"ಜನುಮದ ಜೋಡಿ" ಶಿಲ್ಪಾಗೆ ಕನ್ನಡವೇ ಬರ್ತಿರಲಿಲ್ಲ..ಆದ್ರು ನಟಿಸಿ ರಾಜ್ಯ ಪ್ರಶಸ್ತಿ ಪಡೆದ್ರು.. ಈಗ ಶಿಲ್ಪಾ ಎಲ್ಲಿದಾರೆ ?

shilpa
Published on

ಬೆಂಗಳೂರು:  ಸ್ಯಾಂಡಲ್​ವುಡ್​ ನಟ ಶಿವರಾಜ್​ಕುಮಾರ್​ ಅಭಿನಯದ ಜನುಮದ ಜೋಡಿ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈ ಸಿನಿಮಾದ ಮತ್ತೊಂದು ಆಕರ್ಷಕವಾದ ಕನಕ ಪಾತ್ರದಲ್ಲಿ ಕಾಣಿಸಿಕೊಂಡ ಶಿಲ್ಪಾ. ಸ್ಟಾರ್​ನಟರ ಜತೆ ಸ್ಕ್ರೀನ್​​ ಶೇರ್​ ಮಾಡಿದ್ದ ಶಿಲ್ಪಾ ಅವರು ಸಾಲುಸಾಲು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಚಿತ್ರರಂಗದಿಂದ ದೂರವಾಗಿ ಕುಟುಂಬದ ಜತೆ ಕಾಲ ಕಳೆಯುತ್ತೀರುವ ನಟಿ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಇದೆ.

ಕನ್ನಡವೇ ಬರದ ಶಿಲ್ಪಾ ಜನುಮದ ಜೋಡಿಯಲ್ಲಿ ಹೀರೋಯಿನ್: 1996ರಲ್ಲಿ ಟಿಎಸ್ ನಾಗಾಭರಣ  ನಿರ್ದೇಶನದಲ್ಲಿ ಶಿವಣ್ಣ-ಶಿಲ್ಪಾ ಜೋಡಿಯಲ್ಲಿ 'ಜನುಮದ ಜೋಡಿ' ಸಿನಿಮಾ ತೆರೆಗೆ ಬಂದಿತ್ತು. ವಿ ಮನೋಹರ್ ಸಂಗೀತ ನಿರ್ದೇಶನದಲ್ಲಿ ಜನುಮದ ಜೋಡಿ ಹಾಡುಗಳು ಸೂಪರ್ ಹಿಟ್ ಆಗಿ ತುಂಬಾ ಮೋಡಿ ಮಾಡಿದ್ದವು. ಜನುಮದ ಜೋಡಿ ಸಿನಿಮಾದ ನಾಯಕಿ ಶಿಲ್ಪಾ ಈ ಚಿತ್ರದ ಮೊದಲ ಆಯ್ಕೆ ಆಗಿರಲಿಲ್ಲ. ಕನ್ನಡ ಬರುವ ನಟಿಯನ್ನ ಈ ಚಿತ್ರಕ್ಕೆ ಆಯ್ಕೆ ಮಾಡಬೇಕು ಅನ್ನೋದು ಒಟ್ಟು ಲೆಕ್ಕಚಾರ ಆಗಿತ್ತು. ಸಿನಿಮಾ ಟೀಮ್ ಯಾರನ್ನ ಆಯ್ಕೆ ಮಾಡಬೇಕು ಅಂತ ಚಿಂತನೆ ನಡೆಸಿತ್ತು. ಆಗ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್​, ನಟಿ ಶಿಲ್ಪಾ ಅಂತ ಇದ್ದಾರೆ. ಅವರ ಕಣ್ಣುಗಳು ತುಂಬಾ ಚೆನ್ನಾಗಿವೆ. ಟ್ರೈ ಮಾಡಬಹುದು ಅಂತ ಹೇಳಿದ್ದರು. ಆಗಲೇ ಶಿಲ್ಪಾ ಅವರನ್ನ ಭೇಟಿ ಮಾಡಿದ ಡೈರೆಕ್ಷನ್ ಟೀಮ್​​ ಕತೇ ಹೇಳಿದ್​ ಮೇಲೆ  ಕನ್ನಡ ಬರೋದಿಲ್ಲ ಅಂತ ಗೊತ್ತಾಯಿತು. ಹಾಗಂತ ಈ ನಟಿಯನ್ನ ರಿಜೆಕ್ಟ್ ಮಾಡಲಿಲ್ಲ.

