ದೀಪಾವಳಿ ಸಂಭ್ರಮಕ್ಕೆ ಸಾವರಿನ್ ಗೋಲ್ಡ್ ಬಾಂಡ್: ಗ್ರಾಂಗೆ 5,177 ರೂಪಾಯಿ ದರ ಸೋಮವಾರದಿಂದ ಲಭ್ಯ

GOLD BOND
Published on

ನವದೆಹಲಿ: ದೀಪಾವಳಿ ಹಬ್ಬದ ಸೀಸನ್​ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್​ ನ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದೆ. ಸಾವರಿನ್​ ಗೋಲ್ಡ್ ಬಾಂಡ್​ ಸ್ಕೀಮ್​ 2020-21ರ ಎಂಟನೇ ಸರಣಿಯ ಬಾಂಡ್​ಗಳು ನವೆಂಬರ್ 9 ರಿಂದ 13ನೇ ತಾರೀಕಿನ ತನಕ ಖರೀದಿಗೆ ಲಭ್ಯವಿದೆ.

ಇಂಡಿಯಾ ಬುಲಿಯನ್​ ಆ್ಯಂಡ್ ಜುವೆಲ್ಲರಿ ಅಸೋಸಿಯೇಷನ್ ಲಿಮಿಟೆಡ್​ ಮೂಲಕ ಗ್ರಾಹಕರಿಗೆ ತಲುಪುವ ಈ ಬಾಂಡ್​ 999 ಪರಿಶುದ್ಧತೆಯ ಚಿನ್ನದ್ದಾಗಿದ್ದು, ಗ್ರಾಂಗೆ 5,177 ರೂಪಾಯಿ ನಿಗದಿ ಮಾಡಲಾಗಿದೆ. ಡಿಜಿಟಲ್ ಪಾವತಿ ಮತ್ತು ಆನ್​ಲೈನ್ ಮೂಲಕ ಖರೀದಿಸುವವರಿಗೆ ಪ್ರತಿ ಗ್ರಾಂ ಗೆ 50 ರೂಪಾಯಿ ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ ಆರ್​ಬಿಐ ಹೇಳಿದೆ.

ಏಳನೇ ಸರಣಿಯ ಸಾವರಿನ್ ಗೋಲ್ಡ್ ಬಾಂಡ್ ಅಕ್ಟೋಬರ್ 12ರಿಂದ 16ರ ತನಕ ಲಭ್ಯವಿತ್ತು. ಅಂದು ಗ್ರಾಂಗೆ 5,051 ರೂಪಾಯಿ ಇತ್ತು. ಭಾರತ ಸರ್ಕಾರದ ಪರವಾಗಿ ಆರ್​ಬಿಐ ಈ ಗೋಲ್ಡ್ ಬಾಂಡ್​ಗಳನ್ನು ಪ್ರಕಟಿಸುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net