ಸುಶಾಂತ್​ ಆತ್ಮದ ಜತೆ ಸ್ಟೀವ್​ ಹಫ್​ ಸಂಪರ್ಕ ಸಾಧಿಸಿದ್ಹೇಗೆ?: ಇಲ್ಲಿದೆ ಕುತೂಹಲಕರ ಸಂಗತಿ!

Steve Huff new
Published on

ನವದೆಹಲಿ: ಯಾರು ಈ ಸ್ಟೀವ್​​ ಹಫ್​? ಈ ಒಂದು ಪ್ರಶ್ನೆ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿದೆ. ಅದಕ್ಕೆ ಕಾರಣವೂ ಇದೆ. ಸ್ಟೀವ್​ ಓರ್ವ ಅಮರಿಕನ್​ ಪ್ಯಾರಾನಾರ್ಮಲ್​ ತಜ್ಞ. ಇತ್ತೀಚೆಗಷ್ಟೇ ನಿಧನರಾದ ಸುಶಾಂತ್​ ಸಿಂಗ್​ ರಜಪೂತ್​ ಆತ್ಮದ ಜತೆಯಲ್ಲಿ ತಾನೂ ಮಾತನಾಡಿದ್ದಾಗಿ ಹೇಳಿದ ಮೇಲಂತೂ ಇವರ ಹೆಸರು ಹೆಚ್ಚು ಚರ್ಚೆಯಲ್ಲಿದೆ.

ಸ್ಟೇವ್​ ಕೆಲಸವೇನು?

ಸ್ಟೀವ್ ವೃತ್ತಿಯಲ್ಲಿ ಪ್ಯಾರಾನಾರ್ಮಲ್​ ಸಂಶೋಧಕ ಮತ್ತು ಫೋಟೋಗ್ರಾಫರ್​ ಸಹ ಆಗಿದ್ದಾರೆ. ಹಫ್​ ಪ್ಯಾರಾನಾರ್ಮಲ್​ ಹೆಸರಿನಲ್ಲಿ ತಮ್ಮದೇ ಯೂಟ್ಯೂಬ್​ ಚಾನೆಲ್​ ಹೊಂದಿದ್ದಾರೆ. ಸತ್ತವರ ಆತ್ಮದ ಜತೆ ಸಂಪರ್ಕ ಸಾಧಿಸುವ ಶಕ್ತಿಯುತ ಸಾಧನವನ್ನು ಸಂಶೋಧಿಸಿದ್ದೇನೆಂದು ತಮ್ಮ ಚಾನೆಲ್​ ಮೂಲಕವೇ ಸ್ಟೇವ್​ ಹೇಳಿಕೊಂಡಿದ್ದಾರೆ. ಅವರ ಸಂಶೋಧನಾ ಸಾಧನವನ್ನು "ದಿ ಪೋರ್ಟಲ್​" ಮತ್ತು "ವಂಡರ್​ ಬಾಕ್ಸ್​" ಎಂದು ಕರೆಯಲಾಗುತ್ತದೆ. ಇದರ ಮೂಲಕವೇ ಆತ್ಮಗಳ ಜತೆ ಸಂಪರ್ಕ ಸಾಧಿಸಬಹುದು ಎನ್ನುತ್ತಾರೆ ಸ್ಟೀವ್​.

ಇದೆಲ್ಲಾ ಹೇಗೆ ಪ್ರಾರಂಭವಾಯಿತು?

ಸುಮಾರು ಎಂಟು ವರ್ಷಗಳಿಗಿಂತ ಹೆಚ್ಚು ಸಮಯದಿಂದಲೂ ಸ್ಟೀವ್, ಪ್ಯಾರಾನಾರ್ಮಲ್​ ಜಗತ್ತಿನೊಂದಿಗೆ ಸಂಪರ್ಕ ಸಾಧಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಈ ಕ್ಷೇತ್ರದಲ್ಲಿ ತಮಗೆ ಹೇಗೆ ಆಸಕ್ತಿ ತೆಳೆಯಿತು ಎಂಬ ಪ್ರಶ್ನೆಗೆ ತಮ್ಮ ಬ್ಲಾಗ್​ನಲ್ಲಿ ಉತ್ತರಿಸಿರುವ ಸ್ಟೀವ್ ಬಾಲ್ಯದಲ್ಲಿ ನಾನು ಹೆಚ್ಚಿನ ಸಮಯವನ್ನು ಊಜಾ ಬೋರ್ಡ್ (ಆತ್ಮಗಳ​ ಬೋರ್ಡ್​) ಜತೆಯಲ್ಲೇ ಕಳೆಯುತ್ತಾ ಆತ್ಮಗಳ ಜತೆ ಸಂಪರ್ಕ ಸಾಧಿಸುತ್ತಿದೆ ಎಂದಿದ್ದಾರೆ.

ಪ್ರೇರಕವಾದ ಘಟನೆ

ಹೀಗೆ 2000ನೇ ಇಸವಿಯಲ್ಲಿ ನಮ್ಮ ತಂದೆ ತೀರಿ ಹೋದಾಗ ಅದೇ ದಿನ ರಾತ್ರಿ ನಮ್ಮ ಮನೆಯ ಬಾಗಿಲನ್ನು ಬಡಿಯುವ ಶಬ್ದ ಕೇಳಿದೆ ಮತ್ತು ನಮ್ಮ ಮನೆಯ ಬಾತ್​ರೂಮಿನ ನೀರಿನ ನಲ್ಲಿಯಲ್ಲಿ ಮಧ್ಯರಾತ್ರಿಯಲ್ಲಿ ಸ್ಫೋಟವೊಂದು ಸಂಭವಿಸಿತು. ಅಲ್ಲದೆ, ಮನೆಯ ಫೋನ್​ನಲ್ಲಿ ವಿಚಿತ್ರ ಧ್ವನಿಯನ್ನು ಕೇಳಿದೆ. ಆ ರಾತ್ರಿ ನಾನು ಮನೆಯನ್ನು ಬಿಟ್ಟು ನಮ್ಮ ಸಹೋದರಿ ಮನೆಗೆ ತೆರಳಿದೆ. ಪ್ಯಾರಾನಾರ್ಮಲ್​ ಜಗತ್ತಿನೊಂದಿಗಿನ ನನಗಾದ ಮೊದಲ ಅನುಭವ ಇದೇ ಆಗಿತ್ತು. ಈ ಎಲ್ಲದರ ಬಗ್ಗೆ ನನ್ನ ಇಡೀ ಜೀವನದ ಕುತೂಹಲವನ್ನು ನೆಟ್ಟಿದೆ. ಸಾವಿಗೀಡಾದ ರಾತ್ರಿ ನನ್ನ ತಂದೆ ನಮ್ಮ ಮನೆಯಲ್ಲೇ ಇದ್ದರು ಎಂದು ನನಗೆ ಭಾಸವಾಯಿತು. ಹೀಗಾಗಿ ಆತ್ಮಗಳ ಜತೆ ಸಂಪರ್ಕ ಸಾಧಿಸುವ ಹಾದಿಯಲ್ಲೇ ಮುನ್ನುಗ್ಗು ಎಂದು ನನಗೆ ಹೇಳಿದಂತಾಯಿತು. ಮನೆ ಬಿಟ್ಟು ಹೋದ 24 ಗಂಟೆಯಲ್ಲೇ ನಾನು ನಮ್ಮ ಮನೆಗೆ ಮರಳಿದೆ ಎಂದು ಸ್ಟೀವ್​ ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

ಸುಶಾಂತ್​ ಆತ್ಮದ ಜತೆ ಮಾತು

ಈ ಹಿಂದೆ ಮೈಕಲ್​ ಜಾಕ್ಸನ್​ ಆತ್ಮದ ಜತೆ ಮಾತನಾಡಿದ್ದಾಗಿ ಪ್ರಖ್ಯಾತಿ ಗಳಿಸಿದ್ದ ಸ್ಟೀವ್​ಗೆ ಸುಶಾಂತ್​ ಆತ್ಮದ ಜತೆ ಮಾತನಾಡುವಂತೆ ಅಭಿಮಾನಿಗಳು ಸಾಕಷ್ಟು ಮನವಿಗಳನ್ನು ಮಾಡಿಕೊಂಡಿದ್ದರು. ಇದಾದ ಒಂದು ವಾರದಲ್ಲೇ ತಮ್ಮ ಯೂಟ್ಯೂಬ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಆದರೆ, ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಇನ್ನು ಪ್ರಶ್ನೆಯಾಗಿಯೇ ಉಳಿದಿದೆ. ಸುಶಾಂತ್​ ಆತ್ಮದ ಜತೆ ಸ್ಟೀವ್​ ಏನು ಮಾತನಾಡಿದ್ದರು ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಗಳು ಮೇಲೆ ಕ್ಲಿಕ್ಕಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net