ವಿದ್ಯಾರ್ಥಿನಿ ಜತೆ ಟ್ಯೂಷನ್​ ಶಿಕ್ಷಕಿಯ ಅಕ್ರಮ ಸಂಬಂಧ: ಕಿಡ್ನಾಪ್​ ಪ್ರಕರಣಕ್ಕೆ ಸ್ಫೋಟಕ ತಿರುವು

Tution Teacher
Published on

ತಿರುವನಂತಪುರ: ಹದಿನೇಳು ವರ್ಷದ ಹುಡುಗಿಯನ್ನು ಅಪಹರಿಸಿದ ಟ್ಯೂಷನ್​​ ಶಿಕ್ಷಕಿಯನ್ನು ಪೊಕ್ಸೊ ಕಾಯ್ದೆ ಅಡಿಯಲ್ಲಿ ಬಂಧಿಸಿರುವ ಘಟನೆ ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ನಡೆದಿದೆ.

ಶ್ರೀಕಾರ್ಯಂ ಮೂಲದ 22 ವರ್ಷದ ಶಿಕ್ಷಕಿ ಮತ್ತು ಹುಡುಗಿಯನ್ನು ಅಪಹರಿಸಲು ಆಕೆಗೆ ಸಹಾಯ ಮಾಡಿದ ಅಂಗಮಾಲಿಯ ವೆಟ್ಟಿನಾಡ್​ ಮೂಲದ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆ ವಾಸವಿದ್ದ ಏರಿಯಾದಲ್ಲಿ ಆರೋಪಿ ಯುವತಿ ಟ್ಯೂಷನ್​ ತೆಗೆದುಕೊಳ್ಳುತ್ತಿದ್ದಳು. ಮಗಳು ಕಿಡ್ನಾಪ್​ ಆದ ಕೂಡಲೇ ಶ್ರೀಕಾರ್ಯಂ ಪೊಲೀಸ್​ ಠಾಣೆಯಲ್ಲಿ ಪಾಲಕರು ಯುವತಿ ವಿರುದ್ಧ ದೂರು ದಾಖಲಿಸಿ, ಇಬ್ಬರ ನಡುವಿನ ಅಕ್ರಮ ಸಂಬಂಧವೇ ಕಿಡ್ನಾಪ್​ಗೆ ಕಾರಣ ಎಂದು ಉಲ್ಲೇಖಿಸಿದ್ದರು.

ಎರಡು ದಿನಗಳ ಹಿಂದೆ ಹುಡುಗಿಯನ್ನು ಅಪಹರಿಸಲಾಗಿದ್ದು, ತೀವ್ರ ತನಿಖೆಯ ನಂತರ ಇಬ್ಬರನ್ನು ಅಂಗಮಾಲಿ ಬಸ್​ ನಿಲ್ದಾಣ ಬಳಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಹುಡುಗಿ ತಿರುವನಂತಪುರ ನಗರದ ಖಾಸಗಿ ಶಾಲೆಯ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.

18 ವರ್ಷ ತುಂಬಿದ ಬಳಿಕ ಇಬ್ಬರು ಒಟ್ಟಿಗೆ ಬಾಳಲು ನಿರ್ಧಾರ ಮಾಡಿರುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾರೆ ಎನ್ನಲಾಗಿದೆ. ಪೊಲೀಸರ ನಿರ್ದೇಶನದಂತೆ ಬಾಲಕಿ ತನ್ನ ಕುಟುಂಬದ ಜೊತೆಗೆ ತೆರಳಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net