

ಬೆಂಗಳೂರು: ರೈತ ವಿರೋಧಿ ಮಸೂದೆ ಜಾರಿ ಖಂಡಿಸಿ ರಾಜ್ಯಾದ್ಯಂತ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ರಾಜಧಾನಿಯಲ್ಲೂ ಸಹಸ್ರಾರು ಸಂಖ್ಯೆಯ ಹೋರಾಟಗಾರು ವಿವಿಧಡೆ ಹಲವು ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸುತ್ತಿದ್ದಾರೆ.
ಟೌನ್ ಹಾಲ್ನಲ್ಲಿ ಐಕ್ಯ ಸಮಿತಿ ಹಾಗೂ ರೈತ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದು, ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್ವರೆಗೆ ರ‍್ಯಾಲಿ ಹೊರಟಿದ್ದಾರೆ. ಮೌರ್ಯ ಸರ್ಕಲ್ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸಾರಥ್ಯದ ರಾಜ್ಯ ರೈತ ಸಂಘ ಹಸಿರು ಸೇನೆ, ಮೆಜೆಸ್ಟಿಕ್‍ನಲ್ಲಿ ರೈಲು ತಡೆ- ನಾರಾಯಣಗೌಡ ನೇತೃತ್ವದ ಕರವೇ, ಸುಮ್ಮನಹಳ್ಳಿ ಸರ್ಕಲ್– ಗಿರೀಶ್ ಗೌಡ ನೇತೃತ್ವದ ರಾಜ್ಯ ರೈತ ಸಂಘಟನೆ, ಡಾ.ರಾಜಕುಮಾರ್ ಸಮಾಧಿ (ಲಗ್ಗರೆ ಜಂಕ್ಷನ್)– ಕರ್ನಾಟಕ ರಕ್ಷಣಾ ವೇದಿಕೆ, ಕೆಪಿಸಿಸಿ ಕಚೇರಿ– ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯುತ್ತಿದೆ. ಇದನ್ನೂ ಓದಿರಿ ರೈತ ಹೋರಾಟಗಾರರ ಫೋನ್ ಕದ್ದಾಲಿಕೆ! ಸರ್ಕಾರದ ವಿರುದ್ಧ ಕಿಡಿಕಾರಿದ ಮಾಜಿ ಸಚಿವ
ಮೆಜೆಸ್ಟಿಕ್ನಲ್ಲಿ ಪೊಲೀಸರ ವಶಕ್ಕೊಳಗಾದ ಕರವೇ ಕಾರ್ಯಕರ್ತರು ಬಸ್ಸಿನಿಂದ ಕೆಳಗಿಳಿದು ಆನಂದ್ ರಾವ್ ಫ್ಲೈ ಓವರ್ ಮೇಲೆ ರಸ್ತೆ ತಡೆದು ಪ್ರತಿಭಟನೆಗೆ ಮುಂದಾಗಿದ್ದರು. ಮತ್ತೆ ಕಾರ್ಯಕರ್ತರನ್ನು ಬಸ್ಸಿಗೆ ಹತ್ತಿಸಿ ಪೊಲೀಸರು ಕಳುಹಿಸಿದ್ದಾರೆ. ಸದ್ಯ ಟೌನ್‌ಹಾಲ್‌ನಲ್ಲಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. (ಇದಿಷ್ಟು ಮಧ್ಯಾಹ್ನ 12ರ ವರದಿ)