ಯಾರು ಆ ರಾಜಕಾರಣಿ? ಮರಿಜುವಾನಾ ಟ್ರಕ್ ಯಾರಿಗೆ ಸೇರಿದ್ದು- ರಮ್ಯಾ ಪ್ರಶ್ನೆ

Ramya
Published on

ಬೆಂಗಳೂರು: ಹೊರವಲಯದ ದೇವನಹಳ್ಳಿಯ ಸಮೀಪ ಆಗಸ್ಟ್ ತಿಂಗಳ ಕೊನೆಯ ಭಾಗದಲ್ಲಿ ಸಿಸಿಬಿ ಜಪ್ತಿ ಮಾಡಿದ ಟ್ರಕ್ ಮತ್ತು ಅದರಲ್ಲಿದ್ದ 204 ಕಿಲೋ ಮರಿಜುವಾನಾ ಯಾರಿಗೆ ಸೇರಿದ್ದು? ಹೀಗೊಂದು ಪ್ರಶ್ನೆಯನ್ನು ರಮ್ಯಾ(ದಿವ್ಯಸ್ಪಂದನ) ಸಾರ್ವಜನಿಕವಾಗಿ ಎತ್ತಿದ್ದಾರೆ.

ಡ್ರಗ್ಸ್ ಕೇಸ್ ಕೆಲವು ಚಿತ್ರನಟಿಯರನ್ನು ಸುತ್ತುವರಿಯತ್ತಿರುವ ಈ ಹೊತ್ತಿನಲ್ಲೇ ಗಂಭೀರವಾದ ಈ ಪ್ರಶ್ನೆಯನ್ನು ರಮ್ಯಾ ಎತ್ತಿದ್ಧಾರೆ. ಮರಿಜುವಾನಾ ಹೊಂದಿದ್ದ ಟ್ರಕ್​ ಜತೆಗೆ ಮೂವರನ್ನು ಬಂಧಿಸಲಾಗಿತ್ತು. ಆದರೆ, ಅದು ಪ್ರಮುಖ ರಾಜಕಾರಣಿಯೊಬ್ಬರಿಗೆ ಸೇರಿದ ಮಾಲು ಎಂಬುದನ್ನು ಪತ್ರಿಕಾ ವರದಿ ಬೊಟ್ಟುಮಾಡಿದೆ. ಪತ್ರಿಕಾ ವರದಿಯಲ್ಲಿ ರಾಜಕಾರಣಿಯ ಹೆಸರನ್ನು ಉಲ್ಲೇಖಿಸಿಲ್ಲ. ಹಾಗಾದರೆ ಆ ರಾಜಕಾರಣಿ ಯಾರು? ಅವರನ್ನು ಬಂಧಿಸಲಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಅವರು ಬೆಂಗಳೂರು ಸಿಟಿ ಪೊಲೀಸ್​ ಹ್ಯಾಂಡಲನ್ನೂ ತಮ್ಮ ಪ್ರಶ್ನೆಯ ಟ್ವೀಟ್​ಗೆ ಟ್ಯಾಗ್ ಮಾಡಿದ್ದಾರೆ. ಅವರ ಈ ಪ್ರಶ್ನೆಗೆ ಪೊಲೀಸರೇನಾದರೂ ಪ್ರತಿಕ್ರಿಯಿಸುವರೇ ಎಂಬ ಕುತೂಹಲ ಸೃಷ್ಟಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net