ರಾಜ್ಯದಲ್ಲಿ 2 ಲಕ್ಷ ದಾಟಿದ ಕರೊನಾ ಸೋಂಕಿತರ ಸಂಖ್ಯೆ; ಚೇತರಿಕೆ ಪ್ರಮಾಣ ಜಾಸ್ತಿ

covid19 20 June 20
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 2 ಲಕ್ಷದ ಗಡಿದಾಟಿದೆ. ಕಳೆದ 24 ಗಂಟೆಯಲ್ಲಿ 6,706 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದರೆ, 8,609 ಮಂದಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. 103 ಸೋಂಕಿತರು ಸಾವನ್ನಪ್ಪಿದ್ದಾರೆ.

ಹೊಸ ಕರೊನಾ ಪ್ರಕರಣಗಳಿಗಿಂತ ಡಿಸ್​ಚಾರ್ಜ್​ ಆಗುತ್ತಿರುವವರ ಸಂಖ್ಯೆಯ ಪ್ರಮಾಣ ಹೆಚ್ಚುತ್ತಿರುವುದು ಸಮಾಧಾನ ತಂದಿದೆ.
ರಾಜ್ಯದಲ್ಲಿ ಒಟ್ಟು 2,03,200 ಕರೊನಾ ಪ್ರಕರಣಗಳು ಇದ್ದು, ಅದರಲ್ಲಿ ಡಿಸ್​ಚಾರ್ಜ್​ ಆದವರು 1,21,242 ಮಂದಿ. ಮೃತಪಟ್ಟವರು 3613 ಹಾಗೂ ಸಕ್ರಿಯ ಪ್ರಕರಣಗಳು 78,337.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net