ಥ್ಯಾಂಕ್ ಗಾಡ್​ಗೆ ಲಂಕಾದ ಮನಕೆ ಮಗೆ ಹಿತೆ ಹಾಡು

Nora
Published on

ಸೋಷಿಯಲ್ ಮೀಡಿಯಾ ಮತ್ತು ಶಾರ್ಟ್ ವಿಡಿಯೋ ಆಪ್​ಗಳಲ್ಲಿ ಸಖತ್ ಸದ್ದು ಮಾಡುತ್ತಿದೆ ಸಿಂಹಳಿ ಭಾಷೆಯ ‘ಮನಕೆ ಮಗೆ ಹಿತೆ ...’ ಹಾಡು. ಇದೀಗ ಅದರ ಜನಪ್ರಿಯತೆಗೆ ಮನಸೋತಿರುವ ಬಾಲಿವುಡ್ ನಿರ್ವಪಕರು, ಆ ಹಾಡನ್ನು ಹಿಂದಿಯಲ್ಲಿಯೂ ಬಳಸಿಕೊಳ್ಳಲು ಮುಂದಾಗಿದ್ದಾರೆ.

ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ, ರಾಕುಲ್ ಪ್ರೀತ್ ಸಿಂಗ್ ನಟಿಸುತ್ತಿರುವ ‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ‘ಮನಕೆ ಮಗೆ ಹಿತೆೆ ...’ ಹಿಂದಿ ವರ್ಷನ್ ಕೇಳಿಸಲಿದೆ. ವಿಶೇಷ ಏನೆಂದರೆ, ಈ ಹಾಡಿನಲ್ಲಿ ಬಿಟೌನ್ ಹಾಟ್ ಬೆಡಗಿ ನೋರಾ ಫತೇಹ್ ಹೆಜ್ಜೆ ಹಾಕಲಿದ್ದಾರೆ. ಮೂಲ ಹಾಡನ್ನು ಹಾಡಿದ ಯೊಹಾನಿ ಅವರೇ ಹಿಂದಿಗೂ ಧ್ವನಿಯಾಗುತ್ತಾರಾ ಎಂಬುದು ಸದ್ಯದ ಕುತೂಹಲ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net