ಭದ್ರವಾಗಿ ನೆಲೆಯೂರಿದೆ ಸಹಕಾರ ಚಳವಳಿ

blank

ಸಾಗರ: ಆರ್ಥಿಕ ಸಬಲೀಕರಣಕ್ಕೆ ಸಹಕಾರ ಕ್ಷೇತ್ರ ನೀಡುತ್ತಿರುವ ಕೊಡುಗೆ ದೊಡ್ಡದು. ಕರ್ನಾಟಕದಲ್ಲಿ ಗದಗದಿಂದ ಆರಂಭವಾದ ಸಹಕಾರ ಚಿಂತನೆ, ಚಳವಳಿ ರಾಜ್ಯಾದ್ಯಂತ ಭದ್ರ ಬುನಾದಿ ಕಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

blank

ವಿನೋಬನಗರದಲ್ಲಿ ಅಕ್ಷಯಸಾಗರ ಸೌಹಾರ್ದ ಸಹಕಾರಿ ಸಂಸ್ಥೆಯ ಬೆಳ್ಳಿಹಬ್ಬದ ಅಂಗವಾಗಿ ನಿರ್ಮಿಸಿರುವ ಅಕ್ಷಯ ಬೆಳ್ಳಿಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರ ಜಾತಿ, ಮತ, ಪಂಥ ಮೀರಿದ್ದು. ಶಿಕಾರಿಪುರದ ವೀರಶೈವ ಸಹಕಾರ ಸಂಘದ ಅಧ್ಯಕ್ಷನಾಗುವ ಮೂಲಕ ನಾನು ಸಹಕಾರ ಜೀವನ ಆರಂಭಿಸಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು.

ಗ್ರಾಮಾಂತರ ಪ್ರದೇಶದ ಶೇ.90ರಷ್ಟು ಜನರು ಸಹಕಾರ ಸಂಸ್ಥೆಗಳನ್ನು ನಂಬಿಕೊಂಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಅಮಿತ್ ಶಾ ಅವರು ಸಹಕಾರ ಮಂತ್ರಿಯಾಗಿ ಹೊಸ ಬದಲಾವಣೆ ತರುತ್ತಿದ್ದಾರೆ. ಎಲ್ಲ ವ್ಯವಹಾರಗಳು ಆನ್‌ಲೈನ್ ಮೂಲಕ ನಡೆಯುತ್ತಿರುವುದರಿಂದ ಅತ್ಯಂತ ಪಾರದರ್ಶಕವಾಗಿ ದೈನಂದಿನ ಚಟುವಟಿಕೆಗಳು ನಡೆಯುತ್ತಿವೆ.
ಬಿ.ವೈ.ರಾಘವೇಂದ್ರ
ಲೋಕಸಭಾ ಸದಸ್ಯ

ಕರ್ನಾಟಕದಲ್ಲಿ 1905ರಲ್ಲಿ ಸಹಕಾರ ಚಳವಳಿ ಪ್ರಾರಂಭವಾಯಿತು. ಸಹಕಾರ ಕ್ಷೇತ್ರ ಅತ್ಯಂತ ವಿಸ್ತಾರವಾಗಿ ಬೆಳೆಯುತ್ತಿರುವುದು ಸಂತೋಷದ ಸಂಗತಿ. ಸಹಕಾರ ಸಂಸ್ಥೆಯೊಂದು ಉನ್ನತ ಸ್ಥಾನಕ್ಕೆ ಹೋಗುತ್ತಿದೆ ಎಂದರೆ ಸ್ಥಳೀಯವಾಗಿ ಜನರಿಗೆ ಅನುಕೂಲವಾಗುತ್ತಿದೆ ಎಂದೇ ಅರ್ಥ. ಸಂಸ್ಥೆ ಅನೇಕ ವ್ಯಕ್ತಿಗಳು ಮತ್ತು ಸಮೂಹವನ್ನು ಒಟ್ಟಾಗಿ ತೆಗೆದುಕೊಂಡು ಮುನ್ನಡೆಸುತ್ತದೆ. ಇದು ಸಂಘಟನೆ ಫಲವಂತಿಕೆಗೆ ಕನ್ನಡಿಯಾಗಿದೆ.
ಬಿ.ಎಸ್.ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಸಾಲ ಸೌಲಭ್ಯ ನೀಡಿರುವ ಹೆಗ್ಗಳಿಕೆ ಸಹಕಾರ ಕ್ಷೇತ್ರದ್ದಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಹಕಾರ ಕ್ಷೇತ್ರದ ಅಭ್ಯುದಯಕ್ಕೆ ಹೆಚ್ಚು ಒತ್ತು ನೀಡಿದ್ದರು. ಭ್ರಷ್ಟಾಚಾರ ಇಲ್ಲದಿದ್ದರೆ ಸಹಕಾರ ಕ್ಷೇತ್ರ ಅತಿ ಎತ್ತರಕ್ಕೆ ಬೆಳೆಯಬಹುದು ಎನ್ನುವುದಕ್ಕೆ ಅಕ್ಷಯಸಾಗರ ಸೌಹಾರ್ದ ಉದಾಹರಣೆ ಎಂದರು.

