ಮಾಯಾಮೃಗದ ಹಿಂದೆ ಯತಿರಾಜ್

Mayamraga
Published on

ರಾಮಾಯಣದ ಮಾಯಾಮೃಗ ಪ್ರಸಂಗವನ್ನೇ ಪ್ರಸ್ತುತ ಕಾಲಘಟ್ಟಕ್ಕೆ ಹೊಂದಿಸಿಕೊಂಡು ಸಿನಿಮಾ ಮಾಡುತ್ತಿದ್ದಾರೆ ನಟ-ನಿರ್ದೇಶಕ ಯತಿರಾಜ್. ಈ ಚಿತ್ರದಲ್ಲಿ ನಟನೆ ಜತೆಗೆ ನಿರ್ದೇಶನವೂ ಅವರದ್ದೇ. ಇತ್ತೀಚೆಗಷ್ಟೇ, ಈ ಚಿತ್ರದ ಮುಹೂರ್ತ ನೆರವೇರಿದೆ. ‘ಡಾರ್ಲಿಂಗ್’ ಕೃಷ್ಣ ಆಗಮಿಸಿ ಚಿತ್ರಕ್ಕೆ ಶುಭ ಕೋರಿದ್ದಾರೆ. ಹಾಗಾದರೆ ಏನಿದು ಮಾಯಾಮೃಗ? ಈ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಯತಿರಾಜ್, ‘ರಾಮಾಯಣದ ಕಥೆಯನ್ನೇ ಪ್ರಸ್ತುತತೆಗೆ ಬಳಸಿಕೊಂಡಿದ್ದೇವೆ.

ಇದೆಲ್ಲದರ ಜತೆಗೆ ನಾಯಕ ನಾಯಕಿಯ ವಯಸ್ಸಿನ ಅಂತರವೂ ಸಿನಿಮಾದ ಹೈಲೈಟ್​ಗಳಲ್ಲೊಂದು. ಆ ಪಾತ್ರದ ಬಯಕೆ, ಅದರ ನಿರೀಕ್ಷೆ ... ಇದೆಲ್ಲ ಸಿನಿಮಾದಲ್ಲಿ ಕಾಣಿಸುತ್ತದೆ. ಯುಗಾದಿ ಕಳೆದ ಮೇಲೆ ಚಿತ್ರೀಕರಣ ಶುರುವಾಗಲಿದೆ’ ಎನ್ನುತ್ತಾರೆ. ಚಿತ್ರದ ನಾಯಕಿ ಸೋನು ಸಾಗರ ಸಹ ಖುಷಿಯಲ್ಲಿದ್ದರು. ‘ಯತಿರಾಜ್ ಅವರು ನನ್ನ ಗುರುಗಳು. ಅವರ ನಿರ್ದೇಶನದ ‘ಸೀತಮ್ಮನ ಮಗ’ ಚಿತ್ರದಲ್ಲಿಯೂ ನಟಿಸುವ ಅವಕಾಶ ನೀಡಿದ್ದರು. ಇದೀಗ ಇಲ್ಲಿಯೂ ಮುಂದುವರಿದಿದೆ’ ಎಂದರು.

ಇಲ್ಲಿಯವರೆಗೂ ಪೊಲೀಸ್ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದ ಅರವಿಂದ್ ರಾವ್ ಅವರಿಗೆ ಇಲ್ಲೂ ಪೊಲೀಸ್ ಪಾತ್ರ ಸಿಕ್ಕಿದೆಯಂತೆ. ಸ್ನೇಹಿತ ಯತಿರಾಜ್ ಸಲುವಾಗಿ ಈ ಸಿನಿಮಾ ಒಪ್ಪಿಕೊಂಡಿದ್ದೇನೆ ಎನ್ನುವ ಅರವಿಂದ್ ರಾವ್, ಇನ್ನು ಮುಂದೆ ಪೊಲೀಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದರು. ಈ ಚಿತ್ರವನ್ನು ಜಯಲಕ್ಷ್ಮೀ ನಿರ್ಮಾಣ ಮಾಡುತ್ತಿದ್ದಾರೆ. ವಿನು ಮನಸ್ಸು ಸಂಗೀತ ನೀಡಲಿದ್ದಾರೆ. ಶಶಿ ಸಹ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net