ಪ್ರತಿಸ್ಪರ್ಧಿಗಳನ್ನು ದುರ್ಬಲಗೊಳಿಸುವುದಕ್ಕಾಗಿ ಕಾನೂನು ಬಾಹಿರ ಕಾರ್ಯಾಚರಣೆ ಆರೋಪ: ಗೂಗಲ್ ವಿರುದ್ಧ ದಾವೆ

Google corona
Published on

ವಾಷಿಂಗ್ಟನ್: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸುವುದಕ್ಕಾಗಿ ಪ್ರತಿಸ್ಪರ್ಧಿ ಸಂಸ್ಥೆಗಳನ್ನು ದುರ್ಬಲಗೊಳಿಸಲು ಕಾನೂನುಬಾಹಿರವಾಗಿ ಗೂಗಲ್ ಸಂಸ್ಥೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಆರೋಪಿಸಿ ಅಮೆರಿಕದ ನ್ಯಾಯಾಂಗ ಇಲಾಖೆ, ನಂಬಿಕೆ-ದ್ರೋಹದ ಮೊಕದ್ದಮೆ ಹೂಡಿದೆ.

ಗೂಗಲ್ ಸ್ಪರ್ಧಾ ವಿರೋಧಿ ತಂತ್ರಗಾರಿಕೆಯಿಂದ ಸ್ಪರ್ಧಾತ್ಮಕ ಪ್ರಕ್ರಿಯೆಯನ್ನೇ ದುರ್ಬಲಗೊಳಿಸಲಿದೆ. ಇದರಿಂದ ಗ್ರಾಹಕರ ಮುಂದಿನ ಆಯ್ಕೆಗಳು ಕಡಿಮೆಯಾಗಲಿವೆ ಹಾಗೂ ಆವಿಷ್ಕಾರದ ಕತ್ತು ಹಿಸುಕಿದಂತಾಗುತ್ತದೆ ಎಂದು ದಾವೆಯಲ್ಲಿ ಅಭಿಪ್ರಾಯಪಡಲಾಗಿದೆ.

ಮಾಹಿತಿ ಹುಡುಕಾಟ (ಸರ್ಚ್) ಮತ್ತು ಇಂಟರ್​ನೆಟ್​ನಲ್ಲಿ ಜಾಹೀರಾತು ಸರ್ಚ್​ನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಗೂಗಲ್ ಅಕ್ರಮವಾಗಿ ವರ್ತಿಸಿದೆ ಎಂದು ಗೂಗಲ್ ಮಾತೃ ಸಂಸ್ಥೆ ಆಲ್ಪಾಬೆಟ್ ಇನ್​ಕಾರ್ಪೆರೇಷನ್ ವಿರುದ್ಧ ಹೂಡಿರುವ ದಾವೆಗೆ 11 ರಾಜ್ಯಗಳು ಬೆಂಬಲಿಸಿವೆ. ಈ ದಾವೆಯಿಂದ ಇಂಟರ್​ನೆಟ್​ಗೆ ಸಂವಾದಿಯಾಗಿರುವ ಹಾಗೂ ಜಗದಗಲ ಜನರ ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಭಾಗವಾಗಿರುವ ಕಂಪನಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟು ಮಾಡುವ ನಿರೀಕ್ಷೆಯಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net