ಬಿಎಸ್‌ವೈ ಗುಣಗಾನ ಮಾಡಿದ ಬೇಳೂರು: ಶಾಸಕ ಗೋಪಾಲಕೃಷ್ಣ ಬೇಳೂರು ಭಾಷಣದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗುಣಗಾನ ಮಾಡುವ ಜತೆಯಲ್ಲಿ ಅವರ ಆಶೀರ್ವಾದದಿಂದ ನಾನು ಎರಡು ಬಾರಿ ಶಾಸಕನಾದೆ ಎಂಬ ವಿಚಾರವನ್ನು ಸಾಕ್ಷೀಕರಿಸಿದರು. ಅಭಿವೃದ್ಧಿ ವಿಚಾರದಲ್ಲಿ ಯಡಿಯೂರಪ್ಪ ಅವರು ಜಿಲ್ಲೆಗೆ ನೀಡಿದ ಕೊಡುಗೆ ನೆನಪಿಸಿದಾಗ ಪ್ರೇಕ್ಷಕರಿಂದ ಹೆಚ್ಚಿನ ಘೋಷಣೆಗಳು ಮೊಳಗಿದವು.

ಸಂಸ್ಥೆಯ ದಿನವಹಿ ಬಿಡುಗಡೆ ಮಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಂಸ್ಥೆ 150 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುತ್ತಿದೆ ಎಂದರೆ ಸಂಸ್ಥೆ ಆರ್ಥಿಕವಾಗಿ ಸದೃಢವಾಗಿದೆ ಎಂದು ಅರ್ಥವಾಗುತ್ತದೆ. ಸಹಕಾರ ಸಂಸ್ಥೆಗಳು ಜನರಿಗೆ ಸಾಲ ಸೌಲಭ್ಯ ನೀಡುತ್ತವೆ. ಸಹಕಾರ ಸಂಸ್ಥೆಯನ್ನು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಸಂಸ್ಥೆಯ ಮಾರ್ಗದರ್ಶಿ, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ಸಹಕಾರ ಸಂಸ್ಥೆಗಳು ಅನೇಕ ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು. ಅಕ್ಷಯಸಾಗರ ಸೌಹಾರ್ದ ಸಹಕಾರ ಸಂಸ್ಥೆಯು 250 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸಿ ದೃಢವಾಗಿ ನಿಂತಿದೆ. ಇದಕ್ಕಾಗಿ ದುಡಿದವರ ಶಾಶ್ವತ ಪ್ರೇರಣೆ ಬೆಳ್ಳಿ ಭವನದ ನಿರ್ಮಾಣ ಎಂದು ತಿಳಿಸಿದರು.

