ಈಗಾಗಲೇ, ಚಿತ್ರದ ಪ್ರಚಾರಕ್ಕೆ ಸಿನಿಮಾತಂಡ, ನಿರ್ಮಾಪಕರ ವತಿಯಿಂದ ಸಿದ್ಧತೆಗಳು ನಡೆಯುತ್ತಿವೆ. ಪ್ರಪಂಚದಾದ್ಯಂತ ಇರುವ ಪ್ರಮುಖ ಥಿಯೇಟರ್ಗಳಲ್ಲಿ ಕೆಲವು ಸ್ಟ್ಯಾಂಡಿಗಳು, ಪೋಸ್ಟರ್ಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ತಯಾರಿ ಕೂಡಾ ನಡೆಯುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ, ಸ್ಟ್ಯಾಂಡಿಗಳು ವಿಶೇಷವಾಗಿ ವಿನ್ಯಾಸಗೊಂಡಿವೆ. ಜತೆಗೆ, ಅವು ಹೇಗೆ ಕಾಣುತ್ತಿವೆ ಎಂದು ತಿಳಿಸಲು ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಸಿನಿಮಾತಂಡದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಪ್ರಚಾರಕಾರ್ಯಕ್ಕೆ ಪ್ಲ್ಯಾನ್ಗಳು ನಡೆಯುತ್ತಿವೆ.