ತಾಂತ್ರಿಕ ದೋಷದಿಂದಾಗಿ ಎನ್​ಎಸ್​ಇ ವಹಿವಾಟು ಸ್ಥಗಿತ..!

Sensez
Published on

ನವದೆಹಲಿ: ತಾಂತ್ರಿಕ ದೋಷದಿಂದಾಗಿ ನ್ಯಾಷನಲ್​ ಸ್ಟಾಕ್​ ಎಕ್ಸ್​ಚೇಂಜ್​ (ಎನ್​ಎಸ್​ಇ) ವಹಿವಾಟು ಬುಧವಾರ ಸ್ಥಗಿತಗೊಂಡಿದೆ. ಇದರಿಂದಾಗಿ ಸ್ಪಾಟ್​ ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿ ಸೂಚ್ಯಂಕಗಳ ಲೈವ್ ಬೆಲೆಯ ಉಲ್ಲೇಖಗಳು ದೀಢೀರನೇ ತನ್ನ ಅಪ್​ಡೇಟ್​ ಅನ್ನು ನಿಲ್ಲಿಸಿವೆ.

ವಹಿವಾಟು ಸ್ಥಗಿತಗೊಂಡ ಬೆನ್ನಲ್ಲೇ ವ್ಯಾಪಾರಿಗಳಲ್ಲಿ ಭೀತಿ ಹರಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮೀಮ್ಸ್​ಗಳು ಹರಿದಾಡಲು ಆರಂಭವಾಗಿದೆ. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಎನ್​ಎಸ್​ಇ ತಮ್ಮ ತಾಂತ್ರಿಕ ತಂಡ ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವತ್ತ ಕೆಲಸ ಮಾಡುತ್ತಿದೆ. ಎಲ್ಲಾ ವಿಭಾಗಗಳನ್ನು 11:40 ಕ್ಕೆ ಮುಚ್ಚಲಾಗಿದೆ ಮತ್ತು ಸಮಸ್ಯೆಯನ್ನು ಪರಿಹರಿಸಿದ ತಕ್ಷಣ ಮರು ಸ್ಥಾಪಿಸಲಾಗುವುದು ಎಂದು ತಿಳಿಸಿದೆ.

ಅವಶ್ಯಕ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ಎನ್ಎಸ್ಇ ಎರಡು ಸೇವಾ ಪೂರೈಕೆದಾರರೊಂದಿಗೆ ಅನೇಕ ಟೆಲಿಕಾಂ ಲಿಂಕ್​ಗಳನ್ನು ಹೊಂದಿದೆ. ಟೆಲಿಕಾಂ ಸೇವಾ ಪೂರೈಕೆದಾರರಿಂದ ನಾವು ಈಗಾಗಲೇ ಸಂಪರ್ಕವನ್ನು ಸ್ವೀಕರಿಸಿದ್ದು, ಪೂರೈಕೆದಾರರ ಲಿಂಕ್‌ಗಳಲ್ಲಿ ಸಮಸ್ಯೆಗಳಿರುವುದರಿಂದ ಎನ್‌ಎಸ್‌ಇ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ ಎಂದು ಎನ್​ಎಸ್​ಇ ಹೇಳಿದೆ.

ಆದಾಗ್ಯೂ, ತಾಂತ್ರಿಕ ದೋಷವು ಎಸ್ ಆ್ಯಂಡ್​ ಪಿ ಬಿಎಸ್ಇ ಸೆನ್ಸೆಕ್ಸ್​ನ ನೇರ ಬೆಲೆಯ ಮೇಲೆ ಪರಿಣಾಮ ಬೀರಿಲ್ಲ. ತಾಂತ್ರಿಕ ತೊಂದರೆಗಳಿಂದಾಗಿ ಎನ್‌ಎಸ್‌ಇಯ ವಹಿವಾಟುವಿನ ಮೇಲೆ ಮಾತ್ರ ಪರಿಣಾಮ ಬೀರಿದೆ ಎಂದು ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net