ಆರ್ಥಿಕ ಸಮಾನತೆ ಮುಖ್ಯ: ಜಾತಿ, ಲಿಂಗ, ವರ್ಣ, ವರ್ಗ ಸಮಾನತೆಗಿಂತ ಆರ್ಥಿಕ ಸಮಾನತೆ ಅತಿಮುಖ್ಯ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಎಲ್ಲ ರಂಗಗಳು ಸಕ್ರಿಯಗೊಳ್ಳಬೇಕಾದರೆ ಆರ್ಥಿಕ ಸಮಾನತೆ ಬರಬೇಕು. ದೇಶದಲ್ಲಿ ಆರ್ಥಿಕ ಸಮಾನತೆ ತರುವಲ್ಲಿ ಸಹಕಾರ ಸಂಸ್ಥೆಗಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಠೇವಣಿ ಹಣವನ್ನು ಬಡವರಿಗೆ ಸಾಲದ ರೂಪದಲ್ಲಿ ನೀಡಿ ಅವರಲ್ಲಿ ಆರ್ಥಿಕ ಶಕ್ತಿ ತುಂಬುವ ಕೆಲಸ ಸಹಕಾರ ಕ್ಷೇತ್ರ ಮಾಡುತ್ತಿದೆ. ಬೆಳ್ಳಿ ಹಬ್ಬದಂತಹ ಸಂದರ್ಭದಲ್ಲಿ ಸುಸಜ್ಜಿತ ಭವನವನ್ನು ಸಮಾಜಕ್ಕೆ ನೀಡುತ್ತಿರುವುದು ಅಭಿನಂದನೀಯ ಸಂಗತಿ. ಆರ್ಥಿಕ ವ್ಯವಹಾರಗಳು ಸ್ವಚ್ಛ, ಪಾರದರ್ಶಕವಾಗಿ ಇದ್ದಾಗ ತನ್ನದೇ ಆದ ಮಹತ್ವ ಕಂಡುಕೊಳ್ಳುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸಾಧನೆ ಮಾಡಿರುವ ಸಹಕಾರ ಸಂಘಟನೆಯು ಜನತೆಗೆ ಮಾರ್ಗಸೂಚಿಯಾಗಿದೆ ಎಂದು ತಿಳಿಸಿದರು.

ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಮಳಲಿಮಠದ ಶ್ರೀಗಳು, ಜಡೆಮಠದ ಶ್ರೀಗಳು, ಕೋಣಂದೂರು ಬ್ರಹನ್ಮಠದ ಶ್ರೀಗಳು, ಮೂಲೆಗದ್ದೆ ಮಠದ ಶ್ರೀಗಳು, ಕ್ಯಾಸನೂರು ಮಠದ ಶ್ರಿಗಳು ಉಪಸ್ಥಿತರಿದ್ದರು.

ಪ್ರಾಮಾಣಿಕ ಪ್ರಯತ್ನದಿಂದ ಪ್ರಗತಿ: ಎಲ್ಲರ ಒಳಿತು ಬಯಸುವುದು ಸೌಹಾರ್ದ ಸಹಕಾರ ಸಂಸ್ಥೆಗಳು ಎಂದು ಆನಂದಪುರ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. ಅಕ್ಷಯಸಾಗರ ಸಂಸ್ಥೆ ಸೌಹಾರ್ದ ಮನೋಭಾವ ಬಿತ್ತುವ ಕೆಲಸ ಮಾಡುತ್ತಿದೆ. ಇಪ್ಪತ್ತೈದು ವರ್ಷಗಳ ನೆನಪಿಗೆ ಅತ್ಯಂತ ಸುಂದರವಾದ ಬೆಳ್ಳಿಭವನ ನಿರ್ಮಿಸಿರುವುದು ಸಂಸ್ಥೆಯ ಆರ್ಥಿಕ ದೃಢತೆಗೆ ಸಾಕ್ಷಿಯಾಗಿದೆ. ಕೆಳದಿ ಅರಸರು ನಡೆಸಿದ ಸಾಮ್ರಾಜ್ಯದ ನೆಲೆಯಲ್ಲಿ ಆರ್ಥಿಕ ಸಂಘಟನೆಗಳು ಗಟ್ಟಿಯಾಗಿ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಮಲೆನಾಡಿನಲ್ಲಿ ಜನರು ತಮ್ಮದೇ ಆದ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ಕಡೆ ಶರಾವತಿ ಮುಳುಗಡೆ ಸಂತ್ರಸ್ತರಿದ್ದಾರೆ. ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಣ ಎಲ್ಲದಕ್ಕೂ ಮುಖ್ಯ, ಆದರೆ ಹಣವೇ ಮುಖ್ಯವಲ್ಲ. ಸಹಕಾರ ಕ್ಷೇತ್ರದಲ್ಲಿ ಮೋಸ ಮಾಡದೆ ಸಂಸ್ಥೆಯನ್ನು ಮುನ್ನಡೆಸಿದರೆ ವ್ಯವಸ್ಥಿತವಾಗಿ ಪ್ರಗತಿ ಕಾಣುತ್ತದೆ ಎಂಬುದಕ್ಕೆ ಬೆಳ್ಳಿಭವನವೇ ಸಾಕ್ಷಿ ಎಂದು ತಿಳಿಸಿದರು.

