ಉಡುಪಿ ಜಿಲ್ಲೆಗೆ 10 ಪಶುವೈದ್ಯರ ನೇಮಕ

doctors
Published on

ಕುಂದಾಪುರ: ಜಾನುವಾರು ವಲಯದಲ್ಲಿ ಯಾವುದೇ ಕಾರ್ಯಕ್ರಮದ ಸರಿಯಾದ ಯೋಜನೆ, ಅದರ ಪರಿಣಾಮಕಾರಿ ಅನುಷ್ಠಾನದ ಅಗತ್ಯ. ಅಧಿವೇಶನದಲ್ಲಿ ಪಶುವೈದ್ಯರ ಕೊರತೆ ಬಗ್ಗೆ ಮಾತನಾಡಿ ಉಡುಪಿ ಜಿಲ್ಲೆಗೆ 10 ಪಶುವೈದ್ಯರ ನೇಮಕವಾಗಿದೆ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಕುಂದಾಪುರ ತಾಪಂ ಸಭಾಂಗಣದಲ್ಲಿ ಜಿಪಂ, ತಾಲೂಕು ಪಂಚಾಯಿತಿ, ಪಶುಪಾಲನಾ, ಪಶು ವೈದ್ಯ ಸೇವಾ ಇಲಾಖೆ ಆಶ್ರಯದಲ್ಲಿ 21ನೇ ಜಾನುವಾರು ಗಣತಿ ಕುರಿತು ತಾಲೂಕು ಮಟ್ಟದ ತಾಂತ್ರಿಕ ಕಾರ್ಯಾಗಾರ ಗುರುವಾರ ಉದ್ಘಾಟಿಸಿ ಮಾತನಾಡಿದರು.

ಕಡಿಮೆ ಸಂಖ್ಯೆ ಪಶುವೈದ್ಯರಿದ್ದರೆ ನಿರ್ವಹಣೆ ಕಷ್ಟ. ಜಾನುವಾರುಗಳ ಸರಿಯಾದ ಗಣತಿ ಇದ್ದರೆ ಯೋಜನೆಗಳನ್ನು ರೂಪಿಸಬಹುದು. ರೋಗ ಬಂದಾಗ ಔಷಧ ಪೂರೈಕೆಗೆ ಅಂಕಿಅಂಶಗಳ ಅಗತ್ಯವಿದೆ. ಪಶು ಉತ್ಪನ್ನ, ಉತ್ಪಾದನೆ, ಮೌಲವರ್ಧನೆಗೂ ಯೋಜನೆ ರೂಪಿಸಬಹುದು ಎಂದರು.
ಪಶುವೈದ್ಯ ಸೇವಾ ಇಲಾಖೆ ಉಡುಪಿ ಜಿಲ್ಲಾ ಉಪನಿರ್ದೇಶಕ ಡಾ.ಎಂ.ಸಿ.ರೆಡ್ಡಪ್ಪ ಅಧ್ಯಕ್ಷತೆ ವಹಿಸಿದ್ದರು. ತರಬೇತುದಾರ ಕೋಟ ಪಶು ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ಉಪಸ್ಥಿತರಿದ್ದರು. ಪಶುವೈದ್ಯ ಸೇವಾ ಇಲಾಖೆ ಕುಂದಾಪುರ ಸಹಾಯಕ ನಿರ್ದೇಶಕ ಡಾ.ಬಾಬಣ್ಣ ಪೂಜಾರಿ ಪ್ರಸ್ತಾವಿಸಿದರು. ಡಾ.ಅರುಣ್ ಕೆ.ಪಿ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net