ಜಮ್ಮು-ಕಾಶ್ಮೀರದ ಪಂಚಾಯತ್ ರಾಜ್ ಕಾಯ್ದೆಗೆ ಸಚಿವ ಸಂಪುಟದ ಅನುಮೋದನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಂಚಾಯತ್ ರಾಜ್ ಕಾಯ್ದೆಯನ್ನು ಅನ್ವಯಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಇಂದು ಅಂಗೀಕರಿಸಿದೆ. ಇದರೊಂದಿಗೆ ಅಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಶೀಘ್ರವೇ ಶುರುವಾಗಲಿದೆ. ಸಚಿವ ಸಂಪುಟ ಸಭೆಯ ನಂತರದಲ್ಲಿ ಈ ವಿಚಾರವನ್ನು ಮಾಹಿತಿ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ಧಾರೆ. ಪ್ರಜಾಪ್ರಭುತ್ವವನ್ನು ಬೇರುಮಟ್ಟದಿಂದ ಬೆಳೆಸುವುದಕ್ಕೆ ಇದು ನೆರವಾಗಲಿದೆ. ಸ್ವಾತಂತ್ರ್ಯಾನಂತರದಲ್ಲಿ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರವೂ ದೇಶದ ಇತರೆ ಭಾಗಗಳಲ್ಲಿರುವಂತಹ ವ್ಯವಸ್ಥೆಯನ್ನು ಕಾಣಲಿದೆ. ಅವರೂ ಅವರದ್ದೇ ಆದ ಜನಪ್ರತಿನಿಧಿಗಳನ್ನು ಮತದಾನದ ಮೂಲಕ … Continue reading ಜಮ್ಮು-ಕಾಶ್ಮೀರದ ಪಂಚಾಯತ್ ರಾಜ್ ಕಾಯ್ದೆಗೆ ಸಚಿವ ಸಂಪುಟದ ಅನುಮೋದನೆ