

ಹೆಬ್ರಿ: ಹೆಬ್ರಿಯಲ್ಲಿ ಗೋಪಾಲ ಭಂಡಾರಿ ಅಭಿಮಾನಿ ಬಳಗದ ವತಿಯಿಂದ 5ನೇ ವರ್ಷದ ಪುಣ್ಯಸ್ಮರಣೆ ಗುರುವಾರ ನಡೆಯಿತು. ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ಹೆಬ್ರಿ ತಾಲೂಕು ರಚನೆ ಸೇರಿ ನಾಡಿಗೆ ಕಾರ್ಕಳ ಶಾಸಕರಾಗಿದ್ದ ಹೆಬ್ರಿ ಗೋಪಾಲ ಭಂಡಾರಿ ಅವರು ನೀಡಿದ ಕೊಡುಗೆ ಸ್ಮರಿಸಿದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಪ್ರಧಾನ ಕಾರ್ಯದರ್ಶಿ ಎಚ್. ಜನಾರ್ಧನ್, ಚಾರ ಗ್ರಾಪಂ ಅಧ್ಯಕ್ಷ ದಿನೇಶ ಶೆಟ್ಟಿ ಹುತ್ತುರ್ಕೆ, ಹೆಬ್ರಿ ಗ್ರಾಪಂ ಸದಸ್ಯರಾದ ಎಚ್.ಬಿ.ಸುರೇಶ್, ಸಂತೋಷ ನಾಯಕ್ ಕನ್ಯಾನ, ಪ್ರಮುಖರಾದ ಶಂಕರ ಶೇರಿಗಾರ್, ಗಣೇಶ್ ದೇವಾಡಿಗ, ವಿಠ್ಠಲ ಪೂಜಾರಿ ಕರ್ಜೆ ಉಪಸ್ಥಿತರಿದ್ದರು.