ಬಿಗ್‌ಬಾಸ್ ಸ್ನೇಹಕ್ಕೆ ಮದುವೆ ಮುದ್ರೆ: ರೂಮರ್ಸ್‌ಗೆ ಬಿತ್ತು ತೆರೆ, ಆರಂಭವಾಯ್ತು ‘AISHIR’ ಪಯಣ; ಹಸೆಮಣೆ ಏರಲು ಸಜ್ಜಾದ ಶಿಶಿರ್-ಐಶ್ವರ್ಯಾ!

Bigg Boss Jodi Shishir-Aishwarya all set to take the stage
ಹಸೆಮಣೆ ಏರಲು ಸಜ್ಜಾದ ಬಿಗ್‌ಬಾಸ್ ಜೋಡಿ ಶಿಶಿರ್-ಐಶ್ವರ್ಯಾ
Published on: 

ಬೆಂಗಳೂರು: ಕನ್ನಡ ಬಿಗ್​ಬಾಸ್​​ ಸೀಸನ್​ 11 ರಲ್ಲಿ ಭಾಗವಹಿಸಿದ್ದ ಕಿರುತೆರೆ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯಾ ಸಿಂದೋಗಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಬಿಗ್​ ಬಾಸ್​ ಬಳಿಕ ಇಬ್ಬರು ಒಟ್ಟಾಗಿ ಸೋಷಿಯಲ್​ ಮೀಡಿಯಾನಲ್ಲಿ ರೀಲ್ಸನ್​ ಮಾಡಿಕೊಂಡಿದ್ದ ಈ ಜೋಡಿ, ಇಷ್ಟು ದಿನಗಳ ತಮ್ಮ ಸ್ನೇಹಕ್ಕೆ ಹೊಸ ರೂಪ ಕೊಡಲು ಮುಂದಾಗಿದ್ದು, ತಾವಿಬ್ಬರೂ ಮದುವೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

“ಊಹೆಗಳ ಹಿಂದೆ ಒಂದು ಕಥೆಯಿತ್ತು…

ನಗುವಿನ ಹಿಂದೆ ಒಂದು ಪ್ರೀತಿಯಿತ್ತು…

ಕಮೆಂಟ್​ಗಳ ಹಿಂದೆ ನಿಮ್ಮ ಕುತೂಹಲವಿತ್ತು…

ಇಂದು ಆ ಕಥೆಗೆ ಒಂದು ಸುಂದರವಾದ ಹೆಸರಿದೆ — AISHIR!

ಇಷ್ಟು ದಿನ ನಮ್ಮ ಕಥೆಯನ್ನು ನಿಮ್ಮದೇ ಕಥೆಯಂತೆ ಪ್ರೀತಿಸಿದ ಎಲ್ಲರಿಗೂ ಧನ್ಯವಾದಗಳು.

From all the speculations to a lifetime of celebrations.

Not just a rumour anymore. It’s our forever beginning. ಎಂದು ತಮ್ಮ ಇತ್ತೀಚಿನ ವಿಡಿಯೋಗೆ ಅವರು ಬರೆದುಕೊಂಡಿದ್ದಾರೆ.

ವಿಶಿಷ್ಟ ಮಾದರಿ ವಿಡಿಯೋ!

ತಾವಿಬ್ಬರು ಮದುವೆ ಆಗುತ್ತಿರುವ ಸಂಗತಿಯನ್ನು ಶಿಶಿರ್​ ಹಾಗೂ ಐಶ್ವರ್ಯಾ ವಿಶಿಷ್ಟವಾಗಿ ವಿಡಿಯೋ ಮಾಡುವ ಮೂಲಕ ರೀವಿಲ್​ ಮಾಡಿದ್ದಾರೆ. ಜನರು ತಮ್ಮಿಬ್ಬರ ಸಂಬಂಧದ ಬಗ್ಗೆ ಮಾಡುತ್ತಿದ್ದ ಕಮೆಂಟ್​ಗಳನ್ನೇ ಕೆಂಟೆಂಟ್​ ಮಾಡಿಕೊಂಡು, ತಾವಿಬ್ಬರು ಆದಷ್ಟು ಬೇಗ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೇವೆಂದು ಅವರು ತಿಳಿಸಿದ್ದಾರೆ.

Also Read
ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಜೀವ ಬೆದರಿಕೆ: ಆಯುಷ್ಮಾನ್-ತುಷಾರ್‌ಗೆ ಫ್ರಾಂಕ್​ ಮಾಡಲು ಹೋಗಿ ಸಿಕ್ಕಿಬಿದ್ದ "ಸಿಲಿಕಾನ್ ಸಿಟಿ" ಇಂಜಿನಿಯರ್! Lawrence Bishnoi Gang
Bigg Boss Jodi Shishir-Aishwarya all set to take the stage

ತಂಗಿ ಹೇಳಿಕೆಗೆ ಶಿಶಿರ್​ ಸ್ಪಷ್ಟನೆ!

ಶಿಶಿರ್​ ಮತ್ತು ಐಶ್ವರ್ಯಾ ಅವರ ಹಳೆಯದೊಂದು ಸಂದರ್ಶದಲ್ಲಿ ಶಿಶಿರ್​ ಶಾಸ್ತ್ರಿ, ಐಶ್ವರ್ಯಾ ತಮ್ಮ ತಂಗಿ ಎಂದು ಹೇಳಿದ್ದರು. ಆದರೆ, ಆ ಹೇಳಿಕೆಗೆ ಸ್ಪಷ್ಟನೆ ನೀಡಿರುವ ನಟ, ಆ ಸಂದರ್ಶಕಿ ತಮಗೆ ಕೇವಲ ತಪ್ಪು ಉತ್ತರಗಳನ್ನು ಮಾತ್ರ ಹೇಳಲು ಹೇಳಿದ್ದರು. ಆಗ ಅವರು ನನಗೆ ಐಶ್ವರ್ಯಾ ನಿಮಗೇನಾಗಬೇಕೆಂದು ಕೇಳಿದಕ್ಕೆ ನಾನು ತಂಗಿ ಆಗಬೇಕೆಂದು ಹೇಳಿದ್ದಾಗಿ ಸ್ಟಷ್ಟನೆ ನೀಡಿದ್ದಾರೆ.

ಮದುವೆ ದಿನಾಂಕ ತಿಳಿಸಿಲ್ಲ!

ತಾವಿಬ್ಬರು ಮದುವೆ ಆಗುತ್ತಿದ್ದೆವೆಂದು ಹೇಳಿಕೊಂಡಿರುವ ಶಿಶಿರ್​ ಹಾಗೂ ಐಶ್ವರ್ಯಾ, ಯಾವಾಗ? ಎಲ್ಲಿ? ತಾವು ಮದುವೆಯಾಗಲಿದ್ದೆವೆಂದು ತಿಳಿಸಿಲ್ಲ. ಮದುವೆ ದಿನಾಂಕದ ಯಾವಾಗ ಎಂದು ಜನ ಕೇಳ್ತಾರೆ, ಎಲ್ಲದಕ್ಕೂ ಒಂದೊಂದಾಗೇ ಉತ್ತರ ಹೇಳೋಣ, ನಿಮ್ಮ ಅಶೀರ್​ ಪ್ರಯಾಣ ಇಲ್ಲಿಗೆ ಮುಗಿದಿಲ್ಲ, ಇಲ್ಲಿಂದ ಆರಂಭ ಎಂದು ತಿಳಿಸಿದ್ದಾರೆ.