ಕೃಷಿಕರಿಗೆ ಅನ್ಯಾಯ ಆಗಲು ಬಿಡಲ್ಲ, ರೈತ ಮುಖಂಡರೇ ಚರ್ಚೆಗೆ ಬನ್ನಿ: ಸಿಎಂ ಯಡಿಯೂರಪ್ಪ

BSY
Published on

ಬೆಂಗಳೂರು: ವಿವಿಧ ಸಂಘಟನೆಗಳು ಕರ್ನಾಟಕ ಬಂದ್​ಗೆ ಕರೆನೀಡಿ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಿಎಂ ಬಿ.ಎಸ್​.ಯಡಿಯೂರಪ್ಪ ತುರ್ತು ಸುದ್ದಿಗೊಷ್ಠಿ ನಡೆಸಿದರು.

ನಾನು ರೈತರ ಪರ ಇದ್ದೇನೆ. ರೈತ ಸಮುದಾಯಕ್ಕೆ ಧಕ್ಕೆಯಾಗಲು ಬಿಡಲ್ಲ. ಇನ್ಮುಂದೆ ಯಾರೂ ಬೇಕಾದರೂ ಕೃಷಿ ಭೂಮಿಯನ್ನು ಕೊಂಡುಕೊಳ್ಳಬಹುದು. ಅನ್ನದಾತರ ಅನುಕೂಲಕ್ಕಾಗಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಕೃಷಿ ಉತ್ಪನ್ನಗಳನ್ನು ರೈತರು ಎಲ್ಲಿ ಬೇಕಾದರೂ ಮಾರಾಟ ಮಾಡಬಹದು. ನಾವು ನೀರಾವರಿ ಜಮೀನನ್ನು ಕೃಷಿಗೆ ಮಾತ್ರ ಉಪಯೋಗಿಸಬೇಕು. ಎಪಿಎಂಸಿ ಬಾಗಿಲು ಬಂದ್​ ಮಾಡಲ್ಲ. 6 ತಿಂಗಳ ಬಳಿಕ ಪರಿಣಾಮ ಗೊತ್ತಾಗಲಿದೆ ಎಂದು ಸ್ಪಷ್ಟಪಡಿಸಿದ ಸಿಎಂ, ಅನಾವಶ್ಯಕವಾಗಿ ರೈತರನ್ನು ಗೊಂದಲಕ್ಕೆ ದೂಡಬೇಡಿ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು. ನಾನು ರೈತರ ಸ್ವಾತಂತ್ರ್ಯಕ್ಕಾಗಿ ಅನೇಕ ವರ್ಷ ಹೋರಾಟ ಮಾಡಿದ್ದೇನೆ. ರೈತರ ಭವಿಷ್ಯಕ್ಕಾಗಿ ಕಾಯ್ದೆ ತಿದ್ದುಪಡಿ ಮಾಡಲಾಗಿದೆ ಎಂದು ವಿವರಿಸಿದರು.

ಭೂ ಸುಧಾರಣೆ ಕಾಯ್ದೆಯಿಂದಲೂ ರೈತರಿಗೆ ಅನುಕೂಲವಿದೆ. ಸಣ್ಣ ಹಿಡುವಳಿದಾರ ಭೂಮಿ ಖರೀದಿಸುವಂತಿಲ್ಲ. ಪರಿಶಿಷ್ಟ ಜಾತಿ-ಪಂಗಡದ ಜಮೀನನ್ನು ಕೊಂಡುಕೊಳ್ಳಲು ಅಧಿಕಾರವಿಲ್ಲ. ಐದು ಜನರಿರುವ ಕುಟುಂಬಕ್ಕೆ 54 ಎಕರೆ ಜಮೀನು ಖರೀದಿಗೆ ಅವಕಾಶವಿದೆ. ಕೃಷಿಕರ ಅನುಕೂಲಕ್ಕಾಗಿ ಯಾವುದೇ ಮಾರ್ಪಡಿಗೂ ಸಿದ್ಧನಿದ್ದೇನೆ ಎಂದ ಸಿಎಂ ಯಡಿಯೂರಪ್ಪ, ರೈತ ಮುಖಂಡರನ್ನು ಚರ್ಚೆಗೆ ಆಹ್ವಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net