ಕುಂದಾಪುರ: ಸೂಕ್ತ ಕ್ರಮದಲ್ಲಿ ಕೃಷಿ ಮಾಡಿದರೆ ನಷ್ಟವಾಗುವುದಿಲ್ಲ. ಆದರೆ ಸರಿಯಾದ ಅಧ್ಯಯನ ನಡೆಸಿರಬೇಕು. ಸಾಂಪ್ರದಾಯಿಕ, ವೈಜ್ಞಾನಿಕ ಕೃಷಿಯಿಂದ ಖಂಡಿತ ಲಾಭ ಗಳಿಸಲು ಸಾಧ್ಯವಿದೆ ಎಂದು ಜಿಲ್ಲಾ ಸಾಧಕ ರೈತ ಪ್ರಶಸ್ತಿ ಪುರಸ್ಕೃತ ಕೃಷಿಕ ರಮೇಶ್ ನಾಯಕ್ ಹೇಳಿದರು.
ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗೂ ಭಾರತೀಯ ಕಿಸಾನ್ ಸಂಘ ಸಹಯೋಗದಲ್ಲಿ ಕುಂದಾಪುರದ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಭಾನುವಾರ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸಿದ್ದಾಪುರ ವಲಯ ಅರಣ್ಯಾಧಿಕಾರಿ ಗಣಪತಿ ವಿ.ನಾಯಕ್ ಅರಣ್ಯ ಕೃಷಿ ಬಗ್ಗೆ, ಗ್ರೀನ್ ಇಂಡಿಯಾ ಸ್ಥಾಪಕಾಧ್ಯಕ್ಷ ಮುನಿಯಾಲು ಗಣೇಶ್ ಶೆಣೈ ಅಣಬೆ ಕೃಷಿ ಬಗ್ಗೆ, ಕೃಷ್ಣಪ್ಪ ಗೌಡ ಪಡ್ಡಂಬೈಲು ತಾರಸಿ ಕೃಷಿ ಕುರಿತು ಮಾಹಿತಿ ನೀಡಿದರು.
ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಮಾಜಿ ಅಧ್ಯಕ್ಷ ಡಾ.ಉತ್ತಮ್ ಕುಮಾರ್ ಶೆಟ್ಟಿ, ಕ್ಲಬ್‌ನ ಪ್ರಮುಖರು, ಸದಸ್ಯರು, ಭಾರತೀಯ ಕಿಸಾನ್ ಸಂಘ ಕುಂದಾಪುರದ ಪದಾಧಿಕಾರಿಗಳು, ರೈತರು ಉಪಸ್ಥಿತರಿದ್ದರು. ಜುಡಿತ್ ಮೆಂಡೋನ್ಸಾ ಕಾರ‌್ಯಕ್ರಮ ನಿರೂಪಿಸಿದರು.