ಯಶ್​ ಪಾಲಿಗೆ ನಾಳೆ ವಿಶೇಷ ದಿನ ... ಯಾಕೆ ಗೊತ್ತಾ?

Yash - Final
Published on

'ರಾಕಿಂಗ್​ ಸ್ಟಾರ್​' ಯಶ್​ ಪಾಲಿಗೆ ನಾಳೆ ಶನಿವಾರ (ಜೂನ್​ 18) ವಿಶೇಷವಾದ ದಿನ. ಈ ಸಂಬಂಧ ಅವರು ಅಭಿಮಾನಿಗಳು ಕಾಮ್​ನ್​ ಡಿಸ್​ಪ್ಲೇ ಪಿಕ್ಚರ್​ಗಳನ್ನು ಮಾಡಿಕೊಂಡು ಸಂಭ್ರಮ ಪಡುತ್ತಿದ್ದಾರೆ.

ಇಷ್ಟಕ್ಕೂ ನಾಳೆ ಅಂತಹ ವಿಶೇಷವೇನು? ಎಂಬ ಪ್ರಶ್ನೆ ಬರುವುದು ಸಹಜ. ಯಶ್​ ಮೊದಲ ಬಾರಿಗೆ ಹೀರೋ ಆಗಿ ಕಾಣಿಸಿಕೊಂಡ ಮೊದಲ ಚಿತ್ರ 'ಮೊಗ್ಗಿನ ಮನಸ್ಸು' ಬಿಡುಗಡೆಯಾಗಿ ನಾಳೆಗೆ 12 ವರ್ಷಗಳಾಗುತ್ತವೆ. 2008ರ ಜುಲೈ 18ಕ್ಕೆ ಶಶಾಂಕ್​ ನಿರ್ದೇಶನದ 'ಮೊಗ್ಗಿನ ಮನಸ್ಸು' ಚಿತ್ರ ಬಿಡುಗಡೆಯಾಗಿತ್ತು.

ಈ ಸಂಭ್ರಮವನ್ನು ಆಚರಿಸಲು ಯಶ್​ ಅಭಿಮಾನಿಗಳು ತೀರ್ಮಾನಿಸಿದ್ದು, ಯಶ್​ ವೃತ್ತಿಜೀವನದ ಮಹತ್ವದ ಚಿತ್ರದ ಫೋಟೋಗಳನ್ನಿಟ್ಟುಕೊಂಡು ಒಂದು ಸಿಡಿಪಿ ಮಾಡಿದ್ದಾರೆ. '12 ಇಯರ್ಸ್​ ಆಫ್​ ಯಶ್​' ಎಂಬ ಈ ಪೋಸ್ಟರ್​ನಲ್ಲಿ ಯಶ್​ ಅಭಿನಯದ 'ಕೆಜಿಎಫ್​', 'ಕೆಜಿಎಫ್​ 2', 'ಮಿಸ್ಟರ್​ ಆಂಡ್​ ಮಿಸಸ್​ ರಾಮಾಚಾರಿ', 'ರಾಜಾಹುಲಿ', 'ಗಜಕೇಸರಿ' ಸೇರಿದಂತೆ ಹಲವು ಚಿತ್ರಗಳ ಫೋಟೋಗಳು ಇವೆ. ಅಖಿಲ್​ ಎಪ್ಪಲಪಲ್ಲಿ ಎಂಬುವವರು ಡಿಸೈನ್​ ಮಾಡಿರುವ ಈ ಪೋಸ್ಟರ್​ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ಸದ್ಯ ಲಾಕ್​ಡೌನ್​ನಿಂದಾಗಿ, ಕುಟುಂಬದೊಂದಿಗೆ ಹ್ಯಾಪಿಯಾಗಿರುವ ಯಶ್​, ಆದಷ್ಟು ಬೇಗ ಚಿತ್ರೀಕರಣಕ್ಕೆ ಮರಳುವುದಕ್ಕೆ ಎದುರು ನೋಡುತ್ತಿದ್ದಾರೆ. ಇಷ್ಟರಲ್ಲಾಗಲೇ, ಯಶ್​ ಅಭಿನಯದ 'ಕೆಜಿಎಫ್​ 2' ಚಿತ್ರದ ಚಿತ್ರೀಕರಣ ಮುಗಿದು, ಪ್ರಚಾರ ಕಾರ್ಯ ಶುರುವಾಗಬೇಕಿತ್ತು.

ಮೂರ್ನಾಲ್ಕು ತಿಂಗಳುಗಳ ಹಿಂದೆಯೇ 'ಕೆಜಿಎಫ್​ 2' ಚಿತ್ರವು ಅಕ್ಟೋಬರ್​ 23ಕ್ಕೆ ಬಿಡುಗಡೆಯಾಗುತ್ತದೆ ಎಂದು ಘೋಷಿಸಲಾಗಿತ್ತು. ಆದರೆ, ಚಿತ್ರದ ಚಿತ್ರೀಕರಣ ಇನ್ನೂ ಪೂರ್ತಿಯಾಗಿಲ್ಲ. ಇನ್ನೂ 20 ದಿನಗಳ ಚಿತ್ರೀಕರಣ ಬಾಕಿ ಇದ್ದು, ಕರೊನಾ ಹಾವಳಿ ಸ್ವಲ್ಪ ತಗ್ಗಿದ ನಂತರ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net