VIDEO: ಮಾತನಾಡುತ್ತಿದೆಯಾ ಚಿರಂಜೀವಿ ಸರ್ಜಾ ಆತ್ಮ!?; ಚಿರು ಜತೆಗಿನ ವಿದೇಶಿಗನ ಸಂಭಾಷಣೆ ಇಲ್ಲಿದೆ!

collage (6)
Published on

ಇದು ಸತ್ಯವಾ ಅಥವಾ ಸುಳ್ಳಾ ಎಂಬುದೇ ಗೊಂದಲ...

ಇತ್ತೀಚೆಗಷ್ಟೇ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮದ ಜತೆಗೆ ವಿದೇಶಿ ಪ್ಯಾರಾನಾರ್ಮಲ್​ ತಜ್ಞ ಸ್ಟೇವ್​ ಹಫ್​ ಮಾತನಾಡಿ, ಭಾರತೀಯರನ್ನು ಕುತೂಹಲಕ್ಕೆ ತಳ್ಳಿದ್ದ. ಆ ವಿಡಿಯೋ ಅಪ್​ಲೋಡ್​ ಆದ ಕೆಲವೇ ಗಂಟೆಗಳಲ್ಲಿ ವಿಲಿಯನ್​​ಗಟ್ಟಲೇ ವೀಕ್ಷಣೆ ಪಡೆದು, ಹಲವು ಬಗೆಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿತ್ತು. ಇದೀಗ ಜೂನ್ 7ರಂದು ಕಾರ್ಡಿಯಾಕ್​ ಅರೆಸ್ಟ್​​ನಿಂದಾಗಿ ಸಾವನ್ನಪ್ಪಿದ ಸ್ಯಾಂಡಲ್​ವುಡ್​ ನಟ ಚಿರಂಜೀವಿ ಸರ್ಜಾ ಅವರ ಆತ್ಮದ ಜತೆ ಮಾತನಾಡಿದ ವಿಡಿಯೋವೊಂದು ಸದ್ಯ ಸಂಚಲನ ಸೃಷ್ಟಿಸಿದೆ! ಆದರೆ, ಇದೆಷ್ಟರ ಮಟ್ಟಿಗೆ ನಿಜ ಎಂಬುದೂ ಗೊಂದಲ ಸೃಷ್ಟಿಸಿದೆ.

ಚಾರ್ಲಿ ಚಿಟ್ಟೆನಡೆನ್​ ಪ್ಯಾರಾನಾರ್ಮಲ್​ ಯೂಟ್ಯೂಬ್​ ಚಾನೆಲ್​ನಲ್ಲಿ ಕಳೆದ ಒಂದು ವಾರದ ಹಿಂದೆ ಚಿರಂಜೀವಿ ಸರ್ಜಾ ಅವರ ಸಂಭಾಷಣೆಯ ವಿಡಿಯೋ ಅಪ್​ಲೋಡ್​ ಮಾಡಲಾಗಿದೆ. ‘ಚಿರಂಜೀವಿ ಸರ್ಜಾ ಸೆಲೆಬ್ರಿಟಿ ಘೋಸ್ಟ್ ಬಾಕ್ಸ್ ಇಂಟರ್​ವ್ಯೂವ್​ ಇವಿಪಿ’ ಎಂಬ ಶೀರ್ಷಿಕೆಯನ್ನೂ ನೀಡಲಾಗಿದೆ.

ವಿಡಿಯೋದಲ್ಲಿ ಪ್ಯಾರಾನಾರ್ಮಲ್​ ತಜ್ಞ ಚಿರಂಜೀವಿಯನ್ನು ಮಾತನಾಡಲು ಯತ್ನಿಸಿದ್ದಾರೆ. ಆರಂಭದಲ್ಲಿ ಚಿರು ಅವರ ಹುಟ್ಟಿದ ದಿನ ಮತ್ತು ವರ್ಷವನ್ನು ಹೇಳಿ ಬಳಿಕ ಅವರ ಸಾವಿನ ದಿನಾಂಕವನ್ನು ಹೇಳಿ ಮಾತು ಆರಂಭಿಸಿದ್ದಾರೆ. ಅಚ್ಚರಿ ವಿಚಾರ ಏನೆಂದರೆ, 3 ನಿಮಿಷ 54 ಸೆಕೆಂಡ್​ನ ವಿಡಿಯೋದಲ್ಲಿ ಎಲ್ಲಿಯೂ ಚಿರು ಅವರ ಧ್ವನಿಯಾಗಲಿ, ಸನ್ನಿಯಾಗಲಿ ಯಾವುದೂ ಕೇಳಿಲ್ಲ. ಅಲ್ಲಲ್ಲಿ ಬೀಪ್​ ರೀತಿಯ ಶಬ್ದಗಳನ್ನು ಬಳಸಲಾಗಿದೆ. ಆದರೆ, ಪ್ಯಾರಾನಾರ್ಮಲ್​ ತಜ್ಞನ ಪ್ರಕಾರ ಆ ಬಿಪ್​ ಮತ್ತು ಅಲ್ಲಲ್ಲಿ ಆಡಿಯೋ ಡಿಸ್ಟರ್ಬ್​ ಆಗುವುದೇ ಅವರ ಸನ್ನೆ ಎಂದು ಹೇಳುತ್ತಿದ್ದಾರೆ.

ತಜ್ಞ ಚಾರ್ಲಿ ಈಗಾಗಲೇ ಸಾಕಷ್ಟು ಆತ್ಮಗಳ ಜತೆ ಮಾತನಾಡಿರುವ ವಿಡಿಯೋಗಳನ್ನು ಯೂಟ್ಯೂಬ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಸ್ವಾತಂತ್ರ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ಸೌತ್​ ಇಂಡಿಯನ್ ನಟಿ ಸಿಲ್ಕ್​ ಸ್ಮಿತಾ ಅವರ ಆತ್ಮಗಳ ಜತೆ ಮಾತನಾಡಿದ ವಿಡಿಯೋಗಳನ್ನೂ ಚಾರ್ಲಿ ಶೇರ್​ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net