ಟ್ರಂಪ್​ ಸೋಲಿನ ಎಫೆಕ್ಟ್​: 'ಕರಡಿ'ಗೆ ಗುಮ್ಮಿದ 'ಗೂಳಿ': ಸೆನ್ಸೆಕ್ಸ್ 1600 ಅಂಕ ಜಿಗಿತ; ಹೂಡಿಕೆದಾರರ ಜೇಬು ಸೇರಿದ 7 ಲಕ್ಷ ಕೋಟಿ! Stock Market India

Bullish surge in the stock market: Sensex jumps 1,609 points; investor wealth grows by ₹7.14 lakh crore.
ಷೇರು ಮಾರುಕಟ್ಟೆಯಲ್ಲಿ ಗೂಳಿ ಆರ್ಭಟ: ಸೆನ್ಸೆಕ್ಸ್ 1,609 ಅಂಕ ಜಿಗಿತ, ಹೂಡಿಕೆದಾರರ ಸಂಪತ್ತು ₹7.14 ಲಕ್ಷ ಕೋಟಿ ವೃದ್ಧಿ.
Published on: 

ಮುಂಬೈ: ಗುರುವಾರ (ನ.5) ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹೂಡಿಕೆದಾರರ ಮುಖದಲ್ಲಿ ನಗು ತರಿಸುವಂತೆ ಮಾರ್ಕೆಟ್ ಸತತ ಆರನೇ ದಿನವೂ ಭರ್ಜರಿ ಜಿಗಿತ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಿಢೀರ್ ಕುಸಿದಿದ್ದು, ಅತ್ತ ಅಮೆರಿಕದ ವಾಲ್ ಸ್ಟ್ರೀಟ್‌ನಲ್ಲಿ ಷೇರುಗಳು ರಾಕೆಟ್ ವೇಗದಲ್ಲಿ ಏರಿದ್ದು ಭಾರತೀಯ ಮಾರುಕಟ್ಟೆಗೆ ಬೂಸ್ಟರ್ ಡೋಸ್ ನೀಡಿದಂತಾಗಿದೆ.

ಬೆಳಗಿನ ವಹಿವಾಟು ಆರಂಭವಾಗುತ್ತಿದ್ದಂತೆ ಬಿಎಸ್‌ಇ ಸೆನ್ಸೆಕ್ಸ್ (BSE Sensex) ಬರೋಬ್ಬರಿ 1,609 ಅಂಕಗಳ ಏರಿಕೆ ಕಂಡು 78,909.93 ಅಂಕಗಳ ಗಡಿ ಮುಟ್ಟಿತು. ಇತ್ತ ಎನ್‌ಎಸ್‌ಇ ನಿಫ್ಟಿ 50 (NSE Nifty 50) ಕೂಡ 455 ಅಂಕ ಜಿಗಿದು 24,415.45 ಮಟ್ಟ ತಲುಪಿತು. ಈ ಜಬರ್ದಸ್ತ್ ರ್ಯಾಲಿಯಿಂದಾಗಿ ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ 494.42 ಲಕ್ಷ ಕೋಟಿಯಿಂದ ನೇರವಾಗಿ 501.56 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆ ಕಂಡಿದೆ. ಅಂದರೆ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 7.14 ಲಕ್ಷ ಕೋಟಿ ರೂ. ಅಷ್ಟು ಹೆಚ್ಚಳವಾಗಿದೆ.

ಮಾರುಕಟ್ಟೆ ಏರಿಕೆಗೆ ಅಸಲಿ ಕಾರಣಗಳೇನು?

ಅಮೆರಿಕ ಎಲೆಕ್ಷನ್ ಎಫೆಕ್ಟ್: ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಜಯಭೇರಿ ಭಾರಿಸಿದೆ. ಇದರಿಂದಾಗಿ ಟ್ರಂಪ್ ಆಡಳಿತದ ರಿಪಬ್ಲಿಕ್​ ಪಕ್ಷ ಅಧಿಕಾರ ವಂಚಿತರಾದ ಕಾರಣ, ಇಲ್ಲಿವರೆಗೆ ನಡೆದ ಏಕಪಕ್ಷೀಯ ನಿರ್ಧಾರಗಳಿಗೆ ಕಡಿವಾಣ ಬೀಳಲಿದ್ದು, ಇರಾನ್ ಜತೆಗಿನ ಯುದ್ಧದ ಕಾರ್ಮೋಡಗಳು ಕರಗಿ ಶಾಂತಿ ಮಾತುಕತೆ ಶುರುವಾಗಬಹುದು ಎಂಬ ಆಶಾವಾದ ಹೂಡಿಕೆದಾರರಲ್ಲಿ ಮೂಡಿದೆ.

