More

    VIDEO: ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕ ಕಾರು ಇದು..

    ಟೋಕಿಯೋ: ಟಾಟಾದವರ ನ್ಯಾನೋ ಕಾರಿಗಿಂತಲೂ ಚಿಕ್ಕ ಕಾರೊಂದನ್ನು ಜಪಾನಿನ ಕೊಕೊಅ ಮೋಟಾರ್ಸ್ ಅಭಿವೃದ್ಧಿಪಡಿಸಿದ್ದು, ಮಾರಾಟಕ್ಕೂ ಸಜ್ಜಾಗಿದೆ. ಆಗಸ್ಟ್ 11ರಿಂದಲೇ ಬುಕ್ಕಿಂಗ್ ಶುರುವಾಗಿದೆ. ಇದಕ್ಕೆ ವಾಕ್​ಕಾರ್(Walkcar) ಎಂದು ಹೆಸರಿಡಲಾಗಿದೆ. ಕರೊನಾ ಸಂಕಷ್ಟ ಕಾಲದಲ್ಲಿ ಒಂಟಿ ಪ್ರಯಾಣಕ್ಕೆ ಹೇಳಿ ಮಾಡಿಸಿದ ಕಾರು ಇದು!

    ಈ ಕಾರಿನ ತೂಕ ಕೇವಲ 2.9 ಕಿಲೋ. ಗಾತ್ರ 12 ಇಂಚಿನ ಲ್ಯಾಪ್​ಟಾಪ್ ನಷ್ಟೇ. ನೆಲಮಟ್ಟದಿಂದ 74 ಎಂಎಂ ಎತ್ತರಕ್ಕೆ ನಿಲ್ಲುವ ಈ ಕಾರು ಯಾವುದೇ ಬ್ಯಾಗ್​ನಲ್ಲಿ ಇರಿಸಿಕೊಳ್ಳಬಹುದು. ಈ ಕಾರಿನಲ್ಲಿ ಒಬ್ಬ ಮಾತ್ರವೇ ಪ್ರಯಾಣಿಸಬಹುದು. ನಗರಗಳಲ್ಲಿ ಕಾರು ಎಂದ ಕೂಡಲೇ ಪಾರ್ಕಿಂಗ್ ತಲೆ ನೋವು ಶುರುವಾಗುತ್ತದೆ. ಆದರೆ, ಈ ಕಾರಿಗೆ ಪಾರ್ಕಿಂಗ್ ತಲೆನೋವಿಲ್ಲ.. ಲ್ಯಾಪ್​ಟಾಪ್ ಬ್ಯಾಗ್ ಇದ್ದರೆ ಅದರಲ್ಲೇ ಪಾರ್ಕ್​ ಮಾಡಬಹುದು ನೋಡಿ..ಇದನ್ನೂ ಓದಿ: ರಾಜ್ಯದಲ್ಲಿ 2 ಲಕ್ಷ ದಾಟಿದ ಕರೊನಾ ಸೋಂಕಿತರ ಸಂಖ್ಯೆ; ಗುಣಮುಖರಾಗುತ್ತಿರುವವರ ಪ್ರಮಾಣ ಜಾಸ್ತಿ

    ಇದರಲ್ಲಿ ನಾಲ್ಕು ಸೆನ್ಸರ್​ಗಳಿದ್ದು ರಸ್ತೆಯ ಉಬ್ಬುತಗ್ಗುಗಳಿಗೆ ಅನುಗುಣವಾಗಿ ವೇಗವನ್ನು ನಿಯಂತ್ರಿಸುತ್ತದೆ. ಇದಕ್ಕೆ ಸ್ಟೇರಿಂಗ್ ಇಲ್ಲ. ಎಲ್ಲವನ್ನೂ ಕಾಲುಗಳಿಂದಲೇ ನಿಯಂತ್ರಿಸಬೇಕು. ಇದು ಸ್ಪೋರ್ಟ್​ ಮೋಡ್​ನಲ್ಲಿ ಗಂಟೆಗೆ 16 ಕಿ.ಮೀ ಮತ್ತು ವಾಕ್​ ಅಸಿಸ್ಟ್ ಮೋಡ್​ನಲ್ಲಿ ಗಂಟೆಗೆ 6 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಕಾರಿನ ಮೇಲ್ಮೈಯಿಂದ ಕಾಲು ತೆಗೆದರೆ ಅದು ತನ್ನಿಂತಾನೇ ನಿಂತುಬಿಡುತ್ತದೆ.
    ಈ ಕಾರಿನ ಬ್ಯಾಟರಿಯನ್ನು ಒಂದು ಗಂಟೆ ಚಾರ್ಜ್ ಮಾಡಿದರೆ ಫುಲ್ ಚಾರ್ಜ್​ ಆಗುತ್ತದೆ. ಹೀಗೆ ಒಮ್ಮೆ ಚಾರ್ಜ್ ಆದರೆ, ವಾಕ್​ ಅಸಿಸ್ಟ್​ ಮೋಡ್​ನಲ್ಲಾದರೆ 7 ಕಿ.ಮೀ. ಸಂಚರಿಸುತ್ತದೆ. ಸ್ಪೋರ್ಟ್ ಮೋಡ್​ನಲ್ಲಾದರೆ 5 ಕಿ.ಮೀ. ಸಂಚರಿಸುತ್ತದೆ. 2016ರಲ್ಲಿ ಈ ಕಾರು ನಿರ್ಮಾಣದ ವಿಚಾರವನ್ನು ಕೊಕೊಅ ಮೋಟಾರ್ಸ್ ಘೋಷಿಸಿತ್ತು. ಇದುವರೆಗೆ ಕಂಪನಿಗೆ 13 ರಾಷ್ಟ್ರಗಳಿಂದ ಒಟ್ಟು 7,800 ಮುಂಗಡ ಬುಕ್ಕಿಂಗ್ ಆಗಿದೆ. ಇದರ ಬೆಲೆ ಅಂದಾಜು 1.7 ಲಕ್ಷ ರೂಪಾಯಿ. (ಏಜೆನ್ಸೀಸ್)

    ಈ ಬೈಕ್​ಗೆ ಪೆಟ್ರೋಲ್ ಬೇಡ, ನೀರಿದ್ದರೆ ಸಾಕಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts