ಸಿನಿಮಾ

ನೂತನ ಶಾಸಕ ಜಮೀರ್​ ಅಹ್ಮದ್​ಗೆ ಸಚಿವ ಸ್ಥಾನ ನೀಡಬಾರದು ಎಂದು ಒತ್ತಡ…

ಬೆಂಗಳೂರು: ಜಮೀರ್ ವಿರುದ್ಧ ಸಿಡಿದೆದ್ದ ಚಾಮರಾಜಪೇಟೆ ನಾಗರೀಕರು ಇದೀಗ ಜಮೀರ್ ಸಚಿವರಾಗಬಾರದು ಎಂದು ಒತ್ತಡ ತರುತ್ತಿದ್ದಾರೆ.

ಯಾವುದೇ ಕಾರಣಕ್ಕೂ ಜಮೀರ್ ಗೆ ಪ್ರಮಾಣ ವಚನ ಬೋಧಿಸಬಾರದು ಎಂದು ಪಟ್ಟು ಹಿಡಿದಿದ್ದು ಸಚಿವ ಸ್ಥಾನ ನೀಡಬಾರದು ಎಂದು ನವ ಭಾರತ ಸೇನಾ ಪಕ್ಷದ ಸಂಚಾಲಕ ರುಕ್ಮಾಂಗದ ಒತ್ತಡ ತರುತ್ತಿದ್ದಾರೆ. ಒತ್ತಡ ತರಲು, ರಾಜ್ಯಪಾಲರಿಗೆ ಪ್ರಮಾಣ ವಚನ ಬೋಧಿಸಬಾರದು ಎಂದು ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.

ಮನವಿ ಪ್ರಕಾರ ಯಾಕೆ ಸಚಿವ ಸ್ಥಾನ ಸಿಗಬಾರದು?

ಶಾಸಕ ಜಮೀರ್ ಅಹ್ಮದ್​ಗೆ ಸಚಿವ ಸ್ಥಾನ ಯಾಖೆ ನೀಡಬಾರದು ಎಂದು ವಿವರಣೆ ನೀಡಿರುವ ನವಭಾರತ ಸೇನಾ ಪಕ್ಷದ ಅಧ್ಯಕ್ಷ ರುಕ್ಮಾಂಗದ “ಚುನಾವಣಾ ಸಮಯದಲ್ಲಿ ನಾಮಪತ್ರ ಸಲ್ಲಿಕೆಯಲ್ಲಿ ದೋಷಗಳಾಗಿದ್ದ ಹಿನ್ನಲೆಯಲ್ಲಿ ಆಗಲೇ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆವು. ಆದರೆ ಚುನಾವಣಾ ಅಧಿಕಾರಿಗಳು ಚುನಾವಣೆಗೆ ಅವಕಾಶ ಕೊಟ್ಟಿದ್ದರು. ಈಗ ನಾವು ಜನಪ್ರತಿನಿಧಿಗಳ ಕೋರ್ಟ್​ನಲ್ಲಿ ದಾವೆ ಹೂಡಲಿದ್ದೇವೆ.

ಈಗ ನಾವು ಸಚಿವ ಸ್ಥಾನ ಕೊಡಬಾರದು. ಸಚಿವ ಸ್ಥಾನ ಕೊಟ್ಟರೆ, ಅವರ ಸಚಿವ ಸ್ಥಾನದ ಬಲದಿಂದ ಕೇಸ್ ಮುಚ್ಚಿ ಹಾಕುತ್ತಾರೆ. ಹೀಗಾಗೀ ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ಬೋಧನೆ ಮಾಡ್ಬಾರದು ಎಂದು ಆಗ್ರಹ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಇನ್ನು ಗವರ್ನರ್​ಗೆ ಬರೆದಿರುವ ಪತ್ರದಲ್ಲಿ “ಬೆಂಗಳೂರು ನಗರದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಶ್ರೀ ಜಮೀರ್ ಅಹಮದ್ ಖಾನ್ ಅವರು ನಾಳೆ ನೂತನ ಸರ್ಕಾರದಲ್ಲಿ ಸಚಿವರಾಗಲಿದ್ದಾರೆ. ನಾಮಪತ್ರ ಸಲ್ಲಿಸುವ ಸಮಯದಲ್ಲಿ ಅವರು ಚುನಾವಣಾಧಿಕಾರಿಗೆ ದೋಷಪೂರಿತ ನಾಮಪತ್ರ ಸಲ್ಲಿಸಿದ್ದಾರೆ. ಅಪೂರ್ಣವಾದ ನಾಮನಿರ್ದೇಶನ ಪತ್ರವನ್ನು ನಾವು ಗಮನಿಸಿದ್ದೇವೆ. ನಾವು ಈಗಾಗಲೇ ROಗೆ ತಿಳಿಸಿರುತ್ತೇವೆ. ಆದರೆ ಅವರು ಕಾನೂನು ಕ್ರಮ ಕೈಗೊಂಡಿಲ್ಲ.

ಆದರೂ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಿದ್ದಾರೆ. ಈ ಬಗ್ಗೆ ಆಯೋಗಕ್ಕೆ ದೂರು ನೀಡಿದರೂ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಜಮೀರ್ ಅಹ್ಮದ್ ವಿರುದ್ಧ ನ್ಯಾಯಾಲಯದಲ್ಲಿ ದೂರು (ಪ್ರಕರಣ) ದಾಖಲಿಸುತ್ತಿದ್ದೇವೆ. ತಪ್ಪು ಮಾಹಿತಿ ನೀಡಿರುವ ಜಮೀರ್ ಅಹಮದ್ ಖಾನ್ ಹಾಗೂ ಚುನಾವಣಾಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಈ ಪ್ರಕರಣದಲ್ಲಿ ಜಮೀರ್ ಅಹಮದ್ ಖಾನ್ ಹೊಸ ಸರ್ಕಾರದ ಭಾಗವಾಗಿ ಸಚಿವರಾದರೆ ಅದರಿಂದ ನ್ಯಾಯ ಸಿಗಲು ಸಮಯ ಹಿಡಿಯಬಹುದು. ಅಧಿಕಾರಕ್ಕೆ ಏರಿಸ ನಂತರ ಅವರು ಅನೇಕ ರೀತಿಯಲ್ಲಿ ಸಾಕ್ಷಿಗಳ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ನಮ್ಮ ಕಾನೂನು ಹೋರಾಟ ಮುಗಿಯುವವರೆಗೂ ಮಾನ್ಯ ಜಮೀರ್ ಅಹಮದ್ ಖಾನ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಬಿಡಬಾರದು ಎಂಬುದು ನಮ್ಮ ಕಳಕಳಿ.” ಎಂದು ಬರೆಯಲಾಗಿದೆ.

Latest Posts

ಲೈಫ್‌ಸ್ಟೈಲ್