ವಾಲ್ ಸ್ಟ್ರೀಟ್‌ನಲ್ಲಿ ಹಬ್ಬ: ಅಮೆರಿಕದ ‘ಡೌ ಜೋನ್ಸ್’ ಒಂದೇ ದಿನ 1,569 ಅಂಕ (3.03%) ಜಿಗಿದು 53,356.12 ಕ್ಕೆ ತಲುಪಿದೆ. ಇದು ಏಪ್ರಿಲ್ 2025 ರ ನಂತರದ ಕಂಡಿರುವ ಅತಿ ದೊಡ್ಡ ಜಿಗಿತವಾಗಿದೆ. S&P 500 ಮತ್ತು ನಾಸ್ಡಾಕ್ ಕೂಡ ಗಣನೀಯ ಏರಿಕೆ ದಾಖಲಿಸಿವೆ.

ತೈಲ ಬೆಲೆ ಪಾತಾಳಕ್ಕೆ: ಭಾರತದ ಪಾಲಿಗೆ ಅತಿ ದೊಡ್ಡ ಸಿಹಿ ಸುದ್ದಿ ಎಂದರೆ ಕಚ್ಚಾ ತೈಲ ದರ 94 ಡಾಲಕರ್​ ಕ್ಕಿಂತ ಕೆಳಕ್ಕೆ ಇಳಿದಿರುವುದು. ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 93.65 ಡಾಲರ್​ ಕ್ಕೆ ಮತ್ತು ಡಬ್ಲ್ಯೂಟಿಐ 86.98 ಡಾಲರ್​​ಗಳಿಗೆ ಕುಸಿದಿದೆ.

ಭಾರತಕ್ಕೆ ತೈಲ ಇಳಿಕೆಯ ಲಾಭವೇನು?

ಭಾರತ ತನ್ನ ಅಗತ್ಯದ ಶೇ. 80ಕ್ಕೂ ಹೆಚ್ಚು ತೈಲವನ್ನು ವಿದೇಶದಿಂದಲೇ ತರಿಸಿಕೊಳ್ಳುತ್ತದೆ. ತೈಲ ಬೆಲೆ ಕಡಿಮೆಯಾದಷ್ಟೂ ದೇಶದಲ್ಲಿ ಹಣದುಬ್ಬರ ಇಳಿಯುತ್ತದೆ, ಕಂಪನಿಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ. ವಿಶೇಷವಾಗಿ ಪೈಂಟ್ಸ್, ವಿಮಾನಯಾನ ಮತ್ತು ಆಟೋಮೊಬೈಲ್ ಕಂಪನಿಗಳಿಗೆ ಇದರಿಂದ ನೇರ ಲಾಭವಾಗಲಿದ್ದು, ಈ ವಲಯದ ಷೇರುಗಳು ಇಂದು ದೊಡ್ಡ ಲಾಭ ಮಾಡಿವೆ.

Also Read
"ಯುದ್ಧಭೂಮಿಯಲ್ಲೂ ಸೋತರು, ಚುನಾವಣೆಯಲ್ಲೂ ಮುಗ್ಗರಿಸಿದರು: ನಮ್ಮ ಜೊತೆ ನಕ್ರಾ ಬೇಡ; ಟ್ರಂಪ್​ಗೆ ಇರಾನ್​ ಭದ್ರತಾ ಕಾರ್ಯದರ್ಶಿ ಲೇವಡಿ! Mohsen Rezaei
Bullish surge in the stock market: Sensex jumps 1,609 points; investor wealth grows by ₹7.14 lakh crore.

ಯಾವೆಲ್ಲಾ ಷೇರುಗಳು ಇಂದು ಮಿಂಚಿದವು?

ಬ್ಯಾಂಕಿಂಗ್, ಐಟಿ ಮತ್ತು ಆಟೋಮೊಬೈಲ್​ ಇಂಡಸ್ಟ್ರಿಯ ಷೇರುಗಳು ಮುಂಚೂಣಿಯಲ್ಲಿದ್ದು ಇಡೀ ಮಾರುಕಟ್ಟೆಯನ್ನು ಎತ್ತಿ ಹಿಡಿದಿವೆ.

