ಬೆಂಗಳೂರು: ಬಜರಂಗ ದಳ ಸಂಘಟನೆಯ ನಿಷೇಧ ವಿಚಾರ ಈ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಅಸ್ತ್ರವಾಗಿ ಪ್ರಯೋಗವಾಗುತ್ತಿದ್ದು, ಕಾಂಗ್ರೆಸ್-ಬಿಜೆಪಿ ಎರಡೂ ಈಗ ಅದನ್ನೇ ಕೇಂದ್ರವಾಗಿರಿಸಿಕೊಂಡು ಮಾತನಾಡುತ್ತಿವೆ.
ಇದೇ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಬಜರಂಗ ದಳವನ್ನು ಹನುಮಾನ್ಗೆ ಹೋಲಿಕೆ ಮಾಡುವುದೇ ಅವಮಾನ, ಹನುಮನ ಹೆಸರಲ್ಲಿ ಮಾಡುವ ಕ್ರೌರ್ಯ ದೇವರಿಗೆ ಮಾಡುವ ಅವಮಾನವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..
ಹನುಮನ ಅತ್ಯಂತ ಹಳೆಯ ದೇವಸ್ಥಾನಗಳನ್ನು ಮೋದಿ ಸರ್ಕಾರ ಒಡೆದು ಹಾಕಿದೆ. 200 ವರ್ಷಗಳ ಹಳೆಯ ನಂಜನಗೂಡು ಹನುಮಾನ್ ದೇವಸ್ಥಾನವನ್ನು ಒಡೆದು ಹಾಕಿದ್ದು ಯಾರು? ಇದೇ ಬಿಜೆಪಿ ಸರ್ಕಾರವೇ ಅಲ್ಲವೇ ದೇವಸ್ಥಾನ ಒಡೆದು ಹಾಕಿದ್ದು? ಇದಕ್ಕೆ ಪ್ರಧಾನಿ ಮೋದಿ ಉತ್ತರ ನೀಡಲಿ ಎಂದು ಅವರು ಹೇಳಿದರು.
ಇದನ್ನೂ ಓದಿ: ಹನುಮ ಭಕ್ತರು ಸಿಡಿದೆದ್ದರೆ ಕಾಂಗ್ರೆಸ್ ದೇಶದಿಂದಲೇ ನಿರ್ಮೂಲ: ಸಿಎಂ ಬೊಮ್ಮಾಯಿ
ಮೆಟ್ರೋ ನಿರ್ಮಾಣಕ್ಕಾಗಿ ಬೆಂಗಳೂರಿನ ಹನುಮಾನ್ ದೇವಸ್ಥಾನ ಒಡೆದು ಹಾಕಿಲ್ವಾ? ಇದಕ್ಕೆ ಸಿಎಂ ಬೊಮ್ಮಾಯಿ ಕ್ಷಮೆ ಕೇಳಿದ್ರಾ ಶಿವಮೊಗ್ಗದ ಹಳೆಯ ಹನುಮಾನ್ ದೇವಸ್ಥಾನವನ್ನು ಒಡೆದು ಹಾಕಿದ್ರು, ಯಾರಾದ್ರೂ ಪ್ರತಿಭಟನೆ ಮಾಡಿದ್ರಾ? ಹೊಳಲ್ಕೆರೆಯಲ್ಲಿ ಹನುಮಾನ್ ದೇವಸ್ಥಾನ ಒಡೆದು ಹಾಕಿದರು, ಬಜರಂಗ ದಳ ಅಥವಾ ವಿಶ್ವ ಹಿಂದು ಪರಿಷತ್ನವರು ಪ್ರೊಟೆಸ್ಟ್ ಮಾಡಿದರಾ? ಎಂದೂ ಪರ್ಶ್ನೆ ಮಾಡಿದ ಸುರ್ಜೆವಾಲಾ, ಬಿಜೆಪಿಯ ಸ್ನೇಹಿತರಿಗೆ ಹನುಮಾನ್ ಚಾಲೀಸಾ ಓದಲು ಬರುವುದಿಲ್ಲ, ಅವರಿಗೆ ಬರೀ ಚಾಲೀಸ್ ಪರ್ಸೆಂಟ್ ಕಮಿಷನ್ ಮಾತ್ರ ಗೊತ್ತು ಎಂದರು.
ಇದನ್ನೂ ಓದಿ: ಹಿಂದೂ ವಿರೋಧಿ ಕಾಂಗ್ರೆಸ್ಗೆ ವೋಟ್ ಹಾಕೋದು ಪಾಕಿಸ್ತಾನಕ್ಕೆ ಹಾಕಿದ ಹಾಗೆ: ಯತ್ನಾಳ್
ಖರ್ಗೆಯನ್ನು ದೇವರು ಯಾವಾಗ ಬೇಕಿದ್ದರೂ ಮೇಲೆ ಕರೆಸಿಕೊಳ್ಳಬಹುದು..
ರಾಜಸ್ಥಾನದ ಬಿಜೆಪಿ ಶಾಸಕ ಹಾಗೂ ಪ್ರಧಾನ ಕಾರ್ಯದರ್ಶಿ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿದ ಸುರ್ಜೆವಾಲಾ, ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಇದು ಉದಾಹರಣೆ ಎಂದರು. ಖರ್ಗೆಗೆ 80 ವರ್ಷ ಆಗಿದೆ, ಯಾವಾಗ ಬೇಕಾದರೂ ದೇವರು ಮೇಲೆ ಕರೆಸಿಕೊಳ್ಳಬಹುದು ಎಂದು ರಾಜಸ್ಥಾನ ಬಿಜೆಪಿ ಶಾಸಕ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿ ಸುರ್ಜೆವಾಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.