More

    VIDEO: ಸುಶಾಂತ್​ ಆತ್ಮದ ಜತೆ ಮಾತನಾಡಿ, ಸಾವಿನ ಹಿನ್ನೆಲೆ ತಿಳಿದುಕೊಂಡ ಪ್ಯಾರಾನಾರ್ಮಲ್​ ತಜ್ಞ!!

    ನಿಜಕ್ಕೂ ಇದೂ ಭಯಬೀಳಿಸುವ ವಿಚಾರ. ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಸಾವನ್ನಪ್ಪಿ ತಿಂಗಳ ಮೇಲಾಯಿತು. ಇಂದಿಗೂ ಅವರ ಸಾವಿನ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಪೊಲೀಸ್ ಇಲಾಖೆ ಸಹ 30ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ಮಾಡಿ ಮಾಹಿತಿ ಕಲೆ ಹಾಕುತ್ತಿದೆ. ಇದೀಗ ಇದೇ ಸಾವಿನ ಬೆನ್ನತ್ತಿದ ವಿದೇಶಿಗನೊಬ್ಬ ಅಚ್ಚರಿಯ ಸುದ್ದಿ ನೀಡಿ ಎಲ್ಲರಿಗೂ ಶಾಕ್​ ನೀಡಿದ್ದಾರೆ.

    ಇದನ್ನೂ ಓದಿ: ಸುಶಾಂತ್​ಗೆ ಬಕೆಟ್​ ಹಿಡಿಯುವುದು ಗೊತ್ತಿರಲಿಲ್ಲ … ಅದಕ್ಕೆ ಹೀಗಾಯ್ತು ಅಂತಾರೆ ಕಂಗನಾ

    ಹೌದು, ವಿದೇಶಿ ಪ್ಯಾರಾನಾರ್ಮಲ್​ ತಜ್ಞ ಸ್ಟೇವ್​ ಹಫ್​ ಎಂಬುವವರು ಸುಶಾಂತ್​ ಸಿಂಗ್ ಜತೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಸುಶಾಂತ್​ ಸಿಂಗ್​ ಜತೆ ಮಾತನಾಡಿದ ವಿಡಿಯೋವನ್ನು ಸಾಕ್ಷಿ ಸಮೇತ ಯೂಟ್ಯೂಬ್​ನಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಆ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದು, ಕುತೂಹಲಕ್ಕೆ ಕಾರಣವಾಗಿದೆ.

    ಹಾಗಾದರೆ, ಸುಶಾಂತ್​ ಜತೆ ಸ್ಟೇವ್​ ಮಾತನಾಡಿದ್ದಾದರೂ ಏನು? ಒಟ್ಟು ಎರಡು ವಿಡಿಯೋಗಳಲ್ಲಿ ಸುಶಾಂತ್​ ಮಾತನಾಡಿರುವ ಧ್ವನಿ ಇದೆ. ಸ್ಟೇವ್​ ಕೇಳಿದ ಪ್ರಶ್ನೆಗಳಿಗೆ ಸುಶಾಂತ್​ ಉತ್ತರಿಸುತ್ತ ಹೋಗಿದ್ದಾರೆ. ‘ಸುಶಾಂತ್​ ನೀವೀಗ ಬೆಳಕಿನಲ್ಲಿದ್ದೀರಾ? ಎಂದಾಗ ಸ್ಟೇವ್ ನಾನೀಗ ಬೆಳಕನ್ನು ಪಡೆದುಕೊಳ್ಳುತ್ತಿದ್ದೇನೆ.. ಎಂದಿದ್ದಾರೆ. ಆದರೆ, ಸುಶಾಂತ್​ ಅವರ ಆ ಹೇಳಿಕೆಯನ್ನು ಅಭಿಮಾನಿಗಳು ‘ಸ್ಟೇವ್​ ನಾನು ಕೊಲೆಯಾಗಿದ್ದೇನೆ..’ ಎಂದು ಅರ್ಥೈಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಹಲವು ವಿಚಾರಗಳನ್ನೂ ಇಬ್ಬರೂ  ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋಗಳು ಇಲ್ಲಿವೆ.

    ಕಳೆದ ಹಲವು ವರ್ಷಗಳಿಂದ ಪ್ಯಾರಾನಾರ್ಮಲ್​ ಆ್ಯಕ್ಟಿವಿಟಿಯಲ್ಲಿ ತೊಡಗಿಸಿಕೊಂಡಿರುವ ಸ್ಟೇವ್​, ಈ ಹಿಂದೆ ಪಾಪ್​ ಲೋಕದ ತಾರೆ ಮೈಕಲ್​ ಜಾಕ್ಸನ್​ ಜತೆಗೆ ಮಾತನಾಡಿದ್ದರು. ಇದೀಗ ಮೊದಲ ಬಾರಿ ಭಾರತೀಯ ನಟನ ಸಾವಿನ ಬಗ್ಗೆ ತಿಳಿದುಕೊಳ್ಳಲು ಸುಶಾಂತ್​ ಜತೆ ಮಾತನಾಡಿದ್ದಾರೆ. ಮೂಲತಃ ಯೂಟ್ಯುಬರ್​ ಅಗಿರುವ ಸ್ಟೇವ್​ಗೆ ಭಾರತೀಯರಿಂದ ಸಾವಿರಾರು ಬೇಡಿಕೆ ಬಂದಿದ್ದರ ಹಿನ್ನೆಲೆಯಲ್ಲಿ ಸುಶಾಂತ್​ ಜತೆ ಮಾತನಾಡಿದ್ದಾರೆ.

    ಆದರೆ, ಈ ವಿಡಿಯೋ ಎಷ್ಟರ ಮಟ್ಟಿಗೆ ಸತ್ಯ ಮತ್ತು ಎಷ್ಟರ ಮಟ್ಟಿಗೆ ಸುಳ್ಳು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ವೈದ್ಯಲೋಕಕ್ಕೂ ಸುಶಾಂತ್​ ಪ್ರಕರಣ ತಲೆನೋವಾಗಿದ್ದು, ತನಿಖೆ ನಡೆಸಿದ್ದಾರೆ. (ಏಜೆನ್ಸೀಸ್​)

    ಕರೊನಾ ಗೆದ್ದ ಅನುಪಮ್​ ಖೇರ್​ ಕುಟುಂಬ; ಆಸ್ಪತ್ರೆಯಿಂದ ಎಲ್ಲರೂ ಡಿಸ್ಚಾರ್ಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts