ಬಿತ್ತನೆ ಆಲೂಗಡ್ಡೆ ಲಾರಿ ಎಪಿಎಂಸಿಗೆ ಬಂದರೆ ಮಾರ್ಕೆಟ್ ಸೀಲ್ಡೌನ್

Meeting Hassan 9 MAY 20
Published on

ಹಾಸನ: ಬಿತ್ತನೆ ಆಲೂಗಡ್ಡೆ ಹೊತ್ತು ತರುವ ಲಾರಿಗಳು ಯಾವ ಕಾರಣಕ್ಕೂ ಎಪಿಎಂಸಿಗೆ ಬರುವಂತಿಲ್ಲ. ಇಂತಹ ಒಂದು ಪ್ರಕರಣ ಕಂಡು ಬಂದರೂ ಮಾರುಕಟ್ಟೆ ಮುಚ್ಚುವ ಜತೆಗೆ ಎಫ್ ಐ ಆರ್ ದಾಖಲಿಸಲಾಗುವುದು ಎಂದು ಎಸ್ಪಿ ಆರ್. ಶ್ರೀನಿವಾಸ್ ಗೌಡ ಎಚ್ಚರಿಕೆ ನೀಡಿದರು.

ಎಪಿಎಂಸಿ ಕಚೇರಿಯಲ್ಲಿ ಹಮ್ಮಿಕೊಂಡಿರುವ ಸಭೆಯಲ್ಲಿ ಮಾತನಾಡಿ ಅವರು, ಜಲಂಧರ್ ನಿಂದ ಬರುವ ಲಾರಿ ಮಾಲೀಕರು ನಗರ ಪ್ರವೇಶಿಸುವಂತಿಲ್ಲ. ಕೈಗಾರಿಕಾ ಪ್ರದೇಶದಲ್ಲೇ ಅವರು ಇರಬೇಕು. ವರ್ತಕರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಇಟ್ಟುಕೊಳ್ಳಬೇಕು. ಬೆಳಗ್ಗೆ 9 ರ ನಂತರ ಮಾರಾಟ ಪ್ರಾರಂಭಿಸಬೇಕು ಎಂದು ಸೂಚಿಸಿದರು.

ಕಳೆದ ವರ್ಷ ದಿನಕ್ಕೆ 900 ರೈತರು ಎಪಿಎಂಸಿಗೆ ಭೇಟಿ ನೀಡಿದ್ದಾರೆ.‌ ಈ ಸಲ 500 ಜನರು ಮಾತ್ರ ಪ್ರತಿದಿನ ಬರುವಂತಾಗಬೇಕು. ವರ್ತಕರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿದ್ದೇವೆ. ಬಹಳ ಎಚ್ಚರಿಕೆಯಿಂದ ಇರಬೇಕು. ಲಾರಿ ಚಾಲಕ ನಗರದ ಯಾವುದೋ ರಸ್ತೆಯಲ್ಲಿ ಗಾಡಿ ನಿಲ್ಲಿಸಿ ಓಡಾಡದಂತೆ ಕ್ರಮ ವಹಿಸಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net