More

    ಮಹಾರಾಷ್ಟ್ರ ಪೊಲೀಸರಿಗೆ 25 ಸಾವಿರ ಫೇಸ್​ ಶೀಲ್ಡ್​ ಕೊಟ್ಟ ಸೋನು ಸೂದ್​

    ಲಾಕ್​ಡೌನ್​ ಶುರುವಾದ ನಂತರ ವಲಸೆ ಕಾರ್ಮಿಕರನ್ನು ತಮ್ಮ ತವರೂರಿಗೆ ತಲುಪಿಸುವುದಕ್ಕೆ ಸಾಕಷ್ಟು ಶ್ರಮ ಪಟ್ಟಿದ್ದ ಸೋನು, ಇದೀಗ ಬಹಳಷ್ಟು ಜನರನ್ನು ತಮ್ಮ ಊರಿಗೆ ಸೇರಿಸಿ ನಿಟ್ಟುಸಿರುಬಿಟ್ಟಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ನ ದೊಡ್ಡ ದೊಡ್ಡ ಹೆಸರುಗಳು ಸುಶಾಂತ್​ ಸಾವನ್ನು ಮುಚ್ಚಿಹಾಕಲು ಯತ್ನಿಸುತ್ತಿವೆ

    ಹಾಗಂತ ಕೆಲಸ ಮುಗಿಯಿತು ಎಂದು ಅವರು ಸುಮ್ಮನೆ ಕುಳಿತಿಲ್ಲ. ತಮ್ಮ ಕೈಲಾದಷ್ಟು ಸಹಾಯವನ್ನು ಅವರು ಮುಂದುವರೆಸಿದ್ದಾರೆ. ಇದೀಗ ಅವರು ಮಹಾರಾಷ್ಟ್ರ ಪೊಲೀಸರಿಗೆ 25 ಸಾವಿರ ಫೇಸ್​ ಶೀಲ್ಡ್​ ಗಳನ್ನು ಕೊಟ್ಟಿದ್ದಾರೆ.

    ಗುರುವಾರ ಮಹಾರಾಷ್ಟ್ರದ ಗೃಹ ಸಚಿವ ಅನಿಲ್​ ದೇಶ್ಮುಖ್​ ಅವರನ್ನು ಭೇಟಿ ಮಾಡಿದ ಸೋನು, ಈ ಕುರಿತು ಮಾತನಾಡಿರುವ ಅವರು, ಅಗತ್ಯವಿರುವ ನೆರವನ್ನು ಕೊಡುವುದಕ್ಕೆ ಸಿದ್ಧ ಎಂದು ಹೇಳಿದ್ದಾರೆ.

    ಸೋನು ಅವರ ಈ ಕೆಲಸಕ್ಕೆ ಖುಷಿಯಾಗಿರುವ ಗೃಹ ಸಚಿವರು, ಸೋನುಗೆ ಥ್ಯಾಂಕ್ಸ್​ ಹೇಳಿರುವುದಷ್ಟೇ ಅಲ್ಲ, ಅವರ ಜತೆಗಿರುವ ಎರಡು ಫೋಟೋಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಸೋನು, ‘ನನ್ನ ಪೊಲೀಸ್​ ಸಹೋದರರು ಮತ್ತು ಸಹೋದರಿಯರೇ ಈ ಸಂದರ್ಭದಲ್ಲಿ ನಿಜವಾದ ಹೀರೋಗಳು. ಅವರು ಮಾಡುತ್ತಿರುವ ಸೇವೆಗೆ, ನಾನು ಮಾಡುತ್ತಿರುವುದು ಬಹಳ ಕಡಿಮೆಯೇ’ ಎಂದು ಟ್ವೀಟ್​ ಮಾಡಿದ್ದಾರೆ.

    ಇದನ್ನೂ ಓದಿ: ಟಾಲಿವುಡ್​ ವಕೀಲ್ ಸಾಬ್​ಗೆ ನಾಯಕಿ ಸಿಕ್ರು ನೋಡಿ

    ಈ ಮಧ್ಯೆ, ಸೋನು ತಮ್ಮ ಲಾಕ್​ಡೌನ್​ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹಿಡಿದಿಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಲಾಕ್​ಡೌನ್​ ಸಂದರ್ಭದಲ್ಲಿ ಅವರಿಗೆ ಸಾಕಷ್ಟು ಅನುಭವಗಳಾಗಿವೆಯಂತೆ. ಅವನ್ನೆಲ್ಲಾ ನಾಲ್ಕು ಜನರಿಗೆ ತಲುಪಿಸುವ ಉದ್ದೇಶದಿಂದ ಅವರು ಪುಸ್ತಕ ಬರೆಯುವುದಕ್ಕೆ ತಯಾರಿ ನಡೆಸಿದ್ದಾರೆ. ಸದ್ಯಕ್ಕೆ ಅವರಿನ್ನೂ ಈ ಪುಸ್ತಕಕ್ಕೆ ಹೆಸರಿಟ್ಟಿಲ್ಲ. ವರ್ಷದ ಕೊನೆಗೆ ಈ ಪುಸ್ತಕದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವುದಾಗಿ ಅವರು ಹೇಳುತ್ತಾರೆ.

    ಅಲ್ಲು ಅರ್ಜುನ್​ ‘ಸರೈನೋಡು’ ಸಿನಿಮಾ ಸೃಷ್ಟಿಸಿದೆ ದಾಖಲೆ!; ಇದು ಯಾರೂ ಮಾಡದ ರೆಕಾರ್ಡ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts