

ನವದೆಹಲಿ: ಯುವಜನರಲ್ಲಿ ಉದ್ಯೋಗ ಕೌಶಲ ವೃದ್ಧಿಗಾಗಿ ನೆರವಾಗುವ ನಿಟ್ಟಿನಲ್ಲಿ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಶನ್ ಮತ್ತು ಪ್ರೊಫೆಷನಲ್ ನೆಟ್ವರ್ಕ್ ಲಿಂಕ್ಡ್ಇನ್ ನಡುವೆ ಒಪ್ಪಂದ ಏರ್ಪಟ್ಟಿದೆ. ಮಂಗಳವಾರ ಈ ವಿಷಯವನ್ನು ಬಹಿರಂಗಪಡಿಸಿದ ಈ ಸಂಸ್ಥೆಗಳು, ಲಿಂಕ್ಡ್ಇನ್ ಲರ್ನಿಂಗ್ ರಿಸೋರ್ಸ್ ಅನ್ನು ಉಚಿತವಾಗಿ ಯುವಜನರಿಗೆ ಲಭ್ಯವಾಗಲಿದೆ ಎಂದು ಹೇಳಿವೆ.
ಈ ಪಾಲುದಾರಿಕೆಯ ಅನ್ವಯ, 10 ಉಚಿತ ಲಿಂಕ್ಡ್ ಇನ್ ಲರ್ನಿಂಗ್ ಪಾಥ್ಸ್ ಮೂಲಕ 140 ಕೋರ್ಸ್ಗಳು ಲಭ್ಯವಾಗಲಿವೆ. ಇವು ಬೇಡಿಕೆಯಲ್ಲಿರುವ ಟೆಕ್ ಉದ್ಯೋಗ ಕೌಶಲಕ್ಕೆ ಸಂಬಂಧಿಸಿದವು. ಇವುಗಳು ಇಸ್ಕಿಲ್ ಇಂಡಿಯಾ ಡಿಜಿಟಲ್ ಪ್ಲಾಟ್ಫಾರಂನಲ್ಲಿ 2012ರ ಮಾರ್ಚ್ 31ರ ತನಕ ಸ್ವಕಲಿಕೆಗೆ ಸಿಗಲಿವೆ.
ಇದನ್ನೂ ಓದಿ: ಹುಳ ಕಚ್ಚಿ ವಿಚಿತ್ರ ರೀತಿಯಲ್ಲಿ ಮೃತಪಟ್ಟ ಯುವಕ
ಇದಲ್ಲದೆ, ಭಾರತದಲ್ಲಿರುವ ತನ್ನ 6.9 ಕೋಟಿ ಸದಸ್ಯರ ಆರ್ಥಿಕ ಗ್ರಾಫ್ ಆಧಾರವಾಗಿ ಲೇಬರ್ ಮಾರ್ಕೆಟ್ನ ಇನ್ಸೈಟ್ಗಳನ್ನೂ ಒದಗಿಸುತ್ತದೆ. ಇದರಲ್ಲಿ ಬೇಡಿಕೆಯಲ್ಲಿರುವ ಕೌಶಲಗಳು, ಉದಯೋನ್ಮುಖ ಉದ್ಯೋಗಗಳು, ಗ್ಲೋಬಲ್ ಹೈರಿಂಗ್ ರೇಟ್ ಮುಂತಾದವುಗಳ ವಿವರವೂ ಸಿಗಲಿವೆ.
ಲಿಂಕ್ಡ್ಇನ್ ಡೇಟಾ ಪ್ರಕಾರ, 2020ರಲ್ಲಿ ಡಿಜಿಟಲ್ ಸ್ಕಿಲ್ ಇಲ್ಲದ ವೃತ್ತಿಪರರಿಗಿಂತ ಡಿಜಿಟಲ್ ಸ್ಕಿಲ್ ಹೊಂದಿರುವ ಭಾರತೀಯ ವೃತ್ತಿಪರರ ಬೇಡಿಕೆ ಶೇಕಡ 20 ಹೆಚ್ಚು. ಹೀಗಾಗಿ ಈ ಉಚಿತ ಕಲಿಕಾ ಕೋರ್ಸ್ಗಳು ಭಾರತದ ಯುವಜನರ ಕೌಶಲ ವೃದ್ಧಿಗೆ ನೆರವಾಗಲಿದೆ ಎಂದು ಅವು ಹೇಳಿಕೊಂಡಿವೆ. (ಏಜೆನ್ಸೀಸ್)