More

    ದೆಹಲಿಗೆ ಹೋಗುವ ಪ್ರಯಾಣಿಕರಿಗೆ ಬೇಕು ಕರೊನಾ ನೆಗೆಟೀವ್ ವರದಿ

    ನವದೆಹಲಿ: ಕರೊನಾ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಐದು ರಾಜ್ಯಗಳಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಹೋಗಬೇಕೆಂದರೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡುವ ನಿರ್ಧಾರವನ್ನು ದೆಹಲಿ ಸರ್ಕಾರ ತೆಗೆದುಕೊಂಡಿದೆ. ಹೀಗಾಗಿ ಮಹಾರಾಷ್ಟ್ರ, ಕೇರಳ, ಪಂಜಾಬ್, ಛತ್ತೀಸಗಡ ಮತ್ತು ಮಧ್ಯಪ್ರದೇಶಗಳಿಂದ ವಿಮಾನ, ರೈಲು ಅಥವಾ ಬಸ್​ಗಳಲ್ಲಿ ಪ್ರಯಾಣ ಮಾಡುವವರು ದೆಹಲಿ ಪ್ರವೇಶಿಸುವ ಮುನ್ನ ಕರೊನಾ ಆರ್​ಟಿ-ಪಿಸಿಆರ್​ ಪರೀಕ್ಷೆಯಲ್ಲಿ ನೆಗೆಟೀವ್ ಬಂದಿರುವ ವರದಿಯನ್ನು ತೋರಿಸಲೇಬೇಕು.

    ಶುಕ್ರವಾರ(ಫೆಬ್ರವರಿ 26) ಮಧ್ಯರಾತ್ರಿಯಿಂದ ಮಾರ್ಚ್ 15 ಮಧ್ಯಾಹ್ನದವರೆಗೆ ಈ ನಿಯಮವು ಜಾರಿಯಾಗಲಿದೆ. ಹೀಗಾಗಿ ಈ ರಾಜ್ಯಗಳ ಅಧಿಕಾರಿಗಳು, ದೆಹಲಿಗೆ ಹೊರಟ ಪ್ರಯಾಣಿಕರ ಬಳಿ 72 ಗಂಟೆಗಳ ಈಚಿನ ಕೋವಿಡ್ ನೆಗೆಟೀವ್ ವರದಿ ಹೊಂದಿರುವ ಎಂಬ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕಾಗಿದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಸಭೆ ನಡೆಸಿದ ನಂತರ ದೆಹಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದ್ದು, ಈ ಬಗ್ಗೆ ಅಧಿಕೃತ ಆದೇಶವು ಶೀಘ್ರದಲ್ಲೇ ಜಾರಿಯಾಗಲಿದೆ.

    ಇದನ್ನೂ ಓದಿ: ಮತ್ತೆ ಕರೊನಾ ಕಟ್ಟೆಚ್ಚರ; 2ನೇ ಅಲೆ ತಡೆಗೆ ರಾಜ್ಯದಲ್ಲಿ ಕಠಿಣ ನಿಯಮ ಜಾರಿ

    ಕಳೆದ ವಾರ ದೇಶದಲ್ಲಿ ವರದಿಯಾಗಿರುವ ಒಟ್ಟು ಕರೊನಾ ಪ್ರಕರಣಗಳಲ್ಲಿ ಶೇ. 86 ರಷ್ಟು ಪ್ರಕರಣಗಳು ಈ ಐದು ರಾಜ್ಯಗಳಿಗೆ ಸೇರಿದ್ದೇ ಆಗಿವೆ. ಶೇ 75 ರಷ್ಟು ಪ್ರಕರಣಗಳು ಮಹಾರಾಷ್ಟ್ರ ಮತ್ತು ಕೇರಳಗಳಿಗೆ ಸೇರಿದವಾಗಿವೆ. ಮಂಗಳವಾರ, ಮಹಾರಾಷ್ಟ್ರದಲ್ಲಿ 5,210 ಹೊಸ ಪ್ರಕರಣಗಳು ದಾಖಲಾಗಿದ್ದು, ಕೇರಳದಲ್ಲಿ 2,212 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 18, ಕೇರಳದಲ್ಲಿ 16 ಮತ್ತು ಪಂಜಾಬ್​ನಲ್ಲಿ 15 ಕರೊನಾ ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    ಈ ಏರಿಕೆಯಿಂದಾಗಿ ದೇಶದಲ್ಲಿ ಕರೊನಾದ ಎರಡನೇ ಅಲೆ ಸೃಷ್ಟಿಯಾಗಬಹುದೆಂಬ ಭೀತಿ ಉಂಟಾಗಿದ್ದು, ಕೇಂದ್ರ ಸರ್ಕಾರ ದೇಶಾದ್ಯಂತ ಕಠಿಣ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಆದೇಶಿಸಿದೆ. ಕರ್ನಾಟಕ, ತಮಿಳುನಾಡು, ಉತ್ತರಾಖಂಡ ಸೇರಿದಂತೆ ಇತರ ಕೆಲವು ರಾಜ್ಯಗಳು ಈಗಾಗಲೇ ಕರೊನಾ ಪರೀಕ್ಷೆಯ ನಿರ್ಬಂಧವನ್ನು ಈ ಐದು ರಾಜ್ಯಗಳ ಪ್ರಯಾಣಿಕರ ಮೇಲೆ ವಿಧಿಸಿವೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕರೊನಾ: ಪೊಲೀಸರಿಗೆ ವರ್ಕ್​ಫ್ರಮ್​ ಹೋಮ್!

    14 ವರ್ಷದ ಬಾಲಕಿಯನ್ನು ಮದುವೆಯಾದ 50 ವರ್ಷದ ಸಂಸದ: ದಾಖಲಾಯ್ತು ಕೇಸ್​

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts