ಸ್ಥಾನ, ಸುಹಾಸ್ ಐದನೇ ಸ್ಥಾನ, ಪ್ರೀತಂ ಎಂ.ಕಂಬಿ ಆರನೇ ಸ್ಥಾನ, ಅಕ್ಷಯ್ ಎಲ್.ಪಿ. ಎಂಟನೇ ಸ್ಥಾನ, ಪ್ರವೀಣ ಬಿರಾದರ್ ಹಾಗೂ ಜಗದೀಶ್ ಅಂಗಡಿ ಹನ್ನೊಂದನೇ ಸ್ಥಾನ ಪಡೆದಿದ್ದಾರೆ. 21 ವರ್ಷಕ್ಕಿಂತ ಮೇಲ್ಪಟ್ಟವರ ಓಟದ ಸ್ಪರ್ಧೆಯಲ್ಲಿ ಶಾಲಾ ದೈಹಿಕ ಶಿಕ್ಷಕ ಪ್ರವೀಣ ಕುಮಾರ್ ಎನ್.ದ್ವಿತೀಯ ಸ್ಥಾನ ಪಡೆದಿದ್ದಾರೆ.