ಜನುಮದ ಜೋಡಿ ಚಿತ್ರಕ್ಕೆ ಕನ್ನಡ ಕಲಿಸಿ ಕನ್ನಡ ಡೈಲಾಗ್ ಹೇಳಿಸೋ ಜವಾಬ್ದಾರಿಯನ್ನ ಡೈರೆಕ್ಟರ್ ಟಿ.ಎಸ್.ನಾಗಾಭರಣ ಅವರು ಪ್ರಕಾಶ್ ಅವರಿಗೆ ಒಪ್ಪಿಸಿದರು. ಆ ಕೆಲಸವನ್ನ ಪ್ರಕಾಶ್ ತುಂಬಾ ಚೆನ್ನಾಗಿಯೇ ಮಾಡಿದರು. ಕನ್ನಡ ಗೊತ್ತಿರದ ನಟಿ ಶಿಲ್ಪಾ ಈ ಚಿತ್ರದಲ್ಲಿ ಕನಕ ಹೆಸರಿನ ಪಾತ್ರ ಮಾಡಿದರು. ಈ ಪಾತ್ರದ ಅಭಿನಯಕ್ಕೆ ಮುಂದೆ ನಟಿ ಶಿಲ್ಪಾ ರಾಜ್ಯ ಪ್ರಶಸ್ತಿ ಮತ್ತು ಫಿಲ್ಮಂ ಫೇರ್ ಪ್ರಶಸ್ತಿಯನ್ನ ಕೂಡ ಪಡೆದರು.

ಜನುಮದ ಜೋಡಿ ಬಳಿಕ ಶಿಲ್ಪಾ ಭೂಮಿತಾಯಿಯ ಚೊಚ್ಚಿಲು ಮಗ, ಮುಂಗಾರಿನ ಮಿಂಚು, ಧರ್ಮ ದೇವತೆ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಳಿಕ ಅವರು ಕನ್ನಡ ಸಿನಿಮಾರಂಗ ಬಿಟ್ಟು ಮಲಯಾಳಂ ಚಿತ್ರರಂಗದತ್ತ ತಮ್ಮ ಗಮನವನ್ನು ಹೆಚ್ಚು ಕೇಂದ್ರೀಕರಿಸಿದರು ಎನ್ನಲಾಗಿದೆ.

ಶಿಲ್ಪಾ  ಮೂಲತಃ ಕೇರಳದವರು. ನಿರ್ಮಾಣದತ್ತಲೂ ಒಲವು ತೋರಿಸುತ್ತ ಕೇರಳದಲ್ಲಿ ಸೆಟ್ಲ್ ಆಗಿಬಿಟ್ಟರು. ಎಂ ರಂಜಿತ್ ಹೆಸರಿನ ನಿರ್ಮಾಪಕರನ್ನು ಮದುವೆಯಾದ ಶಿಲ್ಪಾ ಹಲವಾರು ಮಲಯಾಳಂ ಸಿನಿಮಾಗಳನ್ನು ನಿರ್ಮಾಣ ಮಾಡಿದರು. ಆದರೆ ಸಿನಿಮಾ ಪ್ಲಾಪ್​​ ಆಗಿರುವ ಕಾರಣ ಹಣವನ್ನು ಕಳೆದುಕೊಂಡರು. ಶಿಲ್ಪಾ ಸೀರಿಯಲ್ಸ್‌ ಕಡೆ ಮುಖ ಮಾಡಿದರು. ಸಿನಿಮಾ ಉದ್ಯಮದಲ್ಲಿ ಲಾಸ್ ಮಾಡಿಕೊಂಡ ಶಿಲ್ಪಾ-ರಂಜಿತ್ ಬಳಿಕ ಸೀರಿಯಲ್ ನಿರ್ಮಾಣದಲ್ಲಿ ತೊಡಗಿಸಿಕೊಂಡರು. ಮಲಯಾಳಂನ ಕೆಲವು ಧಾರಾವಾಹಿಗಳು ಶಿಲ್ಪಾ ಅವರ ಕೈ ಹಿಡಿದವು.

ಸದ್ಯ ಶಿಲ್ಪಾ ಕುಟುಂಬದೊಂದಿಗೆ ಕೇರಳದಲ್ಲಿ ವಾಸವಿದ್ದಾರೆ. ಅವರಿಗೆ ಆವಂತಿಕಾ ಎಂಬ ಮಗಳಿದ್ದಾಳೆ. ಮಗಳ ಹೆಸರಿನಲ್ಲಿ 'ಆವಂತಿಕಾ ಕ್ರಿಯೇಷನ್ಸ್' ನಿರ್ಮಾಣ ಸಂಸ್ಥೆಯ ಮೂಲಕವೇ ಶಿಲ್ಪಾ-ರಂಜಿತ್ ತಮ್ಮ ಸೀರಿಯಲ್ಸ್‌ ನಿರ್ಮಾಣವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.  ಪ್ರೊಡಕ್ಷನ್‌ ಕೆಲಸವನ್ನು ನೋಡಿಕೊಂಡು ಜವಾಬ್ದಾರಿ ನಿರ್ವಹಿಸುತ್ತ ಸುಖ ಸಂಸಾರದಲ್ಲಿ ಬಾಳುವೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net