ವಿಜಯವಾಣಿ ಸುದ್ದಿಜಾಲ ಕುಂದಾಪುರ
ಅರ್ಜಿ ಸಲ್ಲಿಸಿದ ಬಳಿಕವೂ ಮೂರು ವರ್ಷದಿಂದ ಬಾಕಿಯಿರುವ ಶೈಕ್ಷಣಿಕ ಧನಸಹಾಯ ವಿತರಣೆಗೆ ಕ್ರಮವಹಿಸುವಂತೆ ಹೈಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸಿರುವ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಕುಂದಾಪುರ ಘಟಕವು ಕೂಡಲೇ ತೀರ್ಪು ಜಾರಿಗೊಳಿಸುವಂತೆ ಆಗ್ರಹಿಸುವುದರ ಜತೆಗೆ ಸೋಮವಾರ ವಿಜಯೋತ್ಸವ ಆಚರಿಸಿತು.
ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ, ಕೋಶಾಧಿಕಾರಿ ಚಂದ್ರಶೇಖರ ವಿ, ಕಾರ್ಯದರ್ಶಿ ಸುಧೀರ್ ಕುಮಾರ್, ಶಶಿಕಾಂತ್ ಕೆ.ಎಸ್, ರಹೆಮಾನ್, ಅಣ್ಣಪ್ಪ ಅಬ್ಬಿಗುಡ್ಡಿ, ರಾಘವೇಂದ್ರ ದೋಣಿಮನೆ, ರತ್ನಾಕರ ಆಚಾರ್, ಡಿವೈಎಫ್‌ಐ ಮುಖಂಡ ಗಣೇಶ್ ದಾಸ್, ಎಸ್‌ಎಫ್‌ಐ ಸಂಚಾಲಕಿ ರಿತಿಕಾ ಉಪಸ್ಥಿತರಿದ್ದರು.