

ಗದಗ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಂಟಾಗಿರುವ ಪ್ರಣಾಳಿಕೆ-ಪ್ರಚಾರಗಳು ಧರ್ಮಸಂಘರ್ಷದ ಸ್ವರೂಪ ತಳೆದಿದ್ದು, ಹಿಂದೂಗಳನ್ನು ಕೆರಳಿಸಿದಂತಾಗಿದೆ. ಬಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವುದು ಬಿಜೆಪಿಗರನ್ನು ಹಾಗೂ ಹಿಂದೂಗಳನ್ನು ಸಿಡಿದೇಳುವಂತೆ ಮಾಡಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡುವ ವಿಚಾರವನ್ನು ಘೋಷಿಸಿದ್ದರ ಬಗ್ಗೆ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಗದಗದಲ್ಲಿ ಮಾತನಾಡಿ, ಕಾಂಗ್ರೆಸ್ ಇಂದು ಹಿಂದೂವಿರೋಧಿ ಎಂಬುದನ್ನು ಪ್ರೂವ್ ಮಾಡಿದೆ ಎಂದಿದ್ದಾರೆ.
2047ಕ್ಕೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವುದು ಪಿಎಫ್ಐ ಸಂಘಟನೆ ಗುರಿ. ಪಿಎಸ್ಐ ಸಂಘಟನೆ ಮೇಲಿದ್ದ ಒಂದೂವರೆ ಸಾವಿರ ಪ್ರಕರಣಗಳನ್ನು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ವಾಪಸ್ ಪಡೆದಿದ್ದಾರೆ. ಅದೇ ಹಿಂದೂ ಕಾರ್ಯಕರ್ತರ ಕೊಲೆ, ಗೋರಕ್ಷಕರ ಕೊಲೆ ಕೇಸ್ಗಳನ್ನು ವಾಪಸ್ಸ ಪಡೆದಿಲ್ಲ. ಕಾಂಗ್ರೆಸ್ ಹಾಗೂ ಪಿಎಫ್ಐ ಸಂಘಟನೆಗಳ ಆಂತರಿಕ ಒಪ್ಪಂದ ಇದೆ, ಹೀಗಾಗಿ ಬಜರಂಗದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಹೇಳಿದೆ ಎಂದಿದ್ದಾರೆ.
ಬಜರಂಗದಳದವರು ಮಾತ್ರವಲ್ಲ, ಕರ್ನಾಟಕದಲ್ಲಿ ಹಿಂದೂಗಳೆಲ್ಲ ಕಾಂಗ್ರೆಸ್ ಬಹಿಷ್ಕರಿಸುತ್ತೇವೆ. ಹಿಂದುಗಳ ಮನೆಮನೆಗೆ ಹೋಗಿ ಕಾಂಗ್ರೆಸ್ಗೆ ವೋಟ್ ಹಾಕಬೇಡಿ ಅಂತ ಹೇಳುತ್ತೇವೆ. ಕಾಂಗ್ರೆಸ್ ಹಿಂದೂ ವಿರೋಧಿ, ಅದಕ್ಕೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದ ಹಾಗೆ. ಕಾಂಗ್ರೆಸ್ಗೆ ವೋಟ್ ಹಾಕುವುದೆಂದರೆ ಮುಸ್ಲಿಮರಿಗೆ ವೋಟ್ ಹಾಕಿದ ಹಾಗೆ. ಅವರಿಗೆ ಮುಸ್ಲಿಂ ವೋಟ್ ಮಾತ್ರ ಬೇಕಾಗಿದೆ, ಹಿಂದೂಗಳ ಮತ ಬೇಕಾಗಿಲ್ಲ, ಅದಕ್ಕಾಗಿ ಇಂಥವನ್ನು ಮಾಡುತ್ತಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.