More

    ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರಾಣ ತ್ಯಾಗ ಮಾಡಿದ್ದಾರೆ 264 ರಕ್ಷಣಾ ಸಿಬ್ಬಂದಿ

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ 264 ರಕ್ಷಣಾ ಸಿಬ್ಬಂದಿ ಪ್ರಾಣ ತ್ಯಾಗ ಮಾಡಬೇಕಾಗಿ ಬಂತು ಎಂದು ಗಡಿ ರಕ್ಷಣಾ ಪಡೆ (ಬಿಎಸ್​ಎಫ್​)ಯ ಮಹಾ ನಿರ್ದೇಶಕ ಎನ್​.ಎಸ್​.ಜಮ್ವಾಲ್​ ಹೇಳಿದರು.

    ಬಿಎಸ್​ಎಫ್​ ಶಹೀದ್ ಮೆಮೋರಿಯಲ್ ಪಲೌರಾ ಕ್ಯಾಂಪ್​ನಲ್ಲಿ ಇಂದು ಹುತಾತ್ಮರಿಗೆ ಗೌರವ ಸಲ್ಲಿಸಿದ ಅವರು, ದೇಶ ರಕ್ಷಣೆ ಕಾರ್ಯದಲ್ಲಿ ಹುತಾತ್ಮರಾದವರನ್ನು ಸ್ಮರಿಸಿಕೊಂಡರು. 264 ರಕ್ಷಣಾ ಸಿಬ್ಬಂದಿ ಪೈಕಿ 25 ಯೋಧರು ಬಿಎಸ್​ಎಫ್​ನವರು. ಇವರು ಗಡಿ ಭಾಗದಲ್ಲಿ ದೇಶ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದವರು. ಇದರ ಹೊರತಾಗಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲೂ ಬಿಎಸ್​ಎಫ್ ಯೋಧರ ಪಾತ್ರ ಪ್ರಮುಖವಾದುದು ಎಂದು ಹೇಳಿದರು.

    ಇದನ್ನೂ ಓದಿ: ಬಲವಂತದ ಮತಾಂತರದಿಂದ ಹಿಂದುಗಳನ್ನು ರಕ್ಷಿಸುವಲ್ಲಿ ಪಾಕ್​ ವಿಫಲ: ಅಲ್ಲಿಯದ್ದೇ ಸಂಸದೀಯ ಸಮಿತಿಯ ವರದಿ! 

    ಪೊಲೀಸ್ ಹುತಾತ್ಮ ದಿನಾಚರಣೆ ಜಮ್ಮು-ಕಾಶ್ಮೀರದ ವಿವಿಧೆಡೆ ಆಯೋಜಿಸಲ್ಪಟ್ಟಿತ್ತು. ಇದೇ ದಿನ 1959ರಲ್ಲಿ ಚೀನೀ ಯೋಧರ ಜತೆಗೆ ಹೋರಾಡಿದ ಸಿಎಪಿಎಫ್​ ಯೋಧರ ಬಲಿದಾನವನ್ನೂ ಸ್ಮರಿಸಲಾಗುತ್ತಿದೆ. 1960ರಿಂದ ಈ ದಿನಾಚರಣೆ ಚಾಲ್ತಿಯಲ್ಲಿದೆ. (ಏಜೆನ್ಸೀಸ್)

    ಜಮ್ಮು-ಕಾಶ್ಮೀರದ ಪಂಚಾಯತ್ ರಾಜ್ ಕಾಯ್ದೆಗೆ ಸಚಿವ ಸಂಪುಟದ ಅನುಮೋದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts