

ಬೆಂಗಳೂರು: 2021ರಲ್ಲಿ ಜಾಗ್ವಾರ್ನ ಐಕಾನಿಕ್ ಸ್ಪೋರ್ಟ್ಸ್ ಕಾರುಗಳಿಗೆ 60 ವರ್ಷ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಜಾಗ್ವಾರ್ ಕ್ಲಾಸಿಕ್ ಇ-ಟೈಪ್ 60 ಸಂಗ್ರಹದ 6 ಬಗೆಯ ಜೋಡಿ ಇ-ಟೈಪ್ ಕಾರುಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
1691ರಲ್ಲಿ ಸ್ವಿಟ್ಜರ್ಲ್ಯಾಂಡ್ನ ಜಿನಿವಾದಲ್ಲಿ ಬಿಡುಗಡೆಯಾದ 9600 ಎಚ್ಪಿ ಮತ್ತು 77ಆರ್ ಡಬ್ಲ್ಯೂ ಇ-ಟೈಪ್ ಕಾರುಗಳಿಗೆ ಗೌರವಾರ್ಥವಾಗಿ ನೂತನ ಇ-ಟೈಪ್ 60 ಸಂಗ್ರಹದ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಪ್ರತಿ ಇ-ಟೈಪ್ 60 ಸಂಗ್ರಹದ ಕಾರುಗಳು ಒಂದು ಫ್ಲಾಟ್ಔಟ್ ಗ್ರೇ 9600 ಎಚ್ಪಿ ಕೋಪ್ ಮತ್ತು ಒಂದು ಡ್ರಾಪ್ ಎವೆರಿಥಿಂಗ್ ಗ್ರೀನ್ 77ಆರ್ ಡಬ್ಲ್ಯೂ ರೋಡ್ಸ್ಟರ್ ಕಾರನ್ನು ಹೊಂದಿರಲಿದೆ. ಎಲ್ಲ ಇ-ಟೈಪ್ 60 ಆವೃತ್ತಿಯ ಕಾರುಗಳಲ್ಲಿ ಜಾಗ್ವಾರ್ ವಿನ್ಯಾಸ ನಿರ್ದೇಶಕ ಜೂಲಿಯನ್ ಥಾಮ್ಸನ್ ಅವರ 60ನೇ ವಾರ್ಷಿಕೋತ್ಸವದ ವಿನ್ಯಾಸವನ್ನು ಅಳವಡಿಸಲಾಗಿರುತ್ತದೆ.
ಇದನ್ನೂ ಓದಿ: VIDEO: ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕ ಕಾರು ಇದು..
ಈ ಕುರಿತು ಮಾತನಾಡಿರುವ ಜಾಗ್ವಾರ್ ಕ್ಲಯಾಸಿಕ್ನ ನಿರ್ದೇಶಕ ಡಾನ್ ಪಿಂಕ್, ನೂತನ ವೈಶಿಷ್ಟ್ಯತೆಗಳನ್ನು ಒಳಗೊಂಡ ಹೊಸ ಇ-ಟೈಪ್ ಕಾರುಗಳು ವಿನ್ಯಾಸ, ಇಂಜಿನಿಯರಿಂಗ್ ಮುಂದಿನ 60 ವರ್ಷಗಳ ನಂತರವೂ ಪ್ರಸ್ತುತವಾಗಿರಲಿವೆ. ಜಾಗ್ವಾರ್ ಕ್ಲಾಸಿಕ್ನಲ್ಲಿ ಕೆಲಸ ಮಾಡುತ್ತಿರುವ ಹಲವರು ಇ-ಟೈಪ್ ಕಾರುಗಳು ಮೊದಲ ಬಾರಿ ತಯಾರಿಸಿದವರ ಸಂಬಂಧಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
ಜಾಗ್ವಾರ್ ಕ್ಲಾಸಿಕ್ ಮತ್ತು ಇ-ಟೈಪ್ ಕಾರುಗಳ ಕುರಿತು ಹೆಚ್ಚಿನ ಮಾಹಿತಿಗೆ - www.jaguar.com/classic ವೆಬ್ಸೈಟ್ಗೆ ಭೇಟಿ ನೀಡಬಹುದು ಹಾಗೂ @Jaguar ಇನ್ಸ್ಟಾಗ್ರಾಂ ಖಾತೆ ಹಿಂಬಾಲಿಸಬಹುದಾಗಿದೆ.