ಅಕ್ಷಯಸಾಗರ ಸೌಹಾರ್ದ ಸಹಕಾರಿ ಅಧ್ಯಕ್ಷ ಬಿ.ಜಿ.ದಿನೇಶ್ ಬರದವಳ್ಳಿ, ಮಾಜಿ ಸಚಿವ ಹರತಾಳು ಹಾಲಪ್ಪ, ನಂಜನಗೌಡ್ರು, ಎ.ಆರ್.ಪ್ರಸನ್ನಕುಮಾರ್, ಬಿ.ಎಚ್.ಮಲ್ಲಿಕಾರ್ಜುನ ಹಕ್ರೆ, ಬಿ.ಎ.ಇಂದೂಧರ ಗೌಡ, ಚಂದ್ರಶೇಖರ್ ನಾಗಭೂಷಣ್ ಕಲ್ಮನೆ, ಎಂ.ಎಚ್.ಗೌಡ್ರು, ಬಸಪ್ಪ ಗೌಡ್ರು ಕೆರೋಡಿ, ಜಗದೀಶ್ ಒಡೆಯರ್, ಎಂ.ಎಸ್.ಗೌಡರ್, ನಂದಿನಿ ಬಸವರಾಜ್, ಲೋಕನಾಥ್ ಬಿಳಿಸಿರಿ ಇತರರಿದ್ದರು.

ಸಂಗೀತಕ್ಕಿದೆ ಬದುಕಿಗೆ ಚೈತನ್ಯ ತುಂಬುವ ಶಕ್ತಿ

Share This Article
blank

ಬೆಳಿಗ್ಗೆ ಈ ಸೂಪರ್​ ಫುಡ್​ಗಳನ್ನು ಸೇವಿಸಿ: ನಿಮ್ಮ ದೇಹದಲ್ಲಾಗುವ ಸಕಾರಾತ್ಮಕ ಬದಲಾವಣೆ ಗಮನಿಸಿ | Superfoods

Superfoods: ಸಾಮಾನ್ಯವಾಗಿ ಬೆಳಗಿನ ಸಮಯವು ದಿನಪೂರ್ತಿ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಎದ್ದ ತಕ್ಷಣ ನೀವು ಏನು ಮಾಡುತ್ತೀರಿ…

ರಸ್ತೆಯಲ್ಲಿ ಬಿದ್ದಿರುವ ಇಂತಹ ವಸ್ತುಗಳನ್ನು ದಾಟಿದ್ರೆ ಕೆಟ್ಟ ಸಮಯ ಆರಂಭವಾಗುತ್ತಂತೆ!: ಏನೀ ವಸ್ತುಗಳು ತಿಳಿಯಿರಿ.. | Vastu

Vastu : ರಸ್ತೆಯಲ್ಲಿ ಹಾಗಾಗ ವಿಚಿತ್ರ ವಸ್ತುಗಳು ಬಿದ್ದಿರುವುದನ್ನು ನಾವು ಗಮನಿಸುತ್ತೇವೆ. ಈ ವಸ್ತುಗಳ ಬಗ್ಗೆ…

blank