ಗೋಳಿಯಂಗಡಿ: ಸಂಘಟನೆ ಮೂಲಕ ಸಮುದಾಯ ಬೆಳವಣಿಗೆ ಸಾಧ್ಯ. ಸಂವಿಧಾನದಲ್ಲಿ ಕಾನೂನು, ಜಾತಿ, ಧರ್ಮ ಭೇದಭಾವವಿಲ್ಲದೆ ಸಮಾಜದಲ್ಲಿ ಎಲ್ಲರಿಗೂ ಸರಿಸಮಾನ ಅವಕಾಶಗಳಿವೆ ಎಂದು ಶಂಕರನಾರಾಯಣ ಪೊಲೀಸ್ ಠಾಣೆ ಉಪ ನಿರೀಕ್ಷಕ ನಾಸೀರ್ ಹುಸೇನ್ ಹೇಳಿದರು.
ಗೋಳಿಯಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಹೆಬ್ರಿ, ಬ್ರಹ್ಮಾವರ, ಕುಂದಾಪುರ ತಾಲೂಕು ಸಮಿತಿ ಆಶ್ರಯದಲ್ಲಿ ಗ್ರಾಮ ಶಾಖೆ ಪದಾಧಿಕಾರಿಗಳ ಪದಗ್ರಹಣ, ಗ್ರಾಪಂನಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮಘರ್ಜನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ.ಉದಯ ಕುಮಾರ್ ತಲ್ಲೂರು ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಉಡುಪಿ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಸಂಚಾಲಕ ಸುಧಾಕರ ಸುರ‌್ಗೋಳಿ, ರಾಜೇಶ್ ಕೆಮ್ಮಣ್ಣು, ಶಶಿ ಬಳ್ಕೂರು, ಆವರ್ಸೆ ಗ್ರಾಪಂ ಉಪಾಧ್ಯಕ್ಷೆ ಆರತಿ, ಸದಸ್ಯೆ ರೇಣುಕಾ, ಶಾರದಾ, ಅಣ್ಣಪ್ಪ ಆವರ್ಸೆ, ಗೋಪಾಲ ಮೀಯ್ಯರು, ಕೃಷ್ಣ ಅಲ್ತಾರು, ಬೆಳ್ವೆ ಗ್ರಾಪಂ ಮಾಜಿ ಸದಸ್ಯೆ ಯಶೋದಾ, ಸುಬ್ಬಣ್ಣ ಆವರ್ಸೆ, ರಾಜು ಸುರ‌್ಗೋಳಿ, ಶೀನ ಹೆರ್ಮುಂಡೆ, ಮಂಗಳೂರು ಜಿಲ್ಲಾ ಸಂಚಾಲಕ ಸತೀಶ್ ಮೂಡುಬಿದಿರೆ ಉಪಸ್ಥಿತರಿದ್ದರು.
ಸತೀಶ್ ಸುರ‌್ಗೋಳಿ ಸ್ವಾಗತಿಸಿದರು. ಪೂರ್ವಿಕಾ ಅಲ್ತಾರು ಸಂವಿಧಾನ ಪೀಠಿಕೆ ವಾಚಿಸಿದರು. ಶಿವಾನಂದ ಸುರ‌್ಗೋಳಿ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ತೊನ್ನಾಸೆ ವಂದಿಸಿದರು.