ಟಾಪ್ ಗೇನರ್ಸ್: ಬಜಾಜ್ ಫೈನಾನ್ಸ್ ಬರೊಬ್ಬರಿ 5.57% ಏರಿಕೆ ಕಂಡು ನಂಬರ್ ಒನ್ ಸ್ಥಾನದಲ್ಲಿ ನಿಂತರೆ, ಇಂಡಿಗೋ (IndiGo) 5.06% ಲಾಭ ಕಂಡಿತು.

ಆಟೋ & ಪೈಂಟ್ಸ್: ಮಾರುತಿ ಸುಜುಕಿ 4.75%, ಏಷ್ಯನ್ ಪೇಂಟ್ಸ್ 4.62% ಹಾಗೂ ಎಂ & ಎಂ 3.76% ರಷ್ಟು ಏರಿಕೆಯಾದವು.

ಐಟಿ ದಿಗ್ಗಜರು: ಇನ್ಫೋಸಿಸ್ (3.71%), ಟಿಸಿಎಸ್ ಮತ್ತು ಟೆಕ್ ಮಹೀಂದ್ರಾ ಷೇರುಗಳು ಉತ್ತಮ ಖರೀದಿ ಕಂಡವು.

ಬ್ಯಾಂಕುಗಳು: ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಸಹ ಹಸಿರು ಬಣ್ಣಕ್ಕೆ ತಿರುಗಿವೆ.

Also Read
ಬಿಗ್‌ಬಾಸ್ ಸ್ನೇಹಕ್ಕೆ ಮದುವೆ ಮುದ್ರೆ: ರೂಮರ್ಸ್‌ಗೆ ಬಿತ್ತು ತೆರೆ, ಆರಂಭವಾಯ್ತು ‘AISHIR’ ಪಯಣ; ಹಸೆಮಣೆ ಏರಲು ಸಜ್ಜಾದ ಶಿಶಿರ್-ಐಶ್ವರ್ಯಾ!
Bullish surge in the stock market: Sensex jumps 1,609 points; investor wealth grows by ₹7.14 lakh crore.

ವಲಯವಾರು ನೋಡುವುದಾದರೆ, ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಎಕ್ಸ್-ಬ್ಯಾಂಕ್ 3.27%, ನಿಫ್ಟಿ ಐಟಿ 2.99% ಮತ್ತು ನಿಫ್ಟಿ ಆಟೋ 2.95% ರಷ್ಟು ಲಾಭ ದಾಖಲಿಸಿವೆ. ಬರೀ ದೊಡ್ಡ ಕಂಪನಿಗಳು ಮಾತ್ರವಲ್ಲದೆ, ಮಧ್ಯಮ ಮತ್ತು ಸಣ್ಣ ಗಾತ್ರದ ಷೇರುಗಳಾದ ನಿಫ್ಟಿ ಮಿಡ್‌ಕ್ಯಾಪ್ 100 (1.29%) ಮತ್ತು ಸ್ಮಾಲ್‌ಕ್ಯಾಪ್ 100 (1.13%) ಕೂಡ ಉತ್ತಮ ಏರಿಕೆ ಕಂಡವು.

ಮಾರುಕಟ್ಟೆಯಲ್ಲಿ ಅನಿಶ್ಚಿತತೆಯ ಸೂಚ್ಯಂಕವಾದ 'ಇಂಡಿಯಾ VIX' ಕೊಂಚ ಏರಿಕೆಯಾಗಿ (15.29) ಇರುವುದು ಅಲ್ಪಾವಧಿಯ ಸಣ್ಣಪುಟ್ಟ ಏರಿಳಿತಗಳನ್ನು ಸೂಚಿಸುತ್ತದೆಯಾದರೂ, ಒಟ್ಟಾರೆಯಾಗಿ ಮಾರುಕಟ್ಟೆ ಗೂಳಿಯ ಅಣತಿಯಂತೆ ನಡೆಯಲಿದೆ ಎನ್ನಲಾಗಿದೆ. ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಗಾಳಿ ಮತ್ತು ಇಳಿಕೆಯಾದ ತೈಲ ದರಗಳು ಭಾರತೀಯ ಷೇರುಪೇಟೆಯ ಉತ್ಸಾಹವನ್ನು ದುಪ್ಪಟ್ಟುಗೊಳಿಸಿವೆ ಎಂದರೆ ಸುಳ್ಳಲ್ಲ, (ಏಜೆನ್ಸೀಸ್​).