ಕೆಲಸ ಹುಡುಕುವವರಿಗೆ ಗಾಳ; ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ-ಲಕ್ಷ ಹಣ ಪಡೆದ ಕಾಂಗ್ರೆಸ್​ ನಾಯಕಿ

viral news
Published on

ಬೆಂಗಳೂರು:   ಬೆಂಗಳೂರಿನ ಮಹಿಳೆ, ಯಾದಗಿರಿಯ ಯುವನಿಕನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ಕಾಂಗ್ರೆಸ್​ ಯುವ ನಾಯಕಿ ಸಂದ್ಯಾ ಪವಿತ್ರ ನಾಗರಾಜ್​ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ.

ಕೆಲಸ ಹುಕುವ ಹುಡುಗರಿಗೆ ಗಾಳ: ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿರುವ ಸಂಧ್ಯಾ ಪವಿತ್ರಾ ನಾಗರಾಜ್.  ಡಿಕೆ ಶಿವಕುಮಾರ, ಸಿಎಂ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಸೇರಿದಂತೆ ದೊಡ್ಡ ದೊಡ್ಡ ಗಣ್ಯವ್ಯಕ್ತಿಗಳೊಂದಿಗೆ ನಿಂತು ಫೋಟೋ ತೆಗೆಸಿಕೊಂಡಿರೋ ಸಂಧ್ಯಾ ಪವಿತ್ರಾ ನಾಗರಾಜ. ಫೋಟೊಗಳನ್ನು ನೋಡಿ ಜನರು ಸೆಲೆಬ್ರಿಟಿ ಅಂದುಕೊಂಡು ನಮಗೊಂದು ಕೆಲಸ ಕೊಡಿಸಿ ಅಂತಾ ಕೇಳುತ್ತಿದ್ದರು. ಕೇಳಿದಷ್ಟು ಹಣ ಕೊಟ್ಟರೆ ಸರ್ಕಾರಿ ಕೆಲಸ ಫಿಕ್ಸ್ ಅಂತಾ ಆಮಿಷಾ ಒಡ್ಡಿ ಪಂಗನಾಮ ಹಾಕುತ್ತಿದ್ದಳು.
ಪ್ರಕರಣ 1: ಬೆಂಗಳೂರಿನ ಮಾರುತಿ ನಗರದಲ್ಲಿ ವಾಸವಾಗಿರುವ ವೀಣಾ ಎಂಬುವರಿಗೆ ಸಂದ್ಯಾ ಪವಿತ್ರಾ ನಾಗರಾಜ್​​ ಅವರು ಫೇಸ್​ ಬುಕ್​ ಮೂಲಕ ಪರಿಚಯವಾಗಿದ್ದಾರೆ. ವೀಣಾ ಅವರು ಸರ್ಕಾರಿ ಕೆಲಸ ಹುಡುಕುತ್ತಿರುವ ವಿಚಾರ ಸಂದ್ಯಾಗೆ ತಿಳಿದಿದೆ. ನಂತರ ಸಂದ್ಯಾ ಎಮ್​ಎಸ್​ ಬಿಲ್ಡಿಂಗ್​​ನಲ್ಲಿ ಸರ್ಕಾರಿ ಕೆಲಸ ಕೊಡಿಸುತ್ತೇನೆಂದು ವೀಣಾ ಅವರಿಂದ 20 ಲಕ್ಷ ರೂ. ಹಣ ಪಡೆದಿದ್ದಾರೆ. ಆದರೆ ಇದೀಗ ಸಂದ್ಯಾ ಸರ್ಕಾರಿ ಕೆಲಸ ಕೊಡಿಸದೆ ಮತ್ತು ಹಣವನ್ನು ವಾಪಸ್​ ನೀಡದೆ ವಂಚಿಸಿದ್ದಾರೆ ಎಂದು ವೀಣಾ ದೂರಿದ್ದಾರೆ.
ಪ್ರಕರಣ 2: 2021ರಲ್ಲಿ ರಂಗಸ್ವಾಮಿ ಎಂಬುವವರು ಬಾರೊಂದರಲ್ಲಿ ಕೆಲಸ ಮಾಡುತ್ತಿದ್ದು ಆ ಸಮಯದಲ್ಲಿ ಭಾನುಪ್ರಕಾಶ ಎಂಬುವವರು ಪರಿಚಯವಾಗಿದ್ದಾರೆ. ಅವರು ರಂಗಸ್ವಾಮಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಹರೀಶ ಎಂಬುವವರನ್ನು ಪರಿಚಯ ಮಾಡಿಸಿಕೊಟ್ಟಿದ್ದಾರೆ. ಹರೀಶ್​ ರಂಗಸ್ವಾಮಿ ಅವರಿಂದ 3.50 ಲಕ್ಷ ಹಣವನ್ನು ಪಡೆದುಕೊಂಡು ಮತ್ತು ರಂಗಸ್ವಾಮಿ ಅವರ ಸಹೋದರಿ ರೂಪಾ. ಚಂದ್ರಶೇಖರ್ ಎಂಬುವುರಿಂದಲೂ 3.50 ಲಕ್ಷ ಹಣವನ್ನು ತೆಗೆದುಕೊಂಡಿದ್ದಾನೆ. ಕೆಲಸ ಕೊಡಿಸದ ಹಿನ್ನೆಲೆ ರೂಪಾ ವಿಚಾರಿಸಿದಾಗ ಸಂಧ್ಯಾಗೆ ಹಣ ನೀಡಿರುವುದಾಗಿ ಹೇಳಿದ್ದ ಹರೀಶ್. ಬಳಿಕ ಸಂಧ್ಯಾಳ ಭೇಟಿಯಾಗಿ ವಿಚಾರಿಸಿದಾಗ ಕೆಲಸ ಕೊಡಿಸಲು ಮತ್ತೆ ಹಣಕ್ಕೆ ಬೇಡಿಕೆಯಿಟ್ಟು 7.70 ಲಕ್ಷ ಪಡೆದಿದ್ದ ವಂಚಕಿ ಸಂಧ್ಯಾ. ಹೀಗೆ ರೂಪಾ ಎಂಬುವವರಿಂದ ಒಟ್ಟು  11.20 ಲಕ್ಷ ಹಣ ಪಡೆದಿದ್ದ ಸಂಧ್ಯಾ ನಾಗರಾಜ್ & ಟೀಂ. ಲಕ್ಷಾಂತರ ರೂ. ಹಣ ಪೀಕಿದರೂ ಸರ್ಕಾರಿ ನೌಕರಿ ಕೊಡಿಸದೆ ಗ್ಯಾಂಗ್. ಇದರಿಂದ ತಾನು ವಂಚನೆಗೊಳಗಾಗಿರೋದು ಕನ್ಫರ್ಮ್ ಆಗುತ್ತಿದ್ದಂತೆ ಜಯನಗರ ಠಾಣೆಯಲ್ಲಿ ಮೂವರು ವಂಚಕರ ವಿರುದ್ಧ ದೂರು ನೀಡಿದ್ದಾರೆ.
ಹತ್ತಾರು ಜನರಿಗೆ ಸರ್ಕಾರಿ ನೌಕರಿ ಕೊಡಿಸ್ತೇನೆಂದು ಹಣ ಪೀಕಿರುವ ಕಾಂಗ್ರೆಸ್ ನಾಯಕಿ ಸಂಧ್ಯಾ ನಾಗಾರಾಜ್ ಇದೊಂದೇ ಕೇಸ್ ಅಲ್ಲ, ಬೆಂಗಳೂರು ಮಾತ್ರ ಅಲ್ಲ, ಯಾದಗಿರಿವರೆಗೆ ವಂಚಿಸಿರುವ ಸಂಧ್ಯಾ.
ಯಾದಗಿರಿ ಯುವಕನಿಗೂ ಇದೇ ರೀತಿ ಲಕ್ಷಾಂತರ ರೂ. ವಂಚಿಸಿರೋ ಸಂಧ್ಯಾ ನಾಗರಾಜ್. ಸರ್ಕಾರಿ ಕೆಲಸ ಕೊಡಿಸೋದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ. ಸದ್ಯ ಹಾಸಿಗೆ ಹಿಡಿದಿರುವ ಯಾದಗಿರಿ ಯುವಕ ಚಂದ್ರು. ಕೆಲಸ ಕೊಡಿಸಿದ್ರೂ ಪರವಾ ಇಲ್ಲ. ಕೊಟ್ಟ ಹಣ ಮರಳಿಸುವಂತೆ ಗೋಳಿಡುತ್ತಿರುವ ಬಡ ಯುವಕ. ಇದೇ ರೀತಿ ಅದೆಷ್ಟು ಜನರಿಗೆ ಮೋಸ ಮಾಡಿ ಲಕ್ಷಾಂತರ ರೂ. ಲೂಟಿ ಹೊಡೆದು ಸೇಫ್ ಆಗಿರೋ ಸಂಧ್ಯಾ.
ಸಂದ್ಯಾ ಪವಿತ್ರ ನಾಗರಾಜ್​ ಸುಮಾರು 11,20,000 ರೂ. ಪಡೆದುಕೊಂಡು ಸರಕಾರಿ ಕೆಲಸವನ್ನು ಕೊಡಿಸದೆ ಹಣವನ್ನು ವಾಪಸ್ ನೀಡದೆ ನಂಬಿಸಿ ಮೋಸ ಮಾಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುಪ್ರಕಾಶ, ಹರೀಶ್ ಮತ್ತು ಸಂದ್ಯಾ ಪವಿತ್ರ ನಾಗರಾಜ್ ವಿರುದ್ಧ ರೂಪಾ. ಚಂದ್ರಶೇಖರ್​ ದೂರು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net