ಹೌದು, ಜನರ ನೆಚ್ಚಿನ ಪವರ್ ಸ್ಟಾರ್ ಕೊನೆಯದಾಗಿ ನಟಿಸಿದ ಚಿತ್ರ ಅಂದರೆ ಅದು 'ಜೇಮ್ಸ್'. ಹಾಗಾಗಿ, ಈ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳು ಅಪ್ಪು ಅವರನ್ನು ಮತ್ತೊಂದು ಬಾರಿ ತೆರೆ ಮೇಲೆ ಕಂಡು ಕಣ್ತುಂಬಿಕೊಳ್ಳಬಹುದು. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಶೀಘ್ರದಲ್ಲೇ ಬಿಡುಗಡೆಯಾಗುತ್ತದೆ. ಆದರೆ, ಅಪ್ಪು ಇನ್ನು ನಟಿಸಬೇಕಿದ್ದ ಸಿನಿಮಾಗಳನ್ನು ತೆರೆಯ ಮೇಲೆ ತರಲು ಆ ಸಿನಿಮಾಮಂದಿಯ ಆಸೆಯಾಗಿದೆ. ಜೊತೆಗೆ, ಪುನೀತ್ ಅಭಿಮಾನಿಗಳಿಗೂ ಅಪ್ಪು ನಟಿಸಲು ಒಪ್ಪಿಕೊಂಡ ಆ ಕೊನೆಯ ಸಿನಿಮಾಗಳನ್ನು ತೆರೆ ಮೇಲೆ ಕಾಣುವ ಹಂಬಲವಿದೆ.