ಮುಂಬೈ: ಮೇಕಪ್ ಮತ್ತು ಸಿನಿಮಾ ನಟರ ನಡುವಿನ ಬಂಧವನ್ನು ವರ್ಣಿಸಲು ಸಾಧ್ಯವಿಲ್ಲ. ಪಾತ್ರ ಮತ್ತು ಚಿತ್ರಕ್ಕೆ ನ್ಯಾಯ ಮಾಡಲು, ನಟರು ಸಾಕಷ್ಟು ಮೇಕಪ್ ಹಾಕಬೇಕು. ಆದರೆ ಕೆಲವೊಮ್ಮೆ ಈ ಮೇಕಪ್ ಆರೋಗ್ಯಕ್ಕೆ ಅಪಾಯಕಾರಿ ಆಗುತ್ತೆ. ಹಿಂದಿ ನಟಿ ಯಾನೀ ಭಾರದ್ವಾಜ್ ಅವರಿಗೂ ಅದೆ ಆಗಿದೆ. ಅವರು ಅಮೆಜಾನ್ ಪ್ರೈಮ್ನಲ್ಲಿ ಇತ್ತೀಚಿನ ಭಯಾನಕ ಚಲನಚಿತ್ರ 'ಛೋರಿ'ಯಲ್ಲಿ ಚೋಟಿ ಮಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ ತುಂಬಾ ಭಾಗಗಳಲ್ಲಿ ನಟಿಯ ಪಾತ್ರಕ್ಕೆಂದು ಅವರ ಮುಖವನ್ನು ಪ್ರಾಸ್ಥೆಟಿಕ್ಸ್ ಮೇಕಪ್‌ನಿಂದ ಕವರ್ ಮಾಡಲಾಗಿತ್ತು, ನಟಿ ಯಾನೀ ಅವರ ಲುಕ್, ಮುಖ ಸುಟ್ಟ ಮಹಿಳೆಯಂತೆ ಕಾಣಲು ಪ್ರಾಸ್ಥೆಟಿಕ್ಸ್ ಮೇಕಪ್ ಮಾಡಿದ್ದು, ಅವರನ್ನು ಭಯಾನಕ, ಪ್ರೇತದಂತಹ ನೋಟದಲ್ಲಿ ಕಂಡ ಅಭಿಮಾನಿಗಳು ಸಾಕಷ್ಟು ಪ್ರಶಂಸಿಸಿದರು. ಆದರೆ, ಈ ಪ್ರಾಸ್ಥೆಟಿಕ್ಸ್ ಮೇಕಪ್‌ನಿಂದ ನಟಿ ಅನುಭವಿಸಿದ ನೋವು ಇದೀಗ ಎಲ್ಲರಿಗೆ ಗೊತ್ತಾಗಿದೆ.