ಹೌದು, ನಟ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ 'ಪುಷ್ಪಾ'ದಂತಹ ಬ್ಲಾಕ್ ಬಸ್ಟರ್ ಸಿನಿಮಾದಿಂದ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ಸಹ ಫುಲ್ ಪ್ರಭಾವಿತರಾಗಿದ್ದಾರೆ. ಇನ್ನು, ಈಗಲೂ ಟ್ರೆಂಡಿಂಗ್ ಎನಿಸಿಕೊಂಡಿರುವ ಜನಪ್ರಿಯ ಹಾಡಾದ 'ಶ್ರೀವಲ್ಲಿ'ಯ ಬೆಂಗಾಲಿ ವರ್ಷನ್ ಯೂಟ್ಯೂಬ್ನಲ್ಲಿ ರಿಲೀಸ್ ಆಗಿದ್ದು, ಇದಕ್ಕೆ ನಮ್ಮ ದೇಶದ ಸೂಪರ್ ಎನರ್ಜಿಟಿಕ್ ಗಾಯಕಿ ಎಂದು ಕರೆಸಿಕೊಂಡಿರುವ ಉಷಾ ಉತ್ತುಪ್ ಅವರು ಧ್ವನಿಯಾಗಿದ್ದಾರೆ.