ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ: 10.3 ಲಕ್ಷ ಕೋಟಿ ಬೃಹತ್ ಮೌಲ್ಯದೊಂದಿಗೆ ಐತಿಹಾಸಿಕ ಮಾರುಕಟ್ಟೆ ಎಂಟ್ರಿಗೆ ವೇದಿಕೆ ಸಜ್ಜು! Jio Platforms IPO

Jio Platforms IPO
ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ
Published on: 

ನವದೆಹಲಿ: ಭಾರತೀಯ ಬಂಡವಾಳ ಮಾರುಕಟ್ಟೆ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಐತಿಹಾಸಿಕ ಕ್ಷಣಕ್ಕೆ ದೇಶದ ಷೇರು ಮಾರುಕಟ್ಟೆ ಸಾಕ್ಷಿಯಾಗಲು ಸಜ್ಜಾಗಿದೆ. ದೇಶದ ಪ್ರಮುಖ ಟೆಲಿಕಾಂ ಮತ್ತು ಡಿಜಿಟಲ್ ಸೇವಾ ದೈತ್ಯ ಸಂಸ್ಥೆಯಾದ 'ಜಿಯೋ ಪ್ಲಾಟ್‌ಫಾರ್ಮ್ಸ್' ( Jio Platforms IPO ) ತನ್ನ ಚೊಚ್ಚಲ ಐಪಿಒ (IPO) ಮೂಲಕ ಬೃಹತ್ ದಾಖಲೆ ಬರೆದಿದ್ದು, ಬುಧವಾರ (ಅಕ್ಟೋಬರ್ 28, 2026) ಬಿಎಸ್‌ಇ (BSE) ಹಾಗೂ ಎನ್‌ಎಸ್‌ಇ (NSE) ಷೇರು ಮಾರುಕಟ್ಟೆಗಳಲ್ಲಿ ಅಧಿಕೃತವಾಗಿ ಲಿಸ್ಟಿಂಗ್ ಆಗಲಿದೆ.

ಪ್ರತಿ ಷೇರಿಗೆ 1,119 ರೂಪಾಯಿ ಆಫರ್ ಬೆಲೆಯಂತೆ ಒಟ್ಟು 27 ಕೋಟಿ ಹೊಸ ಷೇರುಗಳನ್ನು ವಿತರಿಸಿರುವ ಜಿಯೋ ಪ್ಲಾಟ್‌ಫಾರ್ಮ್ಸ್, ಬರೋಬ್ಬರಿ 10.3 ಲಕ್ಷ ಕೋಟಿ ರೂಪಾಯಿ ಮೌಲ್ಯಮಾಪನದೊಂದಿಗೆ ಭಾರತದ ಅತ್ಯಂತ ಯಶಸ್ವಿ ಐಪಿಒಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

Also Read
ಚಿನ್ನ-ಬೆಳ್ಳಿಯ ಬೆಲೆ ಕುಸಿಯುತ್ತಿರುವುದೇಕೆ? ಇನ್ನಷ್ಟು ಕಡಿಮೆಯಾಗುತ್ತಾ ಹಳದಿ ಲೋಹದ ದರ? ತಜ್ಞರು ಹೇಳುವುದೇನು? Gold, Silver Prices
Jio Platforms IPO

10 ಲಕ್ಷ ಕೋಟಿಗೂ ಅಧಿಕ ಮೌಲ್ಯಮಾಪನದೊಂದಿಗೆ ಐಪಿಒ ಬಿಡುಗಡೆ ಮಾಡಿದ ಭಾರತೀಯ ಬಂಡವಾಳ ಮಾರುಕಟ್ಟೆಯ ಇತಿಹಾಸದಲ್ಲೇ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಜಿಯೋ ಪಾತ್ರವಾಗಿದೆ. ಪ್ರಸ್ತುತ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಜಿಯೋ, ರಿಲಯನ್ಸ್ ಇಂಡಸ್ಟ್ರೀಸ್ (16.2 ಲಕ್ಷ ಕೋಟಿ ರೂ.), ಭಾರ್ತಿ ಏರ್‌ಟೆಲ್ (12.2 ಲಕ್ಷ ಕೋಟಿ ರೂ.) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ (10.6 ಲಕ್ಷ ಕೋಟಿ ರೂ.) ನಂತರದ ಸ್ಥಾನದಲ್ಲಿದ್ದು, ದೇಶದ 4ನೇ ಅತಿ ದೊಡ್ಡ ಕಂಪನಿಯಾಗಿದೆ.

ಷೇರು ಮಾರುಕಟ್ಟೆಯಲ್ಲಿ ಜಿಯೋ ಐಪಿಒಗೆ ಅಭೂತಪೂರ್ವ ಬೇಡಿಕೆ ವ್ಯಕ್ತವಾಗಿದ್ದು, ಗ್ರೇ ಮಾರ್ಕೆಟ್ ಪ್ರೀಮಿಯಂ (GMP) ಸಹ ಭಾರಿ ಏರಿಕೆ ಕಂಡಿದೆ. ಹೀಗಾಗಿ ಆಲೋಟ್‌ಮೆಂಟ್ ಬೆಲೆಗಿಂತ ಬಂಪರ್ ಪ್ರೀಮಿಯಂನೊಂದಿಗೆ ಲಿಸ್ಟಿಂಗ್ ಆಗುವ ಸಂಪೂರ್ಣ ಸಾಧ್ಯತೆಗಳಿವೆ.

ಒಂದು ವೇಳೆ ಗ್ರೇ ಮಾರ್ಕೆಟ್ ಅಂದಾಜಿನಂತೆ ಜಿಯೋ ಷೇರುಗಳು ಶೇ. 20ರಷ್ಟು ಪ್ರೀಮಿಯಂನೊಂದಿಗೆ ಅಂದರೆ ಪ್ರತಿ ಷೇರಿಗೆ 1,340 ರೂಪಾಯಿಯಂತೆ ಮಾರುಕಟ್ಟೆಗೆ ಪದಾರ್ಪಣೆ ಮಾಡಿದರೆ, ಜಿಯೋ ಪ್ಲಾಟ್‌ಫಾರ್ಮ್ಸ್‌ನ ಒಟ್ಟು ಮಾರುಕಟ್ಟೆ ಮೌಲ್ಯ 12.3 ಲಕ್ಷ ಕೋಟಿ ರೂಪಾಯಿ ದಾಟಲಿದೆ.

ಈ ಹಂತ ತಲುಪಿದರೆ, ಜಿಯೋ ತನ್ನ ಮಾತೃ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್‌ನ ಕೆಳಗೆ ಅಂದರೆ ಭಾರತದ 2ನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಐತಿಹಾಸಿಕ ಪದಾರ್ಪಣೆ ಮಾಡಲಿದೆ. ಅಷ್ಟೇ ಅಲ್ಲದೆ, ಕೇವಲ ಐಪಿಒ ಮೌಲ್ಯಮಾಪನವನ್ನಷ್ಟೇ ಪರಿಗಣಿಸಿದರೂ, ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್‌ನ (ರಿಲಯನ್ಸ್ ಇಂಡಸ್ಟ್ರೀಸ್ + ಜಿಯೋ ಪ್ಲಾಟ್‌ಫಾರ್ಮ್ಸ್) ಜಂಟಿ ಮಾರುಕಟ್ಟೆ ಮೌಲ್ಯ ಬರೋಬ್ಬರಿ 27 ಲಕ್ಷ ಕೋಟಿ ರೂಪಾಯಿ ದಾಟಲಿದೆ.

Also Read
ಎಸ್​ಬಿಐ ಗ್ರಾಹಕರಿಗೆ ಪ್ರಮುಖ ಸೂಚನೆ: ತಕ್ಷಣ ಈ ಕೆಲಸ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಬಹುದು..! SBI Account Holders
Jio Platforms IPO

ಈ ಮೂಲಕ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆಯು ದೇಶದ ಪ್ರಮುಖ ಕಾರ್ಪೊರೇಟ್ ಗ್ರೂಪ್‌ಗಳಾದ ಟಾಟಾ ಹಾಗೂ ಅದಾನಿ ಗ್ರೂಪ್‌ಗಳನ್ನು ಹಿಂದಿಕ್ಕಿ ಭಾರತದ ನಂಬರ್ 1 ಸಮೂಹ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಪ್ರಸ್ತುತ ಸಾಲಿನಲ್ಲಿ ಟಾಟಾ ಸಮೂಹದ 32 ಲಿಸ್ಟೆಡ್ ಕಂಪನಿಗಳ ಒಟ್ಟು ಮೌಲ್ಯ ಸುಮಾರು 25.7 ಲಕ್ಷ ಕೋಟಿ ರೂ. ಹಾಗೂ ಅದಾನಿ ಸಮೂಹದ 11 ಕಂಪನಿಗಳ ಒಟ್ಟು ಮೌಲ್ಯ 16.6 ಲಕ್ಷ ಕೋಟಿ ರೂ.ನಷ್ಟಿದೆ. ಜಿಯೋ ಬಂಪರ್ ಲಿಸ್ಟಿಂಗ್ ಕಾಣುವ ಮೂಲಕ ರಿಲಯನ್ಸ್ ಗ್ರೂಪ್ 30 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯದ ಐತಿಹಾಸಿಕ ಮೈಲಿಗಲ್ಲು ತಲುಪುವ ಸನಿಹದಲ್